ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಪಿಲ್ಲ. ಇನ್ನೂ ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಲೆಕ್ಕ ಎಂದು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭಾವುಕದ ಮಾತುಗಳನ್ನಾಡಿದ್ದಾರೆ. ರಮೇಶ್ ಜಾರಕಿಹೊಳಿ ಆರೋಪ ಹಾಗೂ ಸಿಡಿ ಬಾಂಬ್ ವಿಚಾರದಿಂದ ಮನನೊಂದಂತೆ ಕಂಡ ಹೆಬ್ಬಾಳ್ಕರ್ ಪರೋಕ್ಷವಾಗಿ ಮಹಿಳೆಯರ ಹೋರಾಟದ ಬದುಕಿನ ಹಾದಿಯಲ್ಲಿ ಅಗ್ನಿಪರೀಕ್ಷೆ ಸಾಮಾನ್ಯ ಎಂಬ ರೀತಿಯಲ್ಲಿ ಮಾತನಾಡಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.5): ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಪಿಲ್ಲ. ಇನ್ನೂ ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಲೆಕ್ಕ ಎಂದು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭಾವುಕದ ಮಾತುಗಳನ್ನಾಡಿದ್ದಾರೆ. ಅವರು ಇಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಯನಾ ಮೋಟಮ್ಮ ಅವರು ಮಹಿಳೆಯರಿಗಾಗಿ ಆಯೋಜಿಸಿದ್ದ ಆಶಾಕಿರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದರು. ರಮೇಶ್ ಜಾರಕಿಹೊಳಿ ಆರೋಪ ಹಾಗೂ ಸಿಡಿ ಬಾಂಬ್ ವಿಚಾರದಿಂದ ಮನನೊಂದಂತೆ ಕಂಡ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ಮಹಿಳೆಯರ ಹೋರಾಟದ ಬದುಕಿನ ಹಾದಿಯಲ್ಲಿ ಅಗ್ನಿಪರೀಕ್ಷೆ ಸಾಮಾನ್ಯ ಎಂಬ ರೀತಿಯಲ್ಲಿ ಮಾತನಾಡಿದರು. ರಾಜಕಾರಣದಲ್ಲಿ ಮಹಿಳೆಯರಿಗೆ ಬಹಳ ಕಷ್ಟ. ನಾವು ಪ್ರತಿ ಹಂತದಲ್ಲೂ ಅಗ್ನಿಪರೀಕ್ಷೆ ಎದುರಿಸಬೇಕು ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಕೆಟ್ಟದ್ದನ್ನು ಕೇಳಲ್ಲ ,ಮಾತಾಡುವುದಿಲ್ಲ ನೋಡಲ್ಲ:
ಮಹಿಳೆ ಅಂದರೆ ಸಂಘರ್ಷ. ಅದು ಮಹಿಳೆಯ ಜೊತೆಯೇ ಬರುತ್ತೆ. ಹುಟ್ಟಿನಿಂದ ಸಾಯೋವರೆಗೂ ಪರೀಕ್ಷೆಗಳನ್ನ ಹೊತ್ತುಕೊಂಡೇ ಇರಬೇಕು. ಎದುರಿಸಬೇಕು. ಗೆಲ್ಲಬೇಕು ಎಂದರು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮುಂದಿನ ಮೂರು ತಿಂಗಳು ಕೆಟ್ಟದ್ದನ್ನು ನೋಡಲ್ಲ, ಕೇಳಲ್ಲ, ಮಾತನಾಡಲ್ಲ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಬಹಳ ಸಹನೆ, ತಾಳ್ಮೆಯಿಂದ ಚುನಾವಣೆ ಎದುರಿಸಬೇಕಾಗಿದೆ ಎಂದರು. ರಮೇಶ್ ಜಾರಕಿಹೊಳಿ ಅವರು ಸಿಡಿ ವಿಚಾರದಲ್ಲಿ ನೀಡಿರುವ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಈ ಸಂಬಂಧ ಈಗಾಗಲೇ ಮಾಧ್ಯಮದವರಿಗೆ ಸ್ಪಷ್ಟನೆಯನ್ನೂ ನೀಡಿದ್ದೇನೆ ಎಂದರು.
Assembly election: ಕಾಂಗ್ರೆಸ್ ಶಾಸಕನ ಸಹೋದರಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ
ಚುನಾವಣೆ ಹಿನ್ನೆಲೆ ಮುಂದಿನ ಮೂರು ತಿಂಗಳು ನಾನು ತಾಳ್ಮೆಯಿಂದ ಕೆಲಸ ಮಾಡಬೇಕಿದೆ. ನನ್ನ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳಿಂದಲೇ ಮತ್ತೆ ಚುನಾವಣೆಯಲ್ಲಿ ಗೆಲ್ಲಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಕಾಂಗ್ರೆಸ್ ಸರಕಾರ ಬಂದಲ್ಲಿ ಮಾತ್ರ ಮಹಿಳೆಯರಿಗೆ ಎಲ್ಲ ರೀತಿಯ ಹಕ್ಕುಗಳು ಸಿಗಲು ಸಾಧ್ಯ. ಮಹಿಳೆಯರ ಪರ ಇರುವ ಪಕ್ಷ ಕಾಂಗ್ರೆಸ್ ಆಗಿದ್ದು, ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಮಹಿಳೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೆಬ್ಬಾಳ್ಕರ್ ಬಗ್ಗೆ ನೀಡಿರುವ ಹೇಳಿಕೆ ಸಂಬಂಧ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ನನ್ನ ಅಣ್ಣನಿದ್ದಂತೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಯಾವ ಮೂಲದದಿಂದ ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರು ಏನು ಹೇಳಿದ್ದಾರೆಂಬುದನ್ನೂ ನಾನು ನೋಡಿಲ್ಲ, ಕೇಳಿಲ್ಲ. ಆದ್ದರಿಂದ ನಾನು ಅದಕ್ಕೆ ಪ್ರತಿಕ್ರಿಯೆಯನ್ನೂ ನೀಡಲ್ಲ ಎಂದರು.
ಬ್ರಾಹ್ಮಣ ಸಿಎಂ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಬ್ಯಾಟಿಂಗ್: ಕುಮಾರಸ್ವಾಮಿಗೆ ಸಿ.ಟಿ.ರವಿ
ನಗಬೇಡಿ ನನಗೆ ನಾಚಿಕೆ ಆಗುತ್ತೆ, ನಾನು ಅಜ್ಜಿ ಆಗುತ್ತಿದ್ದೇನೆ:
ಇದೇ ವೇಳೆ, ವಿನಯ್ ಗುರೂಜಿಯವರ ಬಗ್ಗೆ ಮಾತನಾಡಿದ ಅವರು, ವಿನಯ್ ಗೂರೂಜಿ ಹೇಳಿದಂತೆ ಆಗುತ್ತೆ. ನನ್ನ ಸೊಸೆ ಮನೆಯಲ್ಲಿ ಸೀಮಂತಕ್ಕೆ ಬರುತ್ತೇನೆ ಎಂದಿದ್ದರು. ಆಗ ನಮಗೆ ಏನೂ ಗೊತ್ತಿರಲಿಲ್ಲ. ಅವರು ಹೇಳಿದ ಮೂರೇ ದಿನಕ್ಕೆ ಸೊಸೆ ಕನ್ಸೀವ್ ಆಗಿದ್ದಳು. ನೀವು ನಗಬೇಡಿ. ನನಗೆ ನಾಚಿಕೆ ಆಗುತ್ತೆ. ನಾನು ಅಜ್ಜಿ ಆಗುತ್ತಿದ್ದೇನೆ. ಅದಕ್ಕೆ ಈಗಲೇ ವಿನಯ್ ಗೂರೂಜಿಗೆ ಆಹ್ವಾನ ನೀಡುತ್ತೇನೆ ಎಂದು ವೇದಿಕೆ ಮೇಲೆ ಸೊಸೆ ಸೀಮಂತಕ್ಕೆ ವಿನಯ್ ಗುರೂಜಿಗೆ ಆಹ್ವಾನ ನೀಡಿದ್ದಾರೆ.