ಸಣ್ಣ ವ್ಯತ್ಯಾಸವಾದರೂ ನಾವು ಸರ್ವನಾಶ ಆಗುತ್ತೇವೆ : ರಮೇಶ್ ಕುಮಾರ್ ವಾರ್ನಿಂಗ್

Kannadaprabha News   | Asianet News
Published : Dec 08, 2020, 03:16 PM IST
ಸಣ್ಣ ವ್ಯತ್ಯಾಸವಾದರೂ ನಾವು ಸರ್ವನಾಶ ಆಗುತ್ತೇವೆ : ರಮೇಶ್ ಕುಮಾರ್ ವಾರ್ನಿಂಗ್

ಸಾರಾಂಶ

ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಎಚ್ಚರಿಕೆ ಸಂದೇಶ ಒಂದನ್ನು ನೀಡಿದ್ದಾರೆ. ಸಣ್ಣ ವ್ಯತ್ಯಾಸ ಆದರೂ ಸರ್ವನಾಶ ಆಗುವುದಾಗಿ ಹೇಳಿದ್ದಾರೆ. 

ಕೋಲಾರ (ಡಿ.08): ದೇಶದಲ್ಲಿ ಪಕ್ಷ ಸಂಕಷ್ಟದಲ್ಲಿದೆ. ಇಂತಹ ಸ್ಥಿತಿಯಲ್ಲಿ  ಪಕ್ಷಕ್ಕೆ ದ್ರೋಹ ಮಾಡಬೇಡಿ ಎಂದು ಶಾಸಕ ರಮೇಶ್ ಕುಮಾರ್ ಹೇಳಿದ್ದಾರೆ. 

ಕಾರ್ಯಕರ್ತರಲ್ಲಿ ಸಣ್ಣ ವ್ಯತ್ಯಾಸವಾದರೂ  ಪಕ್ಷದ ಜತೆ ನಾವೂ ಸರ್ವನಾಶವಾಗುತ್ತೇವೆ. ಹಣ ಅಧಿಕಾರದ ಆಸೆಗೆ ವಿಪಕ್ಷದವರ ಜೊತೆಗೆ ಕೈ ಜೋಡಿಸದೇ  ಪಕ್ಷದ ಪರ ಕೆಲಸ ಮಾಡಿ . ಸಣ್ಣಪುಟ್ಟ ವಿಚಾರ ದೊಡ್ಡದು ಮಾಡಬೇಡಿ ಎಂದು ಶಾಸಕ ರಮೇಶ್ ಕುಮಾರ್ ಹೇಳಿದರು.

ಕಾಂಗ್ರೆಸ್‌ಗೆ ಬಿಗ್ ಶಾಕ್: ರಾಜಕೀಯ ನಿವೃತ್ತಿ ಘೋಷಿಸಿದ ಕರ್ನಾಟಕದ ಕೈ ಹಿರಿಯ ನಾಯಕ ...

ಗ್ರಾಮ ಪಚಾಯಿತಿ ಚುನಾವಣೆ ಸಂಬಂಧ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ.  ದಿನ ಬೆಳಗಾದರೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ ಎಂದರು.

ಗ್ರಾಮ ಪಮಚಾಯತ್‌ಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಪಕ್ಷದ ಋಣ ತೀರಿಸಬೇಕು. ಈಕಾರಣಕ್ಕಾಗಿ  ನಾನೇ ಕಾಳಜಿವಹಿಸಿ ಗ್ರಾ ಪಂ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯನಾಗಿದ್ದೇನೆ ಎಂದರು. 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC