* ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷದ ಅವಶ್ಯಕತೆ ಇದೆ
* ಸಾಮಾನ್ಯ ಜನರ ಸೇವೆ ಮಾಡೋದು ಕಾಂಗ್ರೆಸ್ ಪಕ್ಷದ ಕೆಲಸ
* ಜೆಡಿಎಸ್ ಬಗ್ಗೆ ನಂಗೆ ಗೊತ್ತಿಲ್ಲ ನಾನೀಗ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ
ಕೊಪ್ಪಳ(ಜು.25): ಭಾರತೀಯ ಜನತಾ ಪಾರ್ಟಿ ಅಂದರೆ, ಬ್ಯುಸಿನೆಸ್ ಜನತಾ ಪಾರ್ಟಿಯಾಗಿದೆ. ಬ್ಯುಸಿನೆಸ್ ಮಾಡಿಕೊಂಡು ವ್ಯವಹಾರ ಮಾಡಿ, ಕುದರದೆ ಹೋದರೆ ಅದು ಬಿದ್ದು ಹೋಗುತ್ತದೆ. ಆ ಹಂತದಲ್ಲಿ ಬಿಜೆಪಿ ಸರಕಾರ ಇದೆ. ಇದು ಕರ್ನಾಟಕದ ದುರಂತವೇ ಆಗಿದೆ ಅಂತ ಮಾಜಿ ಶಾಸಕ ಹೇಳಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವ್ಯವಹಾರಕ್ಕಾಗಿ ಬರ್ತಾರೆ. ಬಂದು ದೇಶ ಲೂಟಿ ಮಾಡಿ ಹಾಳು ಮಾಡಿ ಹೋಗುತ್ತಾರೆ. ಯಡಿಯೂರಪ್ಪರನ್ನ ತಗೆಯೋಕೆ ಕಾರಣ ಏನೆಂದು ಮಾಧ್ಯಮಗಳಿಗೆ ಗೊತ್ತಿದೆ. ಮತ್ಯಾಕೆ ನಾನು ಅದನ್ನ ಉಚ್ಚರಿಸಲಿ ಎಂದ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.
'ಈಶ್ವರಪ್ಪಗೆ ಮುಖ್ಯಮಂತ್ರಿ ಸ್ಥಾನ ನೀಡಿ'
ಕರ್ನಾಟಕಕ್ಕೆ ಪಕ್ಷದ ಅವಶ್ಯಕತೆ ಇದೆ. ಸಾಮಾನ್ಯ ಜನರ ಸೇವೆ ಮಾಡೋದು ಕಾಂಗ್ರೆಸ್ ಪಕ್ಷದ ಕೆಲಸವಾಗಿದೆ. ಯಾವಾಗಾದ್ರೂ ಚುನಾವಣೆ ನಡೀಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಜೆಡಿಎಸ್ ಬಗ್ಗೆ ನಂಗೆ ಗೊತ್ತಿಲ್ಲ ನಾನೀಗ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.