ಹಿರಿಯ ನಾಯಕರ ಮನಸ್ಥಿತಿ ಕುರಿತು ಖಂಡನೆ : ಕಾಂಗ್ರೆಸ್‌ಗೆ ರಾಜಿನಾಮೆ

By Kannadaprabha News  |  First Published Apr 16, 2023, 8:42 AM IST

ಪಕ್ಷದ ಟಿಕೆಟ್‌ ಕೈತಪ್ಪಿದ್ದರಿಂದ ಬೇಸರಗೊಂಡಿದ್ದ ನನ್ನನ್ನು ಕನಿಷ್ಠ ಸೌಜನ್ಯಕ್ಕೂ ಯಾವೊಬ್ಬ ನಾಯಕರು ಭೇಟಿ ನೀಡಿ ಮಾತನಾಡಿಸುವ ಕೆಲಸ ಮಾಡಿಲ್ಲ. ಈ ಕಾರಣದಿಂದ ಕಾಂಗ್ರೆಸ್‌ ಮುಖಂಡರ ಮನಸ್ಥಿತಿಯನ್ನು ಖಂಡಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನ ಎರಡಕ್ಕೂ ರಾಜೀನಾಮೆ ಸಲ್ಲಿಸಿರುವುದಾಗಿ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್‌ ಅಹಮದ್‌ ತಿಳಿಸಿದ್ದಾರೆ.


 ತುಮಕೂರು :  ಪಕ್ಷದ ಟಿಕೆಟ್‌ ಕೈತಪ್ಪಿದ್ದರಿಂದ ಬೇಸರಗೊಂಡಿದ್ದ ನನ್ನನ್ನು ಕನಿಷ್ಠ ಸೌಜನ್ಯಕ್ಕೂ ಯಾವೊಬ್ಬ ನಾಯಕರು ಭೇಟಿ ನೀಡಿ ಮಾತನಾಡಿಸುವ ಕೆಲಸ ಮಾಡಿಲ್ಲ. ಈ ಕಾರಣದಿಂದ ಕಾಂಗ್ರೆಸ್‌ ಮುಖಂಡರ ಮನಸ್ಥಿತಿಯನ್ನು ಖಂಡಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನ ಎರಡಕ್ಕೂ ರಾಜೀನಾಮೆ ಸಲ್ಲಿಸಿರುವುದಾಗಿ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್‌ ಅಹಮದ್‌ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರೊಬ್ಬರು ಕೊಟ್ಟತಕ್ಷಣ, ಜಿಲ್ಲಾ ಉಸ್ತುವಾರಿ ಮೈಯೂರ ಜಯರಾಮ್‌ ಸೇರಿದಂತೆ ಆನೇಕ ನಾಯಕರು ಅವರನ್ನು ಭೇಟಿ ಮಾಡಿ, ಮನವೊಲಿಸುವ ಕೆಲಸ ಮಾಡಿದಿರಿ. ಆದರೆ ಕಳೆದ ಹತ್ತಾರು ವರ್ಷಗಳಿಂದ ಕಟ್ಟಿದ ನನ್ನಗೆ ಮೋಸವಾಗಿರುವುದು ಗೊತ್ತಿದ್ದೂ, ಸೌಜನ್ಯಕ್ಕೂ ಭೇಟಿಯಾಗದಿರುವುದು ಟಿಕೆಟ್‌ ಸಿಗದಿರುವುದಕ್ಕಿಂತಲೂ ಹೆಚ್ಚು ಬೇಸರ ತರಿಸಿದೆ. ಪಕ್ಷಕ್ಕೆ ದುಡಿದವರ ಸ್ಥಿತಿಯೇ ಹೀಗಾದರೆ ಉಳಿದವರ ಪಾಡೇನು ಎಂಬ ಅಂಶ ನಮ್ಮ ಮನದಲ್ಲಿ ಕೊರೆಯುತ್ತಿದೆ. ಆ ನೋವನ್ನು ತುಂಬಾ ದಿನ ಹಿಡಿದಿಟ್ಟುಕೊಳ್ಳಲಾಗದೆ ಇಂದು ಪಕ್ಷದ ಜಿಲ್ಲಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಆತೀಕ್‌ ಅಹಮದ್‌ ತಿಳಿಸಿದರು

Tap to resize

Latest Videos

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಿಂದೆ, ಮುಂದೆ, ಎಂದೆಂದಿಗೂ ನಮ್ಮ ನಾಯಕರು, ನಾನು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನಾಗಿ ಆಯ್ಕೆಯಾಗಲು ಅವರೇ ಕಾರಣ. ಟಿಕೇಟ್‌ ಸಿಗದೆ ನೊಂದಿದ್ದ ನನನ್ನು ಸೌಜನ್ಯಕ್ಕೂ ಮಾತನಾಡಿಸದಿರುವುದು ಬಹಳ ನೋವುಂಟು ಮಾಡಿದೆ. ಅವರ ಒಳ ಒಪ್ಪಂದಗಳು ಏನೇ ಇರಲಿ, ನನಗೂ ಮಾತು ಹೇಳಬಹುದಿತ್ತಲ್ಲವೇ? ಅವರು ನಾಯಕರಾಗಿ ಎತ್ತರಕ್ಕೆ ಬೆಳೆಯಲಿ, ನನ್ನಂತೆ ಇತರರಿಗೆ ನೋವುಂಟಾಗದಂತೆ ನೋಡಿಕೊಳ್ಳಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಬ್ಲಾಕ್‌ ಅಧ್ಯಕ್ಷ ಮಹಮದ್‌ ಷಫೀಕ್‌, ಉಪಾಧ್ಯಕ್ಷೆ ಸೈಯದ್‌ ಸಮೀಮ್‌, ಸುಹೇಲ್‌, ಬಷೀರ್‌ ಮತ್ತಿತರರಿದ್ದರು.

click me!