ತಮ್ಮ ಮಾಲೀಕತ್ವದ ಸಕ್ಕರೆ ಕಾರ್ಖಾನೆಗೆ ಕಾನೂನು ಬಾಹಿರವಾಗಿ ಬೇಸಾಯದ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿದ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮಸ್ಥರು| ಶಾಮನೂರು ಶಿವಶಂಕರಪ್ಪ ಕುಟುಂಬದ ವಿರುದ್ಧ ಲೋಕಾಯುಕ್ತರಿಗೆ ದೂರು| ಭೂ ಅಕ್ರಮದಲ್ಲಿ ಕೆಐಎಡಿಬಿ ಅಧಿಕಾರಿಗಳು ಶಾಮನೂರು ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ| ಇದರಿಂದ ನೂರಾರು ದಲಿತರು ಹಾಗೂ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ| ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿಕೊಂಡ ಗ್ರಾಮಸ್ಥರು|
ಬೆಂಗಳೂರು(ಸೆ.26): ತಮ್ಮ ಮಾಲೀಕತ್ವದ ಸಕ್ಕರೆ ಕಾರ್ಖಾನೆಗೆ ಕಾನೂನು ಬಾಹಿರವಾಗಿ ಬೇಸಾಯದ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಕುಟುಂಬದ ವಿರುದ್ಧ ಲೋಕಾಯುಕ್ತರಿಗೆ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮಸ್ಥರು ದೂರು ನೀಡಿದ್ದಾರೆ.
ಈ ಭೂ ಅಕ್ರಮದಲ್ಲಿ ಕೆಐಎಡಿಬಿ ಅಧಿಕಾರಿಗಳು ಶಾಮನೂರು ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ನೂರಾರು ದಲಿತರು ಹಾಗೂ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಸರ್ವೆ ನಂ.236 ಸಿನಲ್ಲಿರುವ 113 ಎಕರೆ ಜಮೀನಿನಲ್ಲಿ 1980 ರಿಂದಲೂ ನೂರಾರು ಕುಟುಂಬಗಳು ಸಾಗುವಳಿ ಮಾಡುತ್ತಿದ್ದವು. 1998ರಲ್ಲಿ ಕಂದಾಯ ಇಲಾಖೆ ಭೂರಹಿತ ದಲಿತ ಸಾಗುವಳಿದಾರ ರೈತರಿಗೆ ಆ ಭೂಮಿ ಮಂಜೂರು ಮಾಡಿತ್ತು. ಬಳಿಕ ಭೂಮಿಯಲ್ಲಿ ರಾಗಿ ಹಾಗೂ ಮೆಕ್ಕೆ ಜೋಳವನ್ನು ಅವರು ಬೆಳೆಯುತ್ತಿದ್ದರು. 1985 ರಲ್ಲೇ ಆ ಭೂಮಿಗೆ ಸಣ್ಣ ನೀರಾವರಿ ಇಲಾಖೆ ತುಂಗಭದ್ರಾ ನದಿಯಿಂದ ನೀರಾವರಿ ಸೌಲಭ್ಯ ಸಹ ಕಲ್ಪಿಸಿತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.
ನಂತರ ಆ ಭೂಮಿಯನ್ನು 20 ವರ್ಷಗಳ ಮಾಲಿಕ ಎಸ್.ಎಸ್.ಬಕ್ಕೇಶ್ ರೈತರಿಂದ ಪಡೆದಿದ್ದರು. ಆದೆ ಕರಾರು ಅವಧಿ ಗಿದ ಬಳಿಕ ಪೂರ್ವ ಒಪ್ಪಂದಂತೆ ಭೂಮಿ ಮರಳಿಸಲು ಶಾಮನೂರು ಕುಟುಂಬ ನಿರಾಕರಿಸುತ್ತಿದೆ. ರೈತರಿಂದ ಗುತ್ತಿಗೆ ಪಡೆದ ಭೂಮಿಯನ್ನು ಸಕ್ಕರೆ ಕಾರ್ಖಾನೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಕಾನೂನು ಬಾಹಿರವಾಗಿ ದಾವಣಗೆರೆ ವಿಶೇಷ ಭೂಸ್ವಾಧೀನಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಇದರಲ್ಲಿ ಕೆಎಐಎಡಿ ಅಧಿಕಾರಿಗಳು ಶಾಮನೂರು ಕುಟುಂಬಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.