'ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ವಿಜಯ ಪತಾಕೆ ಹಾರಿಸುವುದು ಖಚಿತ'

By Kannadaprabha News  |  First Published Oct 28, 2022, 4:51 AM IST

ಕಾಂಗ್ರೆಸ್‌ ತತ್ವ, ಸಿದ್ಧಾಂತ ಮತ್ತು ಜನಪರ ಕಾಳಜಿಯನ್ನು ಮೆಚ್ಚಿ ನಿತ್ಯ ನೂರಾರು ಮಂದಿ ಸೇರ್ಪಡೆಯಾಗುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ವಿಜಯ ಪತಾಕೆ ಹಾರಿಸುವುದು ಖಚಿತ ಎಂದು ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಭರವಸೆ ವ್ಯಕ್ತಪಡಿಸಿದರು.


 ಕೆ.ಆರ್‌. ನಗರ (ಅ.27):  ಕಾಂಗ್ರೆಸ್‌ ತತ್ವ, ಸಿದ್ಧಾಂತ ಮತ್ತು ಜನಪರ ಕಾಳಜಿಯನ್ನು ಮೆಚ್ಚಿ ನಿತ್ಯ ನೂರಾರು ಮಂದಿ ಸೇರ್ಪಡೆಯಾಗುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ವಿಜಯ ಪತಾಕೆ ಹಾರಿಸುವುದು ಖಚಿತ ಎಂದು ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಭರವಸೆ ವ್ಯಕ್ತಪಡಿಸಿದರು.

ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದಲ್ಲಿರುವ (KPCC)  ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಅವರ ನಿವಾಸದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಸಾಲಿಗ್ರಾಮ ತಾಲೂಕಿನ ಸಾಲೆಕೊಪ್ಪಲು ಗ್ರಾಮದ ಒಕ್ಕಲಿಗ ಸಮಾಜದ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Tap to resize

Latest Videos

ದೇಶ ಮತ್ತು ದ (Karnataka)  ಉದ್ಧಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಅರಿತಿರುವ ಕ್ಷೇತ್ರದ ಪ್ರಜ್ಞಾವಂತ ಮತದಾರರು ಸ್ವಯಂ ಪ್ರೇರಿತರಾಗಿ ನಮಗೆ ಬೆಂಬಲ ನೀಡುತ್ತಿದ್ದು, ಇದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರಲ್ಲದೆ, ಮುಂದಿನ ದಿನಗಳಲ್ಲಿ ಮತ್ತಷ್ಟುಪ್ರಭಾವಿಗಳು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮತ್ತು ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಡಿ. ರವಿಶಂಕರ್‌ ಮಾತನಾಡಿ, ಇತರ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗುವವರನ್ನು ನಾವು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತೇವೆ ಎಂದರು.

ಗ್ರಾಪಂ ಸದಸ್ಯ ನೂತನಗೌಡ, ಮಾಜಿ ಸದಸ್ಯರಾದ ಪ್ರಕಾಶ್‌, ನವೀನ್‌, ಮನೋಹರ, ಮುಖಂಡ ಜಗದೀಶ್‌ ಅವರ ನೇತೃತ್ವದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ಸಾಲೇಕೊಪ್ಪಲು ಗ್ರಾಮದ ಒಕ್ಕಲಿಗ ಸಮಾಜದ ಮುಖಂಡರಾದ ಲಕ್ಷ್ಮಣ, ಅಶೋಕ್‌, ಸಚಿನ್‌, ಶಿವಣ್ಣ, ಮನೋಹರ, ಉದಯ, ಚಂದನ್‌, ನಿತಿನ್‌, ರಾಹುಲ್‌, ಮಹದೇವ, ಶ್ರೀಕಾಂತ್‌, ಎಸ್‌.ಪಿ.ಶರತ್‌, ನಟರಾಜು, ಆಕಾಶ್‌, ನೇಮರಾಜ್‌, ಸಂಪತ್‌, ಶಿವಕುಮಾರ್‌, ಚಂದ್ರೇಗೌಡ ಅವರನ್ನು ಸ್ವಾಗಿತಿಸಿತು.

ಸಾಲಿಗ್ರಾಮ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಉದಯಶಂಕರ್‌, ಕೆ.ಆರ್‌. ನಗರ ತಾಲೂಕು ಅಧ್ಯಕ್ಷ ಎಂ.ಎಸ್‌. ಮಹದೇವ್‌, ಪ್ರಧಾನ ಕಾರ್ಯದರ್ಶಿ ಡಿ. ರಾಜೇಗೌಡ, ವಕ್ತಾರ ಸೈಯದ್‌ಜಾಬೀರ್‌, ತಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಅಧ್ಯಕ್ಷ ಕಾಂತರಾಜು, ಉಪಾಧ್ಯಕ್ಷ ದೇವರಾಜು, ರಾಜೀವ್‌ ಗಾಂಧಿ ಪಂಚಾಯ್ತಿ ಸಮಿತಿ ಅಧ್ಯಕ್ಷ ವಾಸಿಂಪಾಷಾ, ಉಪಾಧ್ಯಕ್ಷ ಮುಕ್ತಾರ್‌ಪಾಷಾ, ಪ.ಜಾತಿ ಘಟಕದ ಅಧ್ಯಕ್ಷ ಕಂಠಿಕುಮಾರ್‌, ವಕೀಲ ಪುನೀತ್‌ ಇದ್ದರು.

ಸಂಘಟಿಸಿ ಬಲ ನೀಡಿ :  ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪರಿಶಿಷ್ಟವರ್ಗದ ಯುವಜನರನ್ನು ಸಂಘಟನೆ ಮಾಡಿ ಕಾಂಗ್ರೆಸ್‌ ಪಕ್ಷಕ್ಕೆ ಬಲ ನೀಡುವಂತೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ ಪರಿಶಿಷ್ಟಪಂಗಡದ ಕಾಂಗ್ರೆಸ್‌ ಮುಖಂಡರಿಗೆ ಸಲಹೆ ನೀಡಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್‌ (Congress)  ಕಚೇರಿಯಲ್ಲಿ ನಡೆದ ಪರಿಶಿಷ್ಟಪಂಗಡದ (ST)  ಮುಖಂಡರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ನರಸಿಂಹಯ್ಯ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ಬಲಿಷ್ಠವಾಗಿದೆ. ಆದರೆ ಆಂತರಿಕ ಭಿನ್ನಾಭಿಪ್ರಾಯದಿಂದ ಕೆಲವೊಮ್ಮೆ ಹಿನ್ನೆಡೆಯಾಗಿದೆ. ಈ ಬಾರಿ ಹಾಗಾದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಕಾಂಗ್ರೆಸ್‌ ಸರ್ಕಾರದಿಂದ ಪರಿಶಿಷ್ಟಪಂಗಡದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ಪರಿಶಿಷ್ಟಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕೆಂಬುದು ಹಲವು ದಿನಗಳ ಹೋರಾಟವಾಗಿದೆ. ಆದರೆ ಸುಗ್ರೀವಾಜ್ಞೆಗಿಂತ ಸಚಿವ ಸಂಪುಟದಲ್ಲಿಟ್ಟು ಅನುಮೋದನೆ ಪಡೆದು ಜಾರಿಗೆ ತಂದರೆ ಹೆಚ್ಚಿನ ಭದ್ರತೆ ದೊರೆತಂತಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬಂದರೆ ಹೆಚ್ಚಿನ ಬಲ ಬರಲಿದೆ ಎಂದರು.

ಕೆಪಿಸಿಸಿ ಪರಿಶಿಷ್ಟಪಂಗಡದ ರಾಜ್ಯಾಧ್ಯಕ್ಷ ಪಾಲಯ್ಯ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಹೆಚ್ಚಿನ ಅವಕಾಶವಿದೆ. 11 ಕ್ಷೇತ್ರಗಳಲ್ಲಿ ಪರಿಶಿಷ್ಟಮತದಾರರ ಸಂಖ್ಯೆಯೂ ಹೆಚ್ಚಿದೆ. ಯುವಜನರನ್ನು ಸಂಘಟಿಸುವ ಉದ್ದೇಶದಿಂದ ಎಲ್ಲಾ ಬೂತ್‌ಗಳಲ್ಲಿಯೂ ಎಸ್ಸಿ ಸೆಲ್‌ನ ಪದಾಧಿಕಾರಿಗಳನ್ನು ನೇಮಕ ಮಾಡಿ, ಅವರ ಮೂಲಕ ಪರಿಶಿಷ್ಟಪಂಗಡದ ಎಲ್ಲಾ ಮತದಾರರನ್ನು ತಲುಪಿ, ಕಾಂಗ್ರೆಸ್‌ ಪಕ್ಷದ ಸಾಧನೆಗಳು, ಇದುವರೆಗೂ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಕಾಂಗ್ರೆಸ್‌ ಪಕ್ಷ ನೀಡಿರುವ ಕಾರ್ಯಕ್ರಮಗಳನ್ನು ತಿಳಿಸಿ, ಮನದಟ್ಟು ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷದತ್ತ ಅವರನ್ನು ಸೆಳೆಯುವ ಅಗತ್ಯವಿದೆ. ಪಕ್ಷದ ಪರಿಶಿಷ್ಟಪಂಗಡದ ಜಿಲ್ಲಾಧ್ಯಕ್ಷರಾಗಿ ನರಸಿಂಹಯ್ಯ ಅವರನ್ನು ನೇಮಿಸಿದೆ. ಹಿರಿಯರಾದ ನರಸಿಂಹಯ್ಯರ ನೇತೃತ್ವದಲ್ಲಿ ಯುವಜನರು ಒಗ್ಗೂಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕಿದೆ ಎಂದರು.

click me!