ಈ ಹಿಂದೆ ತಮ್ಮದೇ ಸರ್ಕಾರವಿದ್ದಾಗ ಕಾಂಗ್ರೆಸ್‌ಗೆ ಗೃಹಲಕ್ಷ್ಮೇಯರು ನೆನಪಾಗಲಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ಅವರಿಗೆ ಗೃಹಲಕ್ಷ್ಮೇ ನೆನಪಾಗುತ್ತಿದ್ದಾಳೆ. ಗೃಹಲಕ್ಷ್ಮೇ, ಉಚಿತ ವಿದ್ಯುತ್, ಉಚಿತ ಅಕ್ಕಿ ಹೀಗೆ ಗ್ಯಾರಂಟಿ ಸ್ಕೀಂ ಭರವಸೆ ನೀಡುತ್ತಿರುವ ಕಾಂಗ್ರೆಸ್ ಸತಃ ಕೋಮಾದಲ್ಲಿದ್ದು, ರನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವ ಕಾಂಗ್ರೆಸ್ ಪಕ್ಷವೇ ಈ ಬಾರಿ ರಾಜ್ಯದಲ್ಲಿ ಬದುಕುಳಿಯುವ ಗ್ಯಾರಂಟಿ ಇಲ್ಲವೆಂದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟಾಂಗ್ ನೀಡಿದರು.
ತಾಳಿಕೋಟೆ : ಈ ಹಿಂದೆ ತಮ್ಮದೇ ಸರ್ಕಾರವಿದ್ದಾಗ ಕಾಂಗ್ರೆಸ್‌ಗೆ ಗೃಹಲಕ್ಷ್ಮೇಯರು ನೆನಪಾಗಲಿಲ್ಲ. ಈಗ ಚುನಾವಣೆ ಹೊಸ್ತಿಲಲ್ಲಿ ಅವರಿಗೆ ಗೃಹಲಕ್ಷ್ಮೇ ನೆನಪಾಗುತ್ತಿದ್ದಾಳೆ. ಗೃಹಲಕ್ಷ್ಮೇ, ಉಚಿತ ವಿದ್ಯುತ್, ಉಚಿತ ಅಕ್ಕಿ ಹೀಗೆ ಗ್ಯಾರಂಟಿ ಸ್ಕೀಂ ಭರವಸೆ ನೀಡುತ್ತಿರುವ ಕಾಂಗ್ರೆಸ್ ಸತಃ ಕೋಮಾದಲ್ಲಿದ್ದು, ರನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವ ಕಾಂಗ್ರೆಸ್ ಪಕ್ಷವೇ ಈ ಬಾರಿ ರಾಜ್ಯದಲ್ಲಿ ಬದುಕುಳಿಯುವ ಗ್ಯಾರಂಟಿ ಇಲ್ಲವೆಂದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟಾಂಗ್ ನೀಡಿದರು.
ಶನಿವಾರ ರಾತ್ರಿ ತಾಳಿಕೋಟೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ನಂತರ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಕಾರ್ಡ್‌ನ ಪೊಳ್ಳು ಭರವಸೆ ನೀಡಿಯಾದರೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಗ್ಯಾರಂಟಿ ಕಾರ್ಡ್ ಹಿಡಿದುಕೊಂಡಿದೆ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ ಎಂದರು.
undefined
ಮೋದಿ ಪ್ರಧಾನಿಯಾದ ಮೇಲೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೇ, ವಿಮಾನ ನಿಲ್ದಾಣ, ಕೈಗಾರಿಕೆ, ನೀರಾವರಿ, ಶುದ್ಧ ನೀರು ಪೂರೈಕೆ, ರೈತ ಸಮ್ಮಾನ್ ಯೋಜನೆಗಳು ಸೇರಿ ಮಹಿಳೆಯರ, ದೀನದಲಿತರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಕೂಡ ನೀರಾವರಿ ಯೋಜನೆ, ಕುಡಿಯುವ ನೀರು, ಶಿಕ್ಷಣ ಜೊತೆ ಸಾಮಾಜಿಕ ಕಳಕಳಿಯೊಂದಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪೌರಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ ಜನಾಂಗದವರ ಮೀಸಲಾತಿ ಹೆಚ್ಚಳ ಮಾಡಿದೆ ಎಂದರು.
ಕೈಗಾರಿಕ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಈ ಭಾಗದ ಜನರ ಆಸೆಯದಂತೆ ಈ ಭಾಗದಲ್ಲಿ ಬಾಲಾಜಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ 10 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಕೊಡುವ ಕೆಲಸವನ್ನು ನಾವು ಮಾಡಿದ್ದೇವೆ. ಸದ್ಯ ಶಾಸಕ ನಡಹಳ್ಳಿ ಅವರ ಪುತ್ರ ಭರತಗೌಡ ಪಾಟೀಲ ಪ್ರತಿ ದಿನ 5 ಸಾವಿರ ಟನ್ ಕಬ್ಬು ನುರಿಸುವ ಎಥೆನಾಲ್ ಫ್ಯಾಕ್ಟರಿ ಪ್ರಾರಂಭಿಸಲು ಮುಂದಾಗಿದ್ದಾರೆ ಎಂದರು.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೇ ಬಿಜೆಪಿಯ ಮೂಲಮಂತ್ರವಾಗಿದೆ. ಈ ಹಿಂದೆ ಈ ಕ್ಷೇತ್ರ ಹೇಗಿತ್ತು? ಈಗ ಕ್ಷೇತ್ರದಲ್ಲಿ ಎಷ್ಟುಬದಲಾವಣೆಯಾಗಿದೆ ಎಂಬುದು ಇಲ್ಲಿನ ಜನರಿಗೆ ಗೊತ್ತಿದೆ. ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣಗಳು ಸ್ಮಾರ್ಟಸಿಟಿ ಆಗಬೇಕೆಂಬ ಕನಸನ್ನು ಹೊತ್ತು ನಾನು ಅನುದಾನ ತಂದಿದ್ದೇನೆ. ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು ಒಳಗೊಂಡು ಮೂಲ ಸೌಕರ್ಯ ಒದಗಿಸಿದ್ದೇನೆ. ಆದರೆ, ಈ ಭಾಗದ ಕಾಂಗ್ರೆಸ್ ಮುಖಂಡರೊಬ್ಬರು ಇದು ನನ್ನ ಕೊನೆಯ ಚುನಾವಣೆ. ಈ ಬಾರಿ ನನ್ನನ್ನು ಗೆಲ್ಲಿಸಿ ಎಂದು ಹೇಳಿ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ನೋಡುತ್ತಿದ್ದಾರೆ. ಅದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಎಂ.ಎಸ್.ಪಾಟೀಲ, ಚಂದ್ರಶೇಖರ ಕವಟಗಿ, ವಿವೇಕಾನಂದ ಡಬ್ಬಿ, ಬಸವರಾಜ ಬಿರಾದಾರ, ಎಂ.ಡಿ.ಕುಂಬಾರ, ಮಲ್ಲಿಕಾರ್ಜುನ ಜೋಗೂರ, ಶಂಭುಲಿಂಗ ಕಕ್ಕಳಮೇಲಿ, ಕಾಶಿಬಾಯಿ ರಾಂಪೂರ, ಸಂಗಮೇಶ ಇಂಗಳಗಿ, ಮಲಕೇಂದ್ರಾಯಗೌಡ ಪಾಟೀಲ, ಪ್ರಭು ಕಡಿ, ಸಂಗಮೇಶ ಕರಭಂಟನಾಳ, ಸಾಯಬಣ್ಣ ಆಲ್ಯಾಳ, ಸೋಮನಗೌಡ ಕವಡಿಮಟ್ಟಿ, ಸಂಗಮ್ಮ ದೇವರಳ್ಳಿ, ಮುತ್ತಣ್ಣ ಹುಗ್ಗಿ, ವಾಸುದೇವ ಹೆಬಸೂರ, ಜೈಸಿಂಗ್ ಮೂಲಿಮನಿ ಇದ್ದರು.
ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಸ್ವಾಗತಿಸಿದರು. ರಾಘವೇಂದ್ರ ವಿಜಾಪೂರ, ಗುರುರಾಜ ನಾಯ್ಕಲ್ ನಿರೂಪಿಸಿದರು.
---------
ಸಿದ್ದರಾಮಯ್ಯ, ಡಿಕೆಶಿ ಸೇರಿ ಬಿಜೆಪಿಯ ಯೋಜನೆಗಳನ್ನೇ ಕಾಪಿ ಪೇಸ್ಟ್ ಮಾಡಿ ತಮ್ಮ ಯೋಜನೆಗಲೆಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಜಾರಿಗೊಳಿಸಿದ ಯೋಜನೆಗಳನ್ನು ತಮ್ಮ ಸರ್ಕಾರದ ಯೋಜನೆಗಳು ಎಂದು ಬಡಾಯಿ ಕೊಚ್ಚುತ್ತಿದ್ದಾರೆ. ಅವರು ಏನೇ ತಿಪ್ಪರಲಾಗ ಹಾಕಿದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವದಿಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನಿಶ್ಚಿತ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ 40 ಅಥವಾ ಅದಕ್ಕಿಂತ ಕಡಿಮೆ ಸೀಟುಗಳಲ್ಲಿ ಮಾತ್ರ ಗೆಲ್ಲುವ ಸಾಧ್ಯತೆ ಇದೆ. ಅಧಿಕೃತ ಪ್ರತಿಪಕ್ಷದ ಸ್ಥಾನ ಪಡೆಯಲೂ ಹೊಡೆದಾಡುವ ಪರಿಸ್ಥಿತಿ ಕಾಂಗ್ರೆಸ್‌ಗೆ ಒದಗಿ ಬರಲಿದೆ.
- ಗೋವಿಂದ ಕಾರಜೋಳ, ಸಚಿವರು