ಮೈಸೂರು : ಆರ್ಥಿಕತೆ ಸುಧಾರಿಸಲು ವಾರಾಂತ್ಯದ ಕರ್ಫ್ಯೂ ತೆಗೆಯಲು ಡೀಸಿಗೆ ಮನವಿ

By Kannadaprabha News  |  First Published Aug 11, 2021, 12:07 PM IST
  • ಮೈಸೂರು ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವಂತೆ ಮನವಿ
  •  ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮನವಿ

ಮೈಸೂರು (ಆ.11):  ಮೈಸೂರು ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷ ಸುಧಾಕರ್‌ ಎಸ್‌. ಶೆಟ್ಟಿ ಮನವಿ ಮಾಡಿದ್ದಾರೆ.

ಈ ಸಂಬಂಧ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಅವರಿಗೆ ಪತ್ರ ಬರೆದಿರುವ ಅವರು, ಮೈಸೂರು ನಗರವು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದೀಗ ವಾರದಲ್ಲಿ ಎರಡು ದಿನ ಅಂದರೆ ಶನಿವಾರ ಮತ್ತು ಭಾನುವಾರ ಕರ್ಫ್ಯೂ ಘೋಷಣೆಯಾಗಿರುವುದರಿಂದ ವ್ಯಾಪಾರಸ್ಥರು ಇನ್ನಷ್ಟುಸಂಕಷ್ಟಕ್ಕೆ ಒಳಗಾಗಿದ್ದಾರೆ.

Latest Videos

undefined

ಕೇರಳದಿಂದ ಬರುವವರಿಗೆ ಕೋವಿಡ್‌ ನೆಗೆಟಿವ್‌ ರಿಪೋರ್ಟ್ ಇದ್ದರಷ್ಟೇ ಪ್ರವೇಶ

 ಈ ಸಂಕಷ್ಟದಲ್ಲಿ ಕೇವಲ ವ್ಯಾಪಾರಸ್ಥರಲ್ಲದೆ ರೈತಾಪಿ ವರ್ಗದವರು ತಾವು ಬೆಳೆಯುವ ತರಕಾರಿ, ಹಣ್ಣು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ತಲುಪಿಸಲಾಗದೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಆರ್ಥಿಕ ವ್ಯವಸ್ಥೆಯು ಸಹ ಕುಂಠಿತವಾಗುವುದರ ಜೊತೆಗೆ ಬಹಳ ಸಮಸ್ಯೆಗಳು ಎದುರಾಗುತ್ತವೆ ಎಂದು ತಿಳಿಸಿದ್ದಾರೆ.

ಹೀಗಾಗಿ, ಪ್ರತಿ ಶನಿವಾರ ಮತ್ತು ಭಾನುವಾರ ಮೈಸೂರು ನಗರಕ್ಕೆ ಹೊರ ಜಿಲ್ಲೆ ಮತ್ತು ತಾಲೂಕುಗಳಿಂದ ಬರುವ ಹೆದ್ದಾರಿಗಳನ್ನು ಬಂದ್‌ ಮಾಡುವ ಮೂಲಕ ಅಂದರೆ ನಗರ ಪ್ರದೇಶದೊಳಗೆ ಎಂದಿನಂತೆ ವ್ಯಾಪಾರ ವ್ಯವಹಾರವನ್ನು ಮಾಡಲು ಅನುಮತಿ ಕೊಡಬೇಕು ಎಂದು ಅವರು ಕೋರಿದ್ದಾರೆ.

click me!