ಕೃಷಿ ವಿವಿಗಳಲ್ಲಿ ಸಮಗ್ರ ಮಾಹಿತಿ ಸಿಗಲಿ: ಶೋಭಾ ಕರಂದ್ಲಾಜೆ

By Govindaraj S  |  First Published Jul 10, 2022, 9:20 AM IST

ರಾಜ್ಯದ ಕೃಷಿ, ತೋಟಗಾರಿಕೆ ಮತ್ತು ಪಶು ವೈದ್ಯಕೀಯ ವಿಶ್ವವಿದ್ಯಾನಿಲಯಗಳು ಸಮಗ್ರ ಕೃಷಿ ವಿಶ್ವವಿದ್ಯಾನಿಲಯಗಳಾಗಿ ರೈತರಿಗೆ ಒಂದೇ ಸೂರಿನಡಿ ಮಾಹಿತಿ ಲಭ್ಯವಾಗಬೇಕು, ಆಗ ಮಾತ್ರ ರೈತರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. 


ಬೆಂಗಳೂರು (ಜು.10): ರಾಜ್ಯದ ಕೃಷಿ, ತೋಟಗಾರಿಕೆ ಮತ್ತು ಪಶು ವೈದ್ಯಕೀಯ ವಿಶ್ವವಿದ್ಯಾನಿಲಯಗಳು ಸಮಗ್ರ ಕೃಷಿ ವಿಶ್ವವಿದ್ಯಾನಿಲಯಗಳಾಗಿ ರೈತರಿಗೆ ಒಂದೇ ಸೂರಿನಡಿ ಮಾಹಿತಿ ಲಭ್ಯವಾಗಬೇಕು, ಆಗ ಮಾತ್ರ ರೈತರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. 

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಡಾ.ಜಿ.ಕೆ.ವೀರೇಶ್‌ ದತ್ತಿ ನಿಧಿಯಡಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ‘5ನೇ ಸಮಗ್ರ ಕೃಷಿ ಪದ್ಧತಿ ರೈತರ ಸಮಾವೇಶ’ದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ರುವ ಕೃಷಿ, ತೋಟಗಾರಿಕಾ, ಪಶು ವೈದ್ಯಕೀಯ ವಿವಿಗಳಲ್ಲಿ ಎಲ್ಲ ರೀತಿಯ ಮಾಹಿತಿ ಸಿಗಬೇಕು. ಇದರಿಂದ ರೈತರು ಹಲವು ಕಡೆ ಸುತ್ತುವುದು ತಪ್ಪುತ್ತದೆ. ಈ ವಿವಿಗಳು ಸಮಗ್ರ ಮಾಹಿತಿ ನೀಡುವ ಕೋಶಗಳಾಗಬೇಕು ಎಂದರು.

Tap to resize

Latest Videos

ರೈಲ್ವೆ ವಿದ್ಯುತ್ತೀಕರಣದಿಂದ 300 ಕೋ.ರು. ಉಳಿತಾಯ: ಶೋಭಾ ಕರಂದ್ಲಾಜೆ

ಪ್ರವಾಸಕ್ಕೆ ಕರೆದೊಯ್ಯಿರಿ: ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ರೈತರನ್ನು ಸನ್ಮಾನಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರ ಜೊತೆಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ರೈತರ ಜಮೀನಿಗೆ ಇತರ ರೈತರನ್ನು ಪ್ರವಾಸ ಕರೆದುಕೊಂಡು ಹೋಗುವ ಕಾರ್ಯಕ್ರಮ ರೂಪಿಸಬೇಕು. ಇದರಿಂದ ಸಂಶೋಧನಾ ಫಲಗಳು ರೈತರಿಗೆ ಶೀಘ್ರವಾಗಿ ತಲುಪುತ್ತವೆ ಎಂದು ಸಲಹೆ ನೀಡಿದರು.

ವಿಶ್ರಾಂತ ಕುಲಪತಿ ಡಾ. ಜಿ.ಕೆ.ವೀರೇಶ್‌ ಅವರು ತಮ್ಮ ನಿವೃತ್ತಿ ವೇತನವನ್ನು ಸಮಗ್ರ ಕೃಷಿ ಕೈಗೊಳ್ಳುವ ರೈತರನ್ನು ಪ್ರೋತ್ಸಾಹಿಸಲು ದತ್ತಿ ನಿಧಿಗೆ ಕೊಡುಗೆ ನೀಡಿರುವುದು ಇತರರಿಗೆ ಮಾದರಿಯಾಗಿದೆ. ಕೇವಲ ತಮ್ಮ ಕುಟುಂಬದ ಅಭಿವೃದ್ಧಿಗೆ ಸದಾ ಚಿಂತೆ ಮಾಡುವ ಈ ಸಮಾಜದಲ್ಲಿ ಇಂತಹ ಮಹನೀಯರು ಆದರ್ಶಪ್ರಾಯರು. ಇವರನ್ನು ಒಂದು ದಿನ ನೆನಪಿಸಿಕೊಂಡರೆ ಸಾಲದು, ಸದಾ ನೆನಪಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರಲ್ಲಿ ಹಲವರಿಗೆ ವಂಚನೆ: ತನಿಖೆ ಆರಂಭ

ಸಾಧಕರಾದ ಎಂ.ಸಿ.ಶಿವಣ್ಣಗೌಡ, ಈರಣ್ಣ ಮಲ್ಲಿಕಾರ್ಜುನ ಕುದರಿ, ಟಿ.ಎಂ.ಅರವಿಂದ್‌ ಮತ್ತಿತರರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ ಪೂರೈಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕೃಷಿ ವಿವಿ ಕುಲಪತಿ ಡಾ. ಎಸ್‌.ರಾಜೇಂದ್ರ ಪ್ರಸಾದ್‌, ಬೀದರ್‌ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನ ವಿವಿ ಕುಲಪತಿ ಡಾ. ಕೆ.ಸಿ.ವೀರಣ್ಣ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ಕೆ.ನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.

click me!