'ನೆರೆ ಸಂತ್ರಸ್ತರಿಗೆ ಸ್ಪಂದಿಸಿದ ಮೋದಿಗೆ ರಾಜ್ಯದ ಜನ ಛೀ..ಥೂ...ಅಂತ ಉಗುಳ್ತಾರೆ'

Suvarna News   | Asianet News
Published : Jan 19, 2020, 12:16 PM IST
'ನೆರೆ ಸಂತ್ರಸ್ತರಿಗೆ ಸ್ಪಂದಿಸಿದ ಮೋದಿಗೆ ರಾಜ್ಯದ ಜನ ಛೀ..ಥೂ...ಅಂತ ಉಗುಳ್ತಾರೆ'

ಸಾರಾಂಶ

ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯ ನಿಜವಾದ ಬಣ್ಣ ಬಯಲು| ಬಿಎಸ್‌ವೈ ಬಜೆಟ್ ಅಧಿವೇಶನ ಮುಂದೆ ಹಾಕಿದ್ದು ನೋವಿನ ಸಂಗತಿ| ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಧಿವೇಶನದ ಮಹತ್ವ ಹೋಗಿದೆ| ನಾಲ್ಕು, ಐದು ದಿನ ನಡೆಸಿದರೆ ಸಮಸ್ಯೆ ಚರ್ಚೆ ಮಾಡೋದು ಹೇಗೆ?| ವಿಪಕ್ಷ ಎದುರಿಸುವ ನೈತಿಕ ಸ್ಥೈರ್ಯ ಬಿಜೆಪಿಯವರಿಗಿಲ್ಲ|  

ಬಾಗಲಕೋಟೆ(ಜ.19): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಗ್ಗೆ ಮರುಕ ಅನ್ನಿಸುತ್ತದೆ. ಅವರ ಪರಿಸ್ಥಿತಿ ಸರಿ ಇಲ್ಲ, ದಿಲ್ಲಿ ವರಿಷ್ಠರು ಸಂಪುಟ ರಚನೆಗೆ ಗ್ರೀನ್ ಸಿಗ್ನಲ್‌ ಕೊಡುತ್ತಿಲ್ಲ. ಮಂತ್ರಿ ಮಂಡಲದಲ್ಲಿ 16 ಸ್ಥಾನಗಳು ಖಾಲಿ ಇವೆ. ಬಿಎಸ್‌ವೈ ಮೇಲೆ ಎಲ್ಲಿಲ್ಲದ ಒತ್ತಡ ತರುತ್ತಿದ್ದಾರೆ. ಇದೇ ಕಾರಣಕ್ಕೆ ಮೊನ್ನೆ ಯಡಿಯೂರಪ್ಪ ರಾಜೀನಾಮೆ ಕೊಡಲು ಹಿಂದೇಟು ಹಾಕಲ್ಲ ಅಂದಿದ್ದಾರೆ ಎಂದು ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿರುವ ಶಾಸಕರು ಅಲ್ಲಿ ಬಹಳ ದಿನ ಸಲ್ಲುವುದಿಲ್ಲ. ಕಾಂಗ್ರೆಸ್‌ನಲ್ಲಿ ಸಲ್ಲದವರು ಎಲ್ಲಿಯೂ ಸಲ್ಲಲ್ಲ. ಆಪರೇಷನ್ ಕಮಲಕ್ಕೆ ಬಿಜೆಪಿವರು ನಿಸ್ಸೀಮರಾಗಿದ್ದಾರೆ. ದೇಶದಲ್ಲಿ ರಾಜ್ಯದ ಬಿಜೆಪಿಗರು ಆಪರೇಷನ್ ಕಮಲದಲ್ಲಿ ನಂಬರ್ ಒನ್ ಇದ್ದಾರೆ ಎಂದು ಹೇಳಿದ್ದಾರೆ. 

ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯ ನಿಜವಾದ ಬಣ್ಣ ಬಯಲಾಗುತ್ತದೆ. ಬಿಎಸ್‌ವೈ ಬಜೆಟ್ ಅಧಿವೇಶನ ಮುಂದೆ ಹಾಕಿದ್ದು ನೋವಿನ ಸಂಗತಿಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಧಿವೇಶನದ ಮಹತ್ವ ಹೋಗಿದೆ. ನಾಲ್ಕು, ಐದು ದಿನ ನಡೆಸಿದರೆ ಸಮಸ್ಯೆ ಚರ್ಚೆ ಮಾಡೋದು ಹೇಗೆ. ವಿಪಕ್ಷ ಎದುರಿಸುವ ನೈತಿಕ ಸ್ಥೈರ್ಯ ಅವರಲ್ಲಿಲ್ಲ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಾಂಗ್ರೆಸ್ ಮುಖಂಡರ ಮೇಲೆ ಇಡಿ, ಐಟಿ ದಾಳಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಐಟಿ, ಇಡಿಯಿಂದ ಕಾಂಗ್ರೆಸ್‌ನವರು ಬಿಜೆಪಿಗೆ ಅಂಜುವ ಪ್ರಶ್ನೆಯೇ ಇಲ್ಲ. ಬಲಿಷ್ಠ ಬ್ರಿಟಿಷರಿಗೆ ಅಂಜಿಲ್ಲ, ಕಾಂಗ್ರೆಸ್‌ನವರು ದೇಶದ ಸ್ವಾತಂತ್ರ್ಯಕ್ಕೆ ಪ್ರಾಣ ತೆತ್ತವರಾಗಿದ್ದಾರೆ. ಗುಂಡಿಗೆ ಎದೆಯೊಡ್ಡಿದ್ದೇವೆ, ಗಲ್ಲಿಗೇರುವಾಗ ಒಂದೆ ಮಾತರಂ ಅಂದವರಾಗಿದ್ದಾರೆ. ಬ್ರಿಟಿಷರಿಗೆ ಅಂಜಿಲ್ಲ ಇನ್ನು ಬಿಜೆಪಿಯವರು ಯಾವ ಗಿಡದ ತಪ್ಪಲು ನಮಗೆ ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ, ಅಮಿತ್‌ ಶಾ ಬಗ್ಗೆ ಭಯವೇನು ಇಲ್ಲ. ಆದ್ರೆ, ರಾಜ್ಯ ನೆರೆಗೆ ತತ್ತರಿಸಿದ್ರೂ ಈ ವರೆಗೂ ಏನಾಗಿದೆ ಅಂತ ಮೋದಿ ಅವರು ಕೇಳಿಲ್ಲ. ದೇಶವೇ ಅವರ ಕೈಯಲ್ಲಿ ಇದೆ. ಕರ್ನಾಟಕ ತೊಂದರೆಯಲ್ಲಿದೆ. ಸೂಕ್ತ ಅನುದಾನ ಕೊಡುವಷ್ಟು ಕೇಂದ್ರ ಮನಸ್ಸು ಮಾಡದೆ ಇರೋದು ಖಂಡನಿಯ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಕಲ್ಯಾಣ ಆಗುವ ಕೆಲಸ ಮಾಡಿ ಹೋಗಿ ಅಂತ ನಮ್ಮ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದು ಅವರ ಬಗ್ಗೆ ನಮಗೆ ಭಯ ಅಲ್ಲ, ರಾಜ್ಯದ ಜನರು ಅವರಿಗೆ ಛೀ..ಥೂ.... ಅಂತ ಉಗುಳುತ್ತಾರೆ ಎಂದು ತಿಳಿಸಿದ್ದಾರೆ.
 

PREV
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!