'ರಮೇಶ್ ಜಾರಕಿಹೊಳಿ ರಾಜೀನಾಮೆ ಹಿಂದೆ BJP-ಕಾಂಗ್ರೆಸ್ ಒಳ ಒಪ್ಪಂದ '

Kannadaprabha News   | Asianet News
Published : Apr 03, 2021, 01:43 PM ISTUpdated : Apr 03, 2021, 02:08 PM IST
'ರಮೇಶ್ ಜಾರಕಿಹೊಳಿ ರಾಜೀನಾಮೆ ಹಿಂದೆ BJP-ಕಾಂಗ್ರೆಸ್ ಒಳ ಒಪ್ಪಂದ '

ಸಾರಾಂಶ

ರಾಜ್ಯದಲ್ಲಿ ಭಾರಿ ಸಂಚಲನವನ್ನೇ ಉಂಟು ಮಾಡಿದ ಸೀಡಿ ಪ್ರಕರಣ ಇದೀಗ ಹೊಸ ಹೊಸ ತಿರುವುಗಳನ್ನೇ ಪಡೆಯುತ್ತಿದೆ.  ಈ ಬಗ್ಗೆ ಇದೀಗ ಮತ್ತೊಂದು ಸ್ಫೋಟಕ ವಿಚಾರ ಹೊರಬಿದ್ದಿದೆ. 

ಮದ್ದೂರು (ಏ.03): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದ ಸತ್ಯಾತ್ಯತೆ ಯಾವುದೇ ಕಾರಣಕ್ಕೂ ಹೊರಬೀಳುವುದಿಲ್ಲ ಎಂದು ಶಾಸಕ ಕೆ. ಸುರೇಶ್ ಗೌಡ ಹೇಳಿದರು. 

ಪತ್ರಕರ್ತರೊಂದಿಗೆ ಮಾತನಾಡಿದ ಅವರ ಬಿಜೆಪಿ ಕಾಂಗ್ರೆಸ್ ಪಕ್ಷಗಳ ಒಳೊಪ್ಪಂದದ ಪ್ರಕಾರವೇ ಸಚಿವ ರಮೇಶ್‌ ಜಾರಕಿಗೊಳಿ ರಾಜೀನಾಮೆ ಪ್ರಹಸನ ಮುಗಿದಿದೆ. ಈ ಬಗ್ಗೆ ಯಾವುದೇ ತನಿಖೆ ನಡೆಸಿದರು ಸತ್ಯಾಂಶ ಹೊರಬರುವುದಿಲ್ಲ ಎಂದು ಸುರೇಶ್ ಗೌಡ ಹೇಳಿದರು.

ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 9 ಸಾವಿರ ಕೋಟಿ  ರು. ಹಣ ಬಿಡುಗಡೆ ಮಾಡಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದು ಹಣಕಾಸು ಇಲಾಖೆ  ಇಲಾಖೆ ಅನುಮೋದನೆಯಾಗಿದ್ದ ಕೆಲಸಗಳನ್ನ  ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸೀಡಿ ಲೇಡಿ - ಜಾರಕಿಹೊಳಿ ಏನೆಂದು ಕರೆಯುತ್ತಿದ್ದರು : ಏನೇನ್ ಉಡುಗೊರೆ ಕೊಟ್ಟಿದ್ದರು? .

ನಾಗಮಂಗಲ ವಿಧಾನ ಸಭಾ ಕ್ಷೇತ್ರದ 700 ಕೋಟಿ ರು. ಅನುದಾನ ನೆನೆಗುದಿಗೆ ಬಿದ್ದದೆ.  ಲೋಕೋಪಯೋಗಿ  ಇಲಾಖೆ ಹೊರತು ಪಡಿಸಿ ನೀರಾವರಿ  ಗೃಹ ನಿರ್ಮಾಣ, ಗ್ರಾಮೀಣಾಭಿವೃದ್ಧಿ ಮತ್ತಿತರ ಇಲಾಖೆಯ  ಕಾಮಗಾರಿಗಳ ಆಸೆಗೆ ತಣ್ಣೀರೆರಚಚಿದ್ದಾರೆಂದು ಆರೋಪಿಸಿದರು. 

ಈ ಸಂಬಂಧ ವಿಧಾನಸಭೆಯಲ್ಲಿ ಜಿಲ್ಲೆಯ ಶಾಸಕರು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದ ಅನುದಾನ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಡೆಯಲಾಗಿದೆ. 

ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡದೇ ಹೋದರೆ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!