ಸೋನಿಯಾ ಗಾಂಧಿ ಕುರಿತು ಹಗುರವಾಗಿ ಮಾತನಾಡಿದ್ದು ಅಲ್ಲದೆ ಒಂದು ಪಕ್ಷದ ಪರವಾಗಿ ವಾದಿಸುತ್ತಲೇ ತೇಜೋವಧೆ ಮಾಡಿದ್ದಾರೆ| ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹ| ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿಯಿಂದ ದೂರು|
ಕೊಪ್ಪಳ(ಏ.26): ರಿಪಬ್ಲಿಕ್ ಇಂಗ್ಲಿಷ ಚಾನಲ್‌ನ ಪ್ರಧಾನ ಸಂಪಾದಕ, ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೊಪ್ಪಳ ನಗರ ಠಾಣೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ದೂರು ಸಲ್ಲಿಸಿದ್ದಾರೆ.
ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಕುರಿತು ಹಗುರವಾಗಿ ಮಾತನಾಡಿದ್ದು ಅಲ್ಲದೆ ಒಂದು ಪಕ್ಷದ ಪರವಾಗಿ ವಾದಿಸುತ್ತಲೇ ತೇಜೋವಧೆ ಮಾಡಿದ್ದಾರೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಟ್ರಕ್ ಟರ್ಮಿನಲ್: ತಪಾಸಣೆ ಬಳಿಕವೇ ಲಾರಿಗಳಿಗೆ ನಗರ ಪ್ರವೇಶಕ್ಕೆ ಅವಕಾಶ
ಬಳಿಕ ಮಾತನಾಡಿದ ಶಿವರಾಜ ತಂಗಡಗಿ ಅವರು, ಪಕ್ಷದ ಸೂಚನೆಯ ಮೇರೆಗೆ ದೂರು ನೀಡಿದ್ದೇವೆ. ನಮ್ಮ ಪಕ್ಷದ ನಾಯಕಿಯನ್ನು ಈ ರೀತಿ ಅವಹೇಳನ ಮಾಡಿದ್ದು ತಪ್ಪು ಎಂದಿದ್ದಾರೆ. ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಕೃಷ್ಣಾ ಇಟ್ಟಂಗಿ, ಜಿಲ್ಲಾ ವಕ್ತಾರ ರವಿ ಕುರುಗೋಡ, ಸೇರಿದಂತೆ ಇತರರು ಇದ್ದರು.