ಚುನಾವಣೆ ಘೋಷಣೆಗೂ ಮುನ್ನ ಟಿಕೆಟ್‌: ಕಾಂಗ್ರೆಸ್ಸಿನಲ್ಲಿ ಆಕ್ರೋಶ

By Kannadaprabha News  |  First Published Mar 21, 2021, 2:41 PM IST

ನಾಲ್ಕು ಬಾರಿ ಟಿಕೆಟ್‌ ತಂದಿದ್ದೇನೆ. ಚುನಾವಣೆ ದಿನಾಂಕ ಘೋಷಣೆ ಪೂರ್ವದಲ್ಲಿಯೇ ಟಿಕೆಟ್‌ ಘೋಷಣೆ ಮಾಡಿದ್ದು ಇತಿಹಾಸದಲ್ಲೇ ನೋಡಿಲ್ಲ. ಇದು ಜಿಲ್ಲೆಯ ನಾಯಕರ ಗಮನಕ್ಕೂ ಬಂದಿಲ್ಲ. ಜಿಲ್ಲೆಗೆ ಸಂಬಂಧಪಡದ ಇಬ್ಬರು ನಾಯಕರಿಂದ ಈ ಕೆಲಸವಾಗಿದೆ. ಇದಕ್ಕೆ ಮೂಲ ಕಾಂಗ್ರೆಸ್‌ ನಾಯಕರಿಂದ ಹಿಡಿದು ಕಾರ್ಯಕರ್ತರಲ್ಲೂ ಅಸಮಾಧಾನ ಮೂಡಿಸಿದೆ: ಶರಣಪ್ಪ ಸುಣಗಾರ| 


ಸಿಂದಗಿ(ಮಾ.21): ಮತಕ್ಷೇತ್ರದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಟ್ಟರೂ ಗೆಲ್ಲಿಸುತ್ತೇವೆ. ವಲಸಿಗರಿಗೆ ಟಿಕೆಟ್‌ ಕೊಟ್ಟಿರುವುದು ಅದೂ ಚುನಾವಣೆ ದಿನಾಂಕ ಘೋಷಣೆಗೂ ಮುಂಚೆಯೇ ಅಭ್ಯರ್ಥಿ ಘೋಷಿಸಿದ್ದು ಇತಿಹಾಸದಲ್ಲೇ ಮೊದಲು. ಇದು ಕಾರ್ಯಕರ್ತರಲ್ಲಿ ಆಕ್ರೋಶ ತಂದಿದೆ. ಅಲ್ಲದೆ ಹೈಕಮಾಂಡ್‌ ನಿರ್ಧಾರಕ್ಕೆ ತಾಲೂಕಿನ ಮೂಲ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದ್ದಾರೆ.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಉಪಚುನಾವಣೆಯಲ್ಲಿ ಚುನಾವಣೆ ಘೋಷಣೆಗೂ ಮುಂಚೆ ಅಭ್ಯರ್ಥಿಯನ್ನು ಘೋಷಿಸಿರುವುದು ಕಾಂಗ್ರೆಸ್‌ ಪಕ್ಷದ ಇತಿಹಾಸದಲ್ಲಿಯೇ ಮೊದಲ ಬಾರಿ. ಇದಕ್ಕೆ ಅಸಮಾಧಾನ ವ್ಯಕ್ತವಾಗಿದೆ ಎಂದರು.

Latest Videos

undefined

ನಾಲ್ಕು ಬಾರಿ ಟಿಕೆಟ್‌ ತಂದಿದ್ದೇನೆ. ಚುನಾವಣೆ ದಿನಾಂಕ ಘೋಷಣೆ ಪೂರ್ವದಲ್ಲಿಯೇ ಟಿಕೆಟ್‌ ಘೋಷಣೆ ಮಾಡಿದ್ದು ಇತಿಹಾಸದಲ್ಲೇ ನೋಡಿಲ್ಲ. ಇದು ಜಿಲ್ಲೆಯ ನಾಯಕರ ಗಮನಕ್ಕೂ ಬಂದಿಲ್ಲ. ಜಿಲ್ಲೆಗೆ ಸಂಬಂಧಪಡದ ಇಬ್ಬರು ನಾಯಕರಿಂದ ಈ ಕೆಲಸವಾಗಿದೆ. ಇದಕ್ಕೆ ಮೂಲ ಕಾಂಗ್ರೆಸ್‌ ನಾಯಕರಿಂದ ಹಿಡಿದು ಕಾರ್ಯಕರ್ತರಲ್ಲೂ ಅಸಮಾಧಾನ ಮೂಡಿಸಿದೆ. ಹೀಗಾಗಿ ಹೈಕಮಾಂಡ್‌ ತನ್ನ ನಿರ್ಧಾರ ಬದಲಾಯಿಸುವಂತೆ ಒತ್ತಡ ಹೇರಲಾಗುವುದು ಎಂದರು.
ಅಲ್ಪ ಸಂಖ್ಯಾತರ, ಎಸ್ಸಿ, ಎಸ್ಟಿ, ಕೋಲಿ ಕಬ್ಬಲಿಗ, ಹಾಲುಮತ ಸಮಾಜದ ಒಂದೊಂದು ಸಮಿತಿ ಮಾಡಿದ್ದು, ಒಂದೊಂದರಲ್ಲಿ 10 ಜನರು ಇರುತ್ತಾರೆ. ಇವರೆಲ್ಲ ಕೂಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ ಸೇರಿದಂತೆ ಎಲ್ಲರನ್ನೂ ಭೇಟಿಯಾಗಿ, ಕಾಂಗ್ರೆಸ್ಸಿನ ಯಾವುದೇ ಸಮಾಜದ ಮೂಲ ನಾಯಕರಿಗೆ ಟಿಕೆಟ್‌ ಕೊಡಿ ಎಂದು ಒತ್ತಡ ಹಾಕುತ್ತೇವೆ ಎಂದರು.

ವಿಜಯಪುರ: ಗರಿಗೆದರಿದ ಸಿಂದಗಿ ಉಪ ಚುನಾವಣೆ, ಟಿಕೆಟ್‌ಗಾಗಿ ಭಾರೀ ಲಾಬಿ

ಮನಗೂಳಿ ಅವರು ಶಾಸಕರಾಗಿದ್ದರೂ ಪುರಸಭೆ ಚುನಾವಣೆಯಲ್ಲಿ 6 ಸೀಟ್‌ ಗೆದ್ದರೂ ತಾಪಂನಲ್ಲಿ ಕಾಂಗ್ರೆಸ್‌ ಬಹುಮತ ಇದೆ. ಗ್ರಾಪಂ ಚುನಾವಣೆಯಲ್ಲಿ 250 ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. 54 ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು, 120ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಇದನ್ನು ನೋಡಿದರೆ ಜನರ ಒಲವು ಕಾಂಗ್ರೆಸ್‌ ಕಡೆ ಇದೆ. ಪಕ್ಷದಲ್ಲಿ ದುಡಿಯದಿದ್ದರೂ ಸೋಮವಾರ ಮನೆಗೆ ಬಂದು ಮಂಗಳವಾರ ಅಧಿಕಾರ ನಡೆಸಿದಂತಾಗುತ್ತೆ. ಕಾಂಗ್ರೆಸ್ಸಿನಲ್ಲಿ ದುಡಿಯಿರಿ ಟಿಕೆಟ್‌ ಕೇಳಿ ಎಂದು ಹೇಳಿದರು.

ಕಾಂಗ್ರೆಸ್‌ ಹಿರಿಯ ನಾಯಕ ಶರಣಪ್ಪ ವಾರದ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್‌ ಗಟ್ಟಿಯಾಗಿ ಉಳಿಯಲು ಶರಣಪ್ಪ ಸುಣಗಾರ ಕಾರಣ. ಪಕ್ಷಕ್ಕಾಗಿ ದಶಕಗಳ ಕಾಲ ದುಡಿದಿದ್ದಾರೆ. ಹೈಕಮಾಂಡ್‌ ಈಗಿನ ನಿರ್ಧಾರ ಬದಲಿಸಿ ಶರಣಪ್ಪ ಸುಣಗಾರಗೆ ಟಿಕೆಟ್‌ ಕೊಡಬೇಕು ಎಂದು ಒತ್ತಡ ಹಾಕುತ್ತೇವೆ ಎಂದರು. ದಲಿತ ಮುಖಂಡರು, ಅಲ್ಪಸಂಖ್ಯಾತ ಮುಖಂಡರು, ಹಾಲುಮತ ಸಮಾಜದ ಮುಖಂಡರು ಮಾತನಾಡಿ ಹೈಕಮಾಂಡ್‌ ನಿರ್ಧಾರ ನಮಗೆ ಒಪ್ಪಿಗೆ ಇಲ್ಲ ಎಂದರು.
ಎಂ.ಎನ್‌. ಪಾಟೀಲ, ಶಾಂತಗೌಡ ಬಿರಾದಾರ, ಈರಗಂಟೆಪ್ಪ ಮಾಗಣಗೇರಿ, ಎಸ್‌.ಕೆ. ಪೂಜಾರಿ, ಎಸ್‌.ಬಿ. ಪಾಟೀಲ, ಭಾಷಾಸಾಬ ತಾಂಬೋಳಿ, ಮಹಿಬೂಬಸಾಬ ತಾಂಬೋಳಿ, ಶಾರಧಾಬಾವಿ ಬೆಟಗೆರಿ ಅನೇಕರಿದ್ದರು.
 

click me!