ಕೊಪ್ಪಳ (ಸೆ.07): ರಾಜ್ಯಾದ್ಯಂತ ನಡೆದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಇವಿಎಂ ಮೂಲಕವೇ ಬಿಜೆಪಿ ಗೆಲುವು ಸಾಧಿಸಿದೆ. ಗೆಲ್ಲುವುದಕ್ಕಾಗಿ ಅವರು ಏನು ಮಾಡುವುದಕ್ಕೆ ಹಿಂಜರಿಯುವುದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.
ಕೊಪ್ಪಳದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು.
ಇವಿಎಂ ಬಗ್ಗೆ ನಾನು ಸಾಕಷ್ಟುಬಾರಿ ಅನುಮಾನ ವ್ಯಕ್ತಪಡಿಸಿದ್ದೇನೆ. ಈಗಲೂ ನಾನು ಈಗ ನಡೆದ ಚುನಾವಣೆಯ ಫಲಿತಾಂಶ ಬಿಜೆಪಿ ಇವಿಎಂ ಮೂಲಕ ಕೈವಾಡ ಮಾಡಿದೆ ಎಂದಿದ್ದಾರೆ.
ಸಿದ್ದು ರೆಸಾರ್ಟ್ ಪಾಲಿಟಿಕ್ಸ್, ಡಿಕೆಶಿ ಟ್ಯಾಕ್ಸಿಕ್ಸ್, ನೋ ವರ್ಕೌಟ್! ಸೋತಿದ್ದೆಲ್ಲಿ ಕಾಂಗ್ರೆಸ್.?
ಸಂಸದ ಸಂಗಣ್ಣ ಕರಡಿ ಅವರು ತಪ್ಪು ತಪ್ಪಾಗಿ ಅಂಕಿಸಂಖ್ಯೆಯ ಮಾಹಿತಿ ನೀಡಿದ್ದಾರೆ. ಸಾಲ ತೀರಿಸಿದ್ದಾರೆ ಎನ್ನುವ ಮಾಹಿತಿಯನ್ನು ನೀಡುವ ವೇಳೆಯಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.
ಸಂಗಣ್ಣ ಕರಡಿ ಅವರಿಗೆ ನಿಜವಾಗಿಯೂ ಕಾಳಜಿ ಇದ್ದರೆ ಉತ್ತರ ಕರ್ನಾಟಕ ಸಮಸ್ಯೆಯನ್ನು ಸಂಸತ್ತಿನಲ್ಲಿ ಎಷ್ಟುಬಾರಿ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಕನಕಗಿರಿಯ ಶಾಸಕ ಬಸವರಾಜ ದಢೇಸ್ಗೂರು ಅವರು ಏನೇನೋ ಮಾತನಾಡುತ್ತಾರೆ. ಮಾತಿನ ಮೇಲೆ ಹಿಡಿತ ಇಲ್ಲ ಅವರಿಗೆ. ನಾನು ಸಾವಿರ ಎಕರೆ ಭೂಮಿಯನ್ನು ಹೊಂದಿದ್ದೇನೆ ಎನ್ನುತ್ತಾರೆ, ಕಾನೂನು ಪ್ರಕಾರ ಇಷ್ಟೊಂದು ಭೂಮಿಯನ್ನು ಹೊಂದಲು ಸಾಧ್ಯವೇ? ಈ ಬಗ್ಗೆ ಬೇಕಾದರೆ ತನಿಖೆ ಮಾಡಲಿ ಎಂದರು.
ಇನ್ನು ನಾನು ಕನಕಗಿರಿ ವಿಧಾನಸಭೆ ಕ್ಷೇತ್ರಕ್ಕೆ ಬಂದಾಗ ಏನು ಇರಲಿಲ್ಲ ಎಂದು ಹೇಳಿದ್ದಾರೆ. ಆದರೆ, ನಾನು ಇಲ್ಲಿಗೆ 18 ಲಕ್ಷ ರುಪಾಯಿ ಕಾರಿನಲ್ಲಿ ಬಂದಿದ್ದೇನು ಎನ್ನುವುದು ಗೊತ್ತಿರಲಿ ಎಂದರು.