'ಸಿದ್ದರಾಮಯ್ಯನವರು ನಿಜವಾದ ಬಡವರ ಬಂಧು'

By Kannadaprabha News  |  First Published Aug 11, 2021, 12:36 PM IST

*  ಸಿದ್ದರಾಮಯ್ಯನವರ ಕಾಲದ ಅಭಿವೃದ್ಧಿ ಪರ್ವ ಕೈಪಿಡಿ ಬಿಡುಗಡೆ
*  ಇಂದಿರಾ ಕ್ಯಾಂಟೀನ್‌ ಹೆಸರನ್ನು ಬದಲಾಯಿಸಲು ಮುಂದಾದ ಬಿಜೆಪಿ ಸರ್ಕಾರ
*  ಜನರ ಮರಳು ಮಾಡಲು ಹೊರಟಿರುವ ಬಿಜೆಪಿ


ಕಾರಟಗಿ(ಆ.11):  ರಾಜ್ಯದಲ್ಲಿ ಬಡವರಿಗೆ, ದೀನ ದಲಿತರಿಗೆ ಅನುಕೂಲವಾಗುವಂಥ ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್‌ದಂಥ ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಜವಾದ ಬಡವರ ಬಂಧುವಾಗಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ್‌ ತಂಗಡಗಿ ಹೇಳಿದ್ದಾರೆ. 

ಇಲ್ಲಿನ ತಮ್ಮ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ‘ಅಭಿವೃದ್ಧಿ ಪರ್ವ’ ಕೈಪಿಡಿ ಮತ್ತು ಕರಪತ್ರವನ್ನು ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದರು.
ಅನ್ನಭಾಗ್ಯ ಯೋಜನೆಯಲ್ಲಿ ಬಿಜೆಪಿ ಸರಕಾರ ಅಕ್ಕಿ ಪೂರೈಕೆ ಮಾಡಲು ಆಗದೆ ಕಡಿಮೆ ರೇಷನ್‌ ನೀಡಲು ಮುಂದಾಗಿದೆ. ಇನ್ನು ಇಂದಿರಾ ಕ್ಯಾಂಟೀನ್‌ ಹೆಸರನ್ನು ಬದಲಾಯಿಸಲು ಮುಂದಾಗಿದೆ. ಬೇಕಾದರೆ ಬಿಜೆಪಿ ಸರ್ಕಾರ ಇಂಥ ಜನಪರ ಯೋಜನೆಗಳನ್ನು ಹೊಸದಾಗಿ ತಾವು ಬೇರೆ ಪ್ರಾರಂಭಿಸಿ ತಮಗೆ ಬೇಕಾದ ಹೆಸರನ್ನು ಇಟ್ಟುಕೊಳ್ಳಲಿ. ಅದನ್ನು ಬಿಟ್ಟು ಬೇರೆಯವರು ಹೆತ್ತ ಮಗುವಿನ ಮೇಲೆ ಯಾಕೆ ಇಂಥ ಅಕ್ಕರೆ ಎಂದು ವ್ಯಂಗ್ಯವಾಡಿದರು.

Tap to resize

Latest Videos

ಬಿಜೆಪಿ ಕಚೇರಿಗಳಾದ ಪೊಲೀಸ್‌ ಸ್ಟೇಷನ್‌: ಶಿವರಾಜ್‌ ತಂಗಡಗಿ

ಅಭಿವೃದ್ಧಿ ಕೆಲಸ ಮಾಡಲು ಆಗದ ಬಿಜೆಪಿ ಸರ್ಕಾರ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನು ಹೆಸರು ಬದಲಾಯಿಸುವ ಮೂಲಕ ಜನರ ಮರಳು ಮಾಡಲು ಹೊರಟಿದೆ. ಇದಕ್ಕೆ ಕನಕಗಿರಿ ಕ್ಷೇತ್ರ ಸಹ ಹೊರತಲ್ಲ ಎಂದು ವಿಷಾಧಿಸಿದರು.

ಯುವ ಕಾಂಗ್ರೆಸ್‌ನ ಆರ್‌.ಕೆ. ಅಯ್ಯಪ್ಪ ಮಾತನಾಡಿದರು. ಈ ಸಮಯದಲ್ಲಿ ಮುಖಂಡರಾದ ಶರಣೇಗೌಡ ಪೊ.ಪಾಟೀಲ್‌, ಶೇಖರಗೌಡ ಪಾಟೀಲ್‌ ಕನಕಗಿರಿ, ಜಿ. ಯಂಕನಗೌಡ, ಬಾಪುಗೌಡ ಹುಳ್ಕಿಹಾಳ, ವಿಜಯಕುಮಾರ್‌ ಕೋಲ್ಕಾರ್‌, ಅಶೋಕ ಪಾಟೀಲ್‌, ಶರಣಪ್ಪ ಪರಕಿ, ಬಸವರಾಜ ಅರಳಿ, ರಮೆಶ ಕೋಟ್ಯಾಳ, ಲಿಂಗೇಶ ನಾಯಕ ಚೆಳ್ಳೂರು, ಭೀಮರಾಜ ನಾಯಕ ಸೇರಿದಂತೆ ಇನ್ನಿತರರು ಇದ್ದರು.
 

click me!