ಮಂತ್ರಾಲಯದ ಪೀಠಾಧಿಪತಿ ವಿರುದ್ಧ ದೂರು ದಾಖಲು

Published : Aug 23, 2019, 12:31 PM IST
ಮಂತ್ರಾಲಯದ ಪೀಠಾಧಿಪತಿ ವಿರುದ್ಧ ದೂರು ದಾಖಲು

ಸಾರಾಂಶ

ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಕಾರಣವೇನು?

ರಾಯಚೂರು [ಆ.23]: ಮಹಾ ರಥೋತ್ಸವದ ವೇಳೆ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ರಾಯಚೂರಿನ ಮಂತ್ರಾಲಯದ ಶ್ರೀಗಳ ವಿರುದ್ಧ ದೂರು ನೀಡಲಾಗಿದೆ.

ಮಹಾ ರಥೋತ್ಸವದ ವೇಳೆ 100 ರು. ನೋಟುಗಳನ್ನು ತೂರಿದ ಘಟನೆಗೆ ಸಂಬಂಧಿಸಿದಂತೆ ಮಂತ್ರಾಲಯ ಠಾಣೆಯಲ್ಲಿ ಪೀಠಾಧಿಪರಿ ಸುಭುದೇಂದ್ರ ತೀರ್ಥರ ವಿರುದ್ಧ ದೂರು ಸಲ್ಲಿಸಲಾಗಿದೆ. 

ರಥೋತ್ಸವದ ವೇಳೆ ನೋಟುಗಳ ತೂರಿಕೆಯಿಂದ ಭಾರೀ ನೂಕುನುಗ್ಗಲು ಉಂಟಾಗಿತ್ತು. ಅಲ್ಲದೇ ಶಾಂತಿಯುವ ವಾತಾವರಣ ಕದಡಿತ್ತು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಕೋರಿ ನಾರಾಯಣ ಎನ್ನುವವರು ಮಂತ್ರಾಲಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ರಾಯರ 348 ನೇ ಆರಾಧನೆ; ಮಂತ್ರಾಲಯದಲ್ಲಿ ಮೇಳೈಸಿದೆ ವೈಭವ

ಕೆಲ ದಿನಗಳ ಹಿಂದಷ್ಟೇ ಮಂತ್ರಾಲಯದ ಶ್ರೀ ರಾಯರ ಸನ್ನಿಧಿಯಲ್ಲಿ ಆರಾಧನಾ ಮಹೋತ್ಸವ ಜರುಗಿತ್ತು.

PREV
click me!

Recommended Stories

ದಿವ್ಯಾಂಗ ಯುವತಿ ಮೇಲೆ ಬಲಾತ್ಕಾರ: ಯಾರಿಗೂ ಹೇಳದಂತೆ ಬೆದರಿಕೆ!
Bengaluru: ಕಂಡೋರ ಹೆಂಡ್ತಿಯನ್ನು ಪಟಾಯಿಸಿದ ಪೊಲೀಸಪ್ಪ; ಇದು ರೀಲ್ಸ್ ಅಂಟಿಯ ಮೋಹದ ಕಥೆ