ಕೊರಗಜ್ಜ ದೇಗುಲದ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿ ಆರೋಪಿಗಳು ವಿವಿಧ ಸಂಕಷ್ಟ ಎದುರಿಸುತ್ತಿರುವುದು ಬೆಳಕಿಗೆ ಬರುತ್ತಲೇ ಇದೀಗ ಮಂಗಳೂರಿನ ಮತ್ತೊಂದು ಶಕ್ತಿ ದೇವಸ್ಥಾನದ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿವೆ.
ಮಂಗಳೂರು (ಏ.04): ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನ ಕೊರಗಜ್ಜ ದೇವಸ್ಥಾನದ ಹುಂಡಿಗೆ ಕಾಂಡೋಮ್ ಹಾಕಿ, ನೋವು ಅನುಭವಿಸುತ್ತಿದ್ದ ಇಬ್ಬರು ಶರಣಾಗಿ, ಪೊಲೀಸರ ಅತಿಥಿಯಾಗಿದ್ದಾರೆ. ಆ ಮೂಲಕ ದಕ್ಷಿಣ ಕನ್ನಡ ದೈವಗಳ ಶಕ್ತಿ ಏನೆಂಬುವುದು ಜಾಗಜ್ಜಾಹೀರಾಗಿದೆ. ಆದರೂ, ಕಿಡಿಕೇಡಿಗಳು ತಮ್ಮ ದುಷ್ಕೃತ್ಯವನ್ನು ಮುಂದುವರಿಸಿದ್ದು, ಮತ್ತೆ ದೇವಸ್ಥಾನದ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿದೆ.
ಮಂಗಳೂರು ಹೊರವಲಯದ ಕೊಂಡಾಣ ಬಂಟ ಪಿಲಿಚಾಮುಂಡಿ ದೈವಸ್ಥಾನದ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಆಡಳಿತ ಮಂಡಳಿ ಇಂದು ಹುಂಡಿ ಒಡೆಯುವ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಕೊರಗಜ್ಜನ ಹುಂಡಿಗೆ ಕಾಂಡೋಮ್, ಅಶ್ಲೀಲ ಬರಹ : ಓರ್ವ ಸಾವು- ಮತ್ತಿಬ್ಬರು ಶರಣು ...
ಮೂರು ತಿಂಗಳ ಹಿಂದಷ್ಟೇ ಕಾಣಿಕೆ ಹುಂಡಿ ತೆರೆಯಲಾಗಿತ್ತು. ಇಂದು ಮತ್ತೆ ಹುಂಡಿ ತೆರೆದಾಗ ಕಾಂಡೋಮ್ ಪತ್ತೆಯಾಗಿದೆ. ಈ ಹಿಂದೆ ಮಂಗಳೂರಿನ ಅನೇಕ ದೈವಸ್ಥಾನಗಳ ಹುಂಡಿಯಲ್ಲಿ ಕಾಂಡೋಮ್ ಪತ್ತೆಯಾಗಿತ್ತು. ಇದೀಗ ಈ ದೇವಾಲಯದ ಹುಂಡಿಯಲ್ಲಿಯೂ ಕಾಂಡೋಮ್ ಪತ್ತೆಯಾಗಿತ್ತು.
ಕೆಲ ದಿನಗಳ ಹಿಂದೆ ಕೊರಗಜ್ಜ ದೇಗುಲದಲ್ಲಿ ಕಾಂಡೋಮ್ ಹಾಕಿದ್ದವರಲ್ಲಿ ಓರ್ವ ದೈವದ ಶಾಪಕ್ಕೆ ತುತ್ತಾಗಿ ಸಾವನ್ನಪ್ಪಿದ್ದ. ಮತ್ತಿಬ್ಬರು ಶರಣಾಗಿದ್ದರು. ಕೊರಗಜ್ಜ ಮತ್ತು ಬಬ್ಬುಸ್ವಾಮಿ ಸಾನಿಧ್ಯಕ್ಕೆ ಬಂದು ಶರಣಾಗಿದ್ದರು.
ಇದೀಗ ಪಿಲಿಚಾಮುಂಡು ದೇವಸ್ಥಾನದ ಹುಂಡಿಯಲ್ಲಿಯೂ ಕಾಂಡೋಮ್ ಪತ್ತೆಯಾಗಿದೆ. ಮತ್ತೊಮ್ಮೆ ಕಿಡಿಗೇಡಿಗಳ ದುಷ್ಕೃತ್ಯ ಬಯಲಾಗಿದೆ.