ರಾಹುಲ್‌ಗಾಗಿ ಬಳ್ಳಾರಿಯಲ್ಲಿ ವಿಶೇಷ ಸುದರ್ಶನ ಹೋಮ: ಗಣಿನಾಡಲ್ಲಿ ಭಾರತ್ ಜೋಡೋ ಬೃಹತ್ ಸಮಾವೇಶ

By Suvarna NewsFirst Published Oct 2, 2022, 1:33 PM IST
Highlights

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗಬೇಕೆಂದು ಹಾರೈಸಿ  ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷವಾದ ಹೋಮ ಹವನ ಮಾಡುತ್ತಿದ್ದಾರೆ. ರಾಜ್ಯಾದ್ಯಾಂತ  ಎಲ್ಲೆಡೆ ಪಾದಯಾತ್ರೆ ಮಾಡಲಾಗುತ್ತಿದ್ದು, ಕೇವಲ ಬಳ್ಳಾರಿಯಲ್ಲಿ ಮಾತ್ರ ಬಹಿರಂಗ ಸಮಾವೇಶವನ್ನು ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳ ಲಾಗಿದೆ.

ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ : ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗಬೇಕೆಂದು ಹಾರೈಸಿ  ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷವಾದ ಹೋಮ ಹವನ ಮಾಡುತ್ತಿದ್ದಾರೆ. ರಾಜ್ಯಾದ್ಯಾಂತ  ಎಲ್ಲೆಡೆ ಪಾದಯಾತ್ರೆ ಮಾಡಲಾಗುತ್ತಿದ್ದು, ಕೇವಲ ಬಳ್ಳಾರಿಯಲ್ಲಿ ಮಾತ್ರ ಬಹಿರಂಗ ಸಮಾವೇಶವನ್ನು ಕೆಪಿಸಿಸಿ ವತಿಯಿಂದ ಹಮ್ಮಿಕೊಳ್ಳ ಲಾಗಿದೆ. ಆಕ್ಟೋಬರ್15ರಂದು ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು,ಈ ಸಮಾವೇಶಕ್ಕೆ ಯಾವುದೇ ಅಡ್ಡಿ ಅತಂಕ ಬಾರದೇ ಇರಲಿ ಎಂದು ಮತ್ತು ಸಮಾವೇಶ ಯಶಸ್ವಿಗೆ ಕೆಪಿಸಿಸಿ ಕಾರ್ಯದರ್ಶಿ ಜೆ.ಎಸ್. ಆಂಜನೇಯಲು ನೇತೃತ್ವದಲ್ಲಿ ಸುದರ್ಶನ ಹೋಮ  ಮಾಡಲಾಯಿತು. ಮುನ್ಸಿಪಲ್ ಮೈದಾನದ ಸ್ಥಳ ಶುದ್ಧಿ ಮಾಡೋ ಮೂಲಕ ಕೃಷ್ಣ ಮಠದ ಪುರೋಹಿತರಾದ ನಾಗರಾಜ್ ಅವರ ನೇತೃತ್ವದಲ್ಲಿ ಬೆಳಗ್ಗೆ ಆರು ಗಂಟೆಯಿಂದ ಪ್ರಾರಂಭವಾದ ಹೋಮ ಮೂರು ಗಂಟೆಗಳ ಕಾಲ ನಡೆಯಿತು. ಈ ವಿಶೇಷ ಸುದರ್ಶನ  ಹೋಮದಲ್ಲಿ ಮೇಯರ್ ರಾಮೇಶ್ವರಿ ಸೇರಿದಂತೆ ಹಲವು ಕಾಂಗ್ರೆಸ್‌ನ ಹಿರಿಯ ಮುಖಂಡರು ಭಾಗಿಯಾಗಿದ್ದರು.

ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗಬೇಕು

ಇನ್ನೂ ಬಳ್ಳಾರಿಯಲ್ಲಿ (Bellary) ನಡೆಯಲಿರುವ ಭಾರತ್ ಜೋಡೋ (Bharat jodo) ಸಮಾವೇಶದ ಹಿನ್ನೆಲೆ ಈಗಾಗಲೇ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಹೋಮ ನಡೆದ ಬಳಿಕ ಸ್ಟೇಜ್ ಹಾಕೋ ಕೆಲಸವನ್ನು ಮಾಡಲಾಗುತ್ತದೆ. ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಬಳ್ಳಾರಿಯ ಎಲ್ಲ ನಾಯಕರು ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ಫೂರ್ವಭಾವಿಯಾಗಿ ಪಕ್ಷದ ಸೂಚನೆ ಮೇರೆಗೆ ಸುದರ್ಶನ ಹೋಮವನ್ನು ಮಾಡಲಾಗಿದೆ ಎಂದು ಇದೇ ವೇಳೆ ಆಂಜನೇಯಲು ತಿಳಿಸಿದ್ರು. ಸಮಾವೇಶದಲ್ಲಿ ಐದು ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ. ಮುನ್ಸಿಪಲ್ ಮೈದಾನದಲ್ಲಿ (Munciple ground) ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಪ್ರಮುಖ ಭಾಗದಲ್ಲಿ ಎಲ್ಇಡಿ ಪರದೆಯನ್ನು ಅಳವಡಿಸುವ ಮೂಲಕ ರಾಜ್ಯದ ವಿವಿಧ ಭಾಗದಿಂದ ಬರೋ ಜನರು ನಗರದ  ಯಾವುದೇ ಭಾಗದಲ್ಲಿ ಇದ್ರೂ LED ಪರದೇ ಮೂಲಕ ಕಾರ್ಯಕ್ರಮವನ್ನು ವಿಕ್ಷೀಸಬಹುದಾಗಿದೆ ಎಂದು ಅವರು ಹೇಳಿದ್ರು.  

ಬಳ್ಳಾರಿಯೇ ಕೇಂದ್ರು ಬಿಂದು

ಕಳೆದ ಇಪ್ಪತ್ತು ವರ್ಷದ ಇತಿಹಾಸವನ್ನು ನೋಡುವುದಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಪೂರ್ಣ ಪ್ರಮಾಣದಲ್ಲಿ ಬಂದಾಗಲೆಲ್ಲಾ ಬಳ್ಳಾರಿ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ಈ ಬಾರಿಯೂ ರಾಜ್ಯದಲ್ಲೆಡೆ ಪಾದಯಾತ್ರೆ ಮಾಡಿ ಬಳ್ಳಾರಿಯಲ್ಲಿ ಮಾತ್ರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. 1999ರಲ್ಲಿ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಅಂದು ಎಸ್.ಎಂ ಕೃಷ್ಣ (SM Krishna) ನೇತೃತ್ವದಲ್ಲಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಬಂದಿತ್ತು. ತದ ನಂತರ ಕೆಳಕ್ಕಿಳಿದಿತ್ತು.  

ನಂತರ 2010ರಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ  ಸಿದ್ದರಾಮಯ್ಯ ನೇತೃತ್ವದಲ್ಲಿ ಬಳ್ಳಾರಿಗೆ ಪಾದಯಾತ್ರೆ ಮಾಡಿದ ಪರಿಣಾಮ 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಇದೀಗ ಮುಂಬರುವ ಚುನಾವಣೆಯನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು ಈ ಬಾರಿ ಬಳ್ಳಾರಿಯಲ್ಲಿ ಸಮಾವೇಶ ಮಾಡಲಾಗಿದೆ ಎನ್ನಲಾಗುತ್ತಿದೆ. ಆದರೆ ಅದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
 

click me!