ಕಾಂಗ್ರೆಸಿಗರ ಭೇಟಿಯಾದ ಮಧು : ಅಭಿಪ್ರಾಯ ಸಂಗ್ರಹ

By Kannadaprabha NewsFirst Published Mar 3, 2021, 12:10 PM IST
Highlights

ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದ್ದ ವಿಚಾರವೊಂದರ ಚರ್ಚೆ ಕಾಂಗ್ರೆಸ್  ಪಾಳಯದಲ್ಲಿ ಜೋರಾಗಿದೆ. ಈ ಸಂಬಂಧ ಕೈ ನಾಯಕ ಮಧು ಯಕ್ಷಿ ಗೌಡ ಪಕ್ಷದ ಸದಸ್ಯರ ಭೇಟಿಯಾಗಿ ಚರ್ಚೆ ನಡೆಸಿದ್ದು ವರದಿ ನೀಡಲು ತಯಾರಿ ನಡೆಸಿದ್ದಾರೆ. 

ಮೈಸೂರು (ಮಾ.03):  ಮೈಸೂರು ನಗರ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಮೈತ್ರಿ ವಿಚಾರ ದೆಹಲಿ ತಲುಪಿರುವ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಮಧು ಯಕ್ಷಿಗೌಡ ನಗರಕ್ಕೆ ಭೇಟಿ ನೀಡಿ, ನಗರ ಪಾಲಿಕೆ ಸದಸ್ಯರ ಜೊತೆ ಮಾತುಕತೆ ನಡೆಸಿದರು.

ನಗರದ ಜಲದರ್ಶಿನಿ ಅತಿಥಿಗೃಹಕ್ಕೆ ಆಗಮಿಸಿದ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌, ಮಾಜಿ ಶಾಸಕ ವಾಸು, ಎಂ.ಕೆ. ಸೋಮಶೇಖರ್‌, ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ ಸಾಗತಿಸಿದರು.

ಈ ವೇಳೆ ನಗರ ಪಾಲಿಕೆಯ ಎಲ್ಲಾ ಕಾಂಗ್ರೆಸ್‌ ಸದಸ್ಯರು ಆಗಮಿಸಿ ಮಧು ಯಕ್ಷಿಗೌಡ ಅವರನ್ನು ಭೇಟಿಯಾದರು. ಈ ವೇಳೆ ಎಲ್ಲಾ ಸದಸ್ಯರು ಪ್ರತ್ಯೇಕವಾಗಿ ಭೇಟಿಮಾಡಿ ಮಾತನಾಡುವಂತೆ ಮಧು ಸೂಚಿಸಿದ್ದಾರೆ. ಅದರಂತೆ ಎಲ್ಲಾ ಸದಸ್ಯರೂ ಪ್ರತ್ಯೇಕವಾಗಿ ಭೇಟಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್‌ ತಂತ್ರ, ಇಂದಿನಿಂದ ಸೋತ ಕ್ಷೇತ್ರಗಳಿಗೆ ಸಿದ್ದು ಡಿಕೆಶಿ ಜಂಟಿ‌ ಯಾತ್ರೆ ...  

ಈ ಹಿನ್ನೆಲೆಯಲ್ಲಿ ಮಧು ಯಕ್ಷಿಗೌಡ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಶಾಸಕ ತನ್ವೀರ್‌ಸೇಠ್‌ ಅವರು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಮೈತ್ರಿ ವಿಷಯದಲ್ಲಿನ ಗೊಂದಲದ ಕುರಿತು ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮಧು ಯಕ್ಷಿಗೌಡ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿ ಸಮಾಲೋಚಿಸಿ ಆಂತರಿಕವಾಗಿ ನಡೆದಿರುವ ವಿದ್ಯಮಾನಗಳ ಕುರಿತು ಮಾಹಿತಿ ಪಡೆದರು. ನಂತರ, ಮೈಸೂರು ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ ಅವರಿಂದ ವಿವರಣೆ ಪಡೆದರು. ಇದಾದ ಬಳಿಕ, ನಗರಪಾಲಿಕೆ ಬಿಜೆಪಿ ಸದಸ್ಯರಿಂದ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿದರು. ಮಾಜಿ ಮಹಾಪೌರ ಅಯೂಬ್‌ ಖಾನ್‌, ಆರೀಫ್‌ ಹುಸೇನ್‌ ಅವರು ಜೆಡಿಎಸ್‌ ಜತೆ ಮೈತ್ರಿ, ಮಹಾಪೌರರ ಸ್ಥಾನವನ್ನು ಬಿಟ್ಟುಕೊಡಲು ನಡೆದಿದ್ದ ಮಾತುಕತೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ವಿವರಿಸಿದರು. ನಂತರ, ಒಬ್ಬೊಬ್ಬ ಸದಸ್ಯರು ಮಧು ಯಕ್ಷಿಗೌಡ ಅವರನ್ನು ಭೇಟಿ ಮಾಡಿ ಅಂದಿನ ಘಟನೆ, ಮೈತ್ರಿ ಸಂಬಂಧಿತ ಸಭೆಗಳ ವಿವರ ನೀಡಿದರು

click me!