ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆ ಖಚಿತವಾಗಿದ್ದು, ಏ.17ರ ಸೋಮವಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದೇನೆಂದು ಬಂಡೆ ರವಿ ತಿಳಿಸಿದರು.
ತಿಪಟೂರು : ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನನ್ನ ಸ್ಪರ್ಧೆ ಖಚಿತವಾಗಿದ್ದು, ಏ.17ರ ಸೋಮವಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದೇನೆಂದು ಬಂಡೆ ರವಿ ತಿಳಿಸಿದರು.
ನಗರದ ಕಲ್ಪತರು ಗ್ರ್ಯಾಂಡ್‌ನಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ತಿಪಟೂರು ಕ್ಷೇತ್ರದಿಂದ ಜೆಡಿಎಸ್ ಆಕಾಂಕ್ಷಿಯಾಗಬೇಕಿತ್ತು. ಈ ಸಂಬಂಧ ಖುದ್ದು ಪಕ್ಷದ ವರಿಷ್ಠ ಹೆಚ್.ಡಿ ಕುಮಾರಸ್ವಾಮಿಯವರೇ ನನಗೆ ಮಾತು ಕೊಟ್ಟಿದ್ದರು. ಆದರೆ ಈಗ ಬೇರೆಯವರಿಗೆ ಪಕ್ಷದಿಂದ ಬಿ ಫಾರಂ ಕೊಟ್ಟಿದ್ದು ನನಗೆ ತೀವ್ರ ಬೇಸರ ತರಿಸಿದೆ. ಇಲ್ಲಿನ ಕೆಲವು ನಾಯಕರು ನನ್ನ ಬಳಿ ಹಣ ಪಡೆದುಕೊಂಡು ಟಿಕೆಟ್ ಕೊಡಿಸುವ ಭರವಸೆಯನ್ನು ನೀಡಿದ್ದರು.ವೂ ಇಲ್ಲ ಇತ್ತ, ಟಿಕೆಟ್ ಸಹ ಸಿಗಲಿಲ್ಲ. ಇದರಿಂದ ನೊಂದಿರುವ ನಾನು ನನ್ನ ಅಭಿಮಾನಿಗಳ ಒತ್ತಾಸೆಯಂತೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯುತ್ತಿದ್ದೇನೆ.
ತಾಲೂಕಿನಲ್ಲಿ ಕಳೆದೆರಡು ವರ್ಷಗಳಿಂದಲೂ ನಾನು ಸೇವೆ ಮಾಡುತ್ತಿದ್ದೇನೆ. ಬೆಂಗಳೂರಿನ ಮೂಲದವನಾದರೂ ತಿಪಟೂರು ನನ್ನ ಕರ್ಮಭೂಮಿ. ಚಿಕ್ಕನಾಯಕನಹಳ್ಳಿಯಲ್ಲಿ ಮೈನ್ಸ್ ಕೆಲಸ ಮಾಡುತ್ತಾ ಉದ್ಯಮಿದಾರನಾಗಿರುವ ನಾನು ಸಾಕಷ್ಟುಜನರಿಗೆ ಕೈಲಾದ ಸೇವೆ ಮಾಡಿದ್ದೇನೆ. ನನ್ನ ಸೇವೆ ಗುರುತಿಸಿ ತಾಲೂಕಿನ ಜನರು ಮತ ನೀಡಲಿದ್ದು, ಈಗಾಗಲೇ ತಾಲೂಕಿನಾದ್ಯಂತ ಪ್ರಚಾರ ಕಾರ್ಯ ಪ್ರಾರಂಬಿಸಿದ್ದೇನೆ. ಯುವಕ-ಯುವತಿಯರಿಗೆ ಉದ್ಯೋಗ ಸೇರಿದಂತೆ ಹಲವು ಸಾಮಾಜಿಕ ಕಳಕಳಿಯುಳ್ಳ ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಗುರುಪ್ರಸನ್ನ ಸೇರಿದಂತೆ ಅಭಿಮಾನಿಗಳು, ಕಾರ್ಯಕರ್ತರುಗಳಿದ್ದರು.
ನಾನು ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ
ಆಳಂದ (ಏ.14): ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ನೀಡುವ ಕೆಲಸ ಮಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗರಂ ಆಗಿ ಹೇಳಿದ್ದಾರೆ. ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಗುರುವಾರ ಜೆಡಿಎಸ್ ಅಭ್ಯರ್ಥಿ ಮಹೇಶ್ವರಿ ವಾಲಿ ಪರ ಕೈಗೊಂಡ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ ವಿಚಾರದ ಬಗ್ಗೆ ಕಿಡಿಕಾರಿದ ಅವರು, ಅಂತಹ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕಪ್ತಡಿಸಿದರು. ಕ್ಷೇತ್ರದಲ್ಲಿ ಒಬ್ಬ ಹೆಣ್ಣು ಮಗಳು ಸ್ಪರ್ಧೆ ನೀಡಿದ್ದು, ಹೆಲಿಪ್ಯಾಡ್‌ಗೆ ಅನುಪತಿ ನೀಡಲು ಯಾರದೋ ಮಾತು ಕೇಳಿ ಅಡ್ಡಿಪಡಿಸುವುದು ಸರಿಯಲ್ಲ ಎಂದರು.
ಬರುವ ದಿನಗಳಲ್ಲಿ ನನ್ನನೂ ಸಿಎಂ ಆಗಲು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಸಿಎಂ ಆಗಿದ್ದಾಗ ಸಾಮಾನ್ಯನಿಗೂ ಗೌರವಕೊಟ್ಟು ಆಡಳಿತ ನಡೆಸಿದ್ದು, ಅಧಿಕಾರಿಗಳು ಯಾವುದೇ ಸರ್ಕಾರ ಶಾಶ್ವತವಲ್ಲ. ಕಾರ್ಯಕರ್ತರಿಗೆ ಧಮ್ಕಿ, ಕಿರುಕುಳ ಕೊಡುವುದು. ಚುನಾವಣೆ ಬಂದಾಗಿನಿಂದ ಹೆಚ್ಚಾಗಿದೆ ನಾನು ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ಇನ್ನೊಂದು ತಿಂಗಳು ಅಷ್ಟೇ ನಿಮ್ಮ ಸಮಯ. ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು. ಕಾಂಗ್ರೆಸ್ ಮತ್ತು ಬಿಜೆಪಿ ಅಡಿಯಾಳಾಗಿ ಕೆಲಸ ಮಾಡಿದರೆ ಜೂನ್ ತಿಂಗಳ ಬಳಿಕ ಪ್ರಾಯಶ್ಚಿತ ಅನುಭವಿಸಬೇಕಾಗುತದೆ ಎಂದು ನೆರವಾಗಿ ಎಚ್ಚರಿಕೆ ನೀಡಿದರು.