ಬಿಜೆಪಿಗೆ ಕಾರ್ಯಕರ್ತರೇ ತಳಹದಿ| ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ| ಬಿಜೆಪಿ ಡಂಬಳ ಮಂಡಳ ವ್ಯಾಪ್ತಿಯ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ಸದಸ್ಯರಿಗೆ ನಡೆದ ಅಭಿನಂದನಾ ಸಮಾರಂಭ|
ಡಂಬಳ(ಫೆ.11): ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ನಾಯಕರಿಲ್ಲದೆ ದಯನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಟೀಕಿಸಿದ್ದಾರೆ.
ಡಂಬಳ ಗ್ರಾಮದ ತೋಂಟದಾರ್ಯ ಕಲಾಭವನದಲ್ಲಿ ಬುಧವಾರ ನಡೆದ ಬಿಜೆಪಿ ಡಂಬಳ ಮಂಡಳ ವ್ಯಾಪ್ತಿಯ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಹಾಗೂ ಸದಸ್ಯರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ನಾಯಕರ ಮಧ್ಯೆ ಹೊಂದಾಣಿಕೆ ಇಲ್ಲ. ರಾಹುಲ್ ಗಾಂಧಿಗೆ ದೇಶದ ಆಗುಹೋಗಗಳ ಬಗ್ಗೆ ಜ್ಞಾನವಿಲ್ಲದಿರುವುದು ಭವಿಷ್ಯತ್ತಿನಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಕಾರ್ಯಕರ್ತರೆ ಪಕ್ಷದ ತಳಹದಿ ಹಾಗೂ ಆಸ್ತಿಯಾಗಿದ್ದಾರೆ ಎಂದರು.
undefined
ಹಾವು ಕಚ್ಚಿದ್ರೆ ಏನಾಗಲ್ಲ ಎಂದು ಹುಚ್ಚಾಟ ಆಡಿದವ ಹಾವು ಕಚ್ಚಿ ಸಾವು!
ಗ್ರಾಪಂಗೆ ಆಯ್ಕೆಯಾಗುವುದು ತುಂಬಾ ಕಠಿಣ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೆ ಸರ್ಕಾರ ಇರುವುದರಿಂದಾಗಿ ಗ್ರಾಮೀಣ ಜನರಿಗೆ ಸರ್ಕಾರಿ ಸವಲತ್ತು ಸಿಗಬೇಕು ಎನ್ನುವ ಹಿನ್ನೆಲೆ ಅಧಿಕಾರ ವಿಕೇಂದ್ರಿಕರಣವಾಗಬೇಕು ಎನ್ನುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗೆ ಹೆಚ್ಚು ಅನುದಾನ ನೀಡಲಾಗುತ್ತಿದೆ. ಕೃಷಿಹೊಂಡ, ಬದು ನಿರ್ಮಾಣ, ಬಾಂದರ ಮುಂತಾದ ಯೋಜನೆಗಳ ಕುರಿತು ಮಾಹಿತಿ ತಿಳಿದು ಸದಸ್ಯರು ಗ್ರಾಮದ ಕುಡಿಯುವ ನೀರು, ರಸ್ತೆ, ಶಿಕ್ಷಣ ಸೇರಿದಂತೆ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಜನರ ಹಿತ ಕಾಪಾಡಬೇಕೆಂದು ಸಲಹೆ ನೀಡಿದರು.
ಡಂಬಳ ಮಂಡಳ ಅಧ್ಯಕ್ಷ ರವಿ ಕರಿಗಾರ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಭೀಮಸಿಂಗ್ ರಾಠೋಡ, ಜಿಪಂ ಮಾಜಿ ಉಪಾಧ್ಯಕ್ಷ ಬೀರಪ್ಪ ಬಂಡಿ, ಎಂ.ಎಸ್. ಕರಿಗೌಡರ, ಗಂಗಾಧರ ಸೊರಟೂರ, ಮುಂಡರಗಿ ಪುರಸಭೆ ಅಧ್ಯಕ್ಷೆ ಕವಿತಾ ಅಂದಪ್ಪ ಉಳ್ಳಾಗಡ್ಡಿ ಮಾತನಾಡಿದರು. ಜಿಪಂ ಸದಸ್ಯೆ ಶಕುಂತಲಾ ಆರ್ ಚವ್ಹಾಣ, ಮುಂಡರಗಿ ಪುರಸಭೆ ಉಪಾಧ್ಯಕ್ಷ ಶಿವಪ್ಪ ಚಿಕ್ಕಣ್ಣವರ, ಮುಖಂಡ ವಿ.ಎಸ್. ಯರಾಶಿ, ಕುಬೇರಪ್ಪ ಬಂಡಿ, ಶೃತಿ ಹಿರೇಮಠ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಹುಸೇನಸಾಬ್ ಮೂಲಿಮನಿ, ಉಮೇಶ ಅಂಕದ, ಹುಸೇನಸಾಬ ಹುಲಿಕಟ್ಟಿ, ಈರಣ್ಣ ಪಾರಪ್ಪನವರ, ಪ್ರಕಾಶ ಸಂಕಣ್ಣವರ, ಅಂದಪ್ಪ ಹಾರೂಗೇರಿ, ಬಸವರಾಜ ಸಂಗನಾಳ, ವೆಂಕನಗೌಡ ಪಾಟೀಲ, ನಾಗರಾಜ ಕಾಟ್ರಳ್ಳಿ, ರವಿರಾಜ ಚವ್ಹಾಣ, ಸಿದ್ದನಗೌಡ ಪಾಟೀಲ, ನಾಗನಗೌಡ ಚಿನ್ನಪ್ಪಗೌಡ, ಮಹೇಶ ಗಡಗಿ, ಗಂಗಧರ ಹಳ್ಳಿತಳವಾರ, ಗೌಸಿದ್ದಪ್ಪ ಹಾದಿಮನಿ ಪಾಲ್ಗೊಂಡಿದ್ದರು. ರಾಮಚಂದ್ರ ಬದಾಮಿ ನಿರೂಪಿಸಿದರು. ನಾಗರಾಜ ಕಾಟ್ರಳಿ ವಂದಿಸಿದರು.