‘BSY ಸಿಎಂ ಆಗಲು ಮೋದಿ, ಅಮಿತ್ ಶಾ, RSSಗೆ ಇಷ್ಟವಿರಲಿಲ್ಲ’

By Web DeskFirst Published Oct 2, 2019, 7:58 PM IST
Highlights

‘BSY ಸಿಎಂ ಆಗಲು ಮೋದಿ, ಅಮಿತ್ ಶಾ, RSSಗೆ ಇಷ್ಟವಿರಲಿಲ್ಲ/ ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ/ ಸೂಲಿಬೆಲೆ, ಯತ್ನಾಳ್ ಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ನಾಯಕ

ಕೊಪ್ಪಳ[ಅ. 02]  ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ನಿರ್ನಾಮ ಆಗುತ್ತದೆ. ನೀರಿನಲ್ಲಿ‌ ಹುಡುಕಾಟ ಮಾಡಬೇಕಾಗುತ್ತದೆ ಎಂದು  ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಬಿಜೆಪಿಯರೇ ಯಡಿಯೂರಪ್ಪ ಅವರನ್ನು ತುಳಿಯಲು ಆಸೆ ಇಟ್ಟುಕೊಂಡು ಕುಳಿತಿದ್ದಾರೆ. ಯಡಿಯೂರಪ್ಪ ಸಿಎಂ ಆಗಲು, ಮೋದಿ, ಅಮಿತ್ ಶಾ, ಆರ್ ಎಸ್ ಎಸ್ ನವರಿಗೆ ಇಷ್ಟ ಇಲ್ಲ. ಯಡಿಯೂರಪ್ಪ ಅವರನ್ನ ಹರಕೆಯ ಕುರಿ ಮಾಡ್ತಾರೆ. ಯಡಿಯೂರಪ್ಪ ಎರಡೂವರೆ ತಿಂಗಳಲ್ಲಿ ತಂತಿ ಮೇಲೆ ನಡೆಯುತ್ತಿದ್ದೇನೆ ಅಂತಾ ಹೇಳ್ತೀದ್ದಾರೆ.  ವರ್ಷನೂ ದಾಟಲಿಕ್ಕಿಲ್ಲ, ತಂತಿ ಮೇಲಿಂದ ಬೀಳ್ತಾರೋ..ಜಿಗಿಯುತ್ತಾರೋ ಗೊತ್ತಿಲ್ಲ.

ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇಲ್ಲ. ನಾವು ಯಾರೂ  ಬಿಜೆಪಿಯನ್ನು ಮುಗಿಸುವ ಅವಶ್ಯಕತೆ ಇಲ್ಲ. ಬಿಜೆಪಿ ಪಕ್ಷವನ್ನು ಬಿಜೆಪಿಯವರೇ ಮುಗಿಸುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಚಕ್ರವರ್ತಿ ಸೂಲಿಬೆಲೆ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಅಭಿನಂದನೆ ಸಲ್ಲಿಸುತ್ತೇವೆ. ಈಗಲಾದರೂ ನಿಮ್ಮ ಕಣ್ಣಿಗೆ ಬಂದಿದ್ದ ಪೊರೆ ಹೋಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಂದಲೇ ಬಿಜೆಪಿ ಸರ್ಕಾರ ಬಂತು

ಜಾತಿಗಣತಿಯನ್ನು ತಿರಸ್ಕಾರ ಮಾಡುವುದಾಗಿ ಸಿಎಂ  ಹೇಳಿದ್ದಾರೆ. ನಾವು ಯಾವುದೇ ಜಾತಿಯನ್ನು ಎತ್ತಿಕಟ್ಟಲು ಮಾಡಿಸಿಲ್ಲ. ಹಾಗಾಗಿ ಗಣತಿಯನ್ನು ಇದನ್ನು ತಿರಸ್ಕಾರ ಮಾಡಬಾರದು. ಮಾಡಿದರೆ ರಾಜ್ಯದ ಜನತೆ ಕ್ಷಮಿಸುವುದಿಲ್ಲ. ತಿರಸ್ಕಾರ ಮಾಡುವ ಮೊದಲು ಇನ್ನೊಮ್ಮೆ ಪರಿಶೀಲಿಸಿ. ಎಲ್ಲಾ ಮುಂದುವರಿದ, ಹಿಂದುಳಿದ ಸಮಾಜದಲ್ಲಿ‌ ತುಳಿತಕ್ಕೆ ಒಳಗಾದವರು ಇದ್ದಾರೆ. ಜಾತಿಗಣತಿಯಲ್ಲಿ ಎಲ್ಲಾ ಮಾಹಿತಿ ಇದೆ. ಬಿಜೆಪಿಯವರದ್ದು ಸಮಪಾಲು, ಸಮಬಾಳು ಬರೀ ಮಾತಿಗೆ ಸೀಮಿತವಾಗಿದ್ದು ಕಾರ್ಯರೂಪದಲ್ಲಿ ಇಲ್ಲ ಎಂದರು.

ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿ ಜಾತಿಗಣತಿಯನ್ನು ಘೋಷಣೆ ಮಾಡುವರಿದ್ದೇವು.ಅಷ್ಟರೊಳಗೆ ನಮ್ಮ ಸರಕಾರದ ಅವಧಿ ಮುಗಿಯಿತು. ಈಗ ಇವರು ಘೋಷಣೆ ಮಾಡಲಿ, ನಾವೇ ಮಾಡಿದ್ದು ಅಂತ ಒಪ್ಪಿಕೊಳ್ಳುತ್ತೇವೆ ಅದರಲ್ಲೇಕೆ ಅನುಮಾನ ಎಂದು ಪ್ರಶ್ನೆ ಮಾಡಿದರು.

 

click me!