ಗಂಗಾವತಿ: ಪೌರಾಯುಕ್ತರ ನಕಲಿ ಸಹಿ, ಗುತ್ತಿಗೆದಾರನ ವಿರುದ್ಧ ದೂರು

Kannadaprabha News   | Asianet News
Published : May 28, 2020, 08:03 AM IST
ಗಂಗಾವತಿ: ಪೌರಾಯುಕ್ತರ ನಕಲಿ ಸಹಿ, ಗುತ್ತಿಗೆದಾರನ ವಿರುದ್ಧ ದೂರು

ಸಾರಾಂಶ

ಪೌರಾಯುಕ್ತ ಗಂಗಾಧರ ನಕಲಿ ಸಹಿ ಫೋರ್ಜರಿ ಮಾಡಿ ಕಾಮಗಾರಿ ಪಡೆದ ಗುತ್ತಿಗೆದಾರ ಮೀಟಾಯಿಗಾರ ಹನುಮಂತಯ್ಯ| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆ| ಗುತ್ತಿಗೆದಾರ ಹನುಮಂತಯ್ಯ ಮತ್ತು ಇದಕ್ಕೆ ಸಹಕರಿಸಿದ ನಗರಸಭೆ ಎಂಜಿನೀಯರ್‌ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಪೌರಾಯಕ್ತ ಗಂಗಾಧರ|

ಗಂಗಾವತಿ(ಮೇ.28): ನೀರಾವರಿ ಇಲಾಖೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆಯಲು ಧೃಡಿಕರಣಕ್ಕಾಗಿ ಇಲ್ಲಿಯ ನಗರ ಸಭೆಯ ಪೌರಾಯುಕ್ತರ ನಕಲಿ ಸಹಿ ಮಾಡಿ ಗುತ್ತಿಗೆ ಪಡೆದುಕೊಂಡಿರುವದು ಬೆಳಕಿಗೆ ಬಂದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಕಾಮಗಾರಿಯ ಗುತ್ತಿಗೆ ಪಡೆಯುವುದಕ್ಕಾಗಿ ಗುತ್ತಿಗೆದಾರ ಮೀಟಾಯಿಗಾರ ಹನುಮಂತಯ್ಯ(ಅಂಜಿ) ಎಂಬುವರು ನಗರ ಸಭೆಯ ಪೌರಾಯುಕ್ತರಿಂದ ಧೃಡಿಕರಣ  ಪಡೆಯಬೇಕಾಗಿತ್ತು. ಮೇ.8 ರಂದು ಪೌರಾಯುಕ್ತ ಗಂಗಾಧರ ಅವರ ನಕಲಿ ಸಹಿ ಫೋರ್ಜರಿ ಮಾಡಿ ಕಾಮಗಾರಿ ಪಡೆದಿದ್ದಾರೆ.

ಕೊರೋನಾ ಬಗ್ಗೆ ಸಿದ್ದರಾಮಯ್ಯ ಪಿಎಚ್‌ಡಿ ಮಾಡಿದ್ದಾರೆಯೇ?

ಇದರ ಬಗ್ಗೆ ಅನುಮಾನಗೊಂಡ ನೀರಾವರಿ ಇಲಾಖೆಯ ಅಧಿಕಾರಿಗಳು ದಾಖಲೆಗಳ ಪರಿಶೀಲನೆಗೆ ಪೌರಾಯುಕ್ತರಿಗೆ ಕಳಿಸಿಕೊಟ್ಟಿದ್ದರಿಂದ ಖೊಟ್ಟಿ ಸಹಿ ಎಂದು ಗೊತ್ತಾಗಿದೆ. ಈಗ ಪೌರಾಯಕ್ತ ಗಂಗಾಧರ ಅವರು ಗುತ್ತಿಗೆದಾರ ಹನುಮಂತಯ್ಯ ಮತ್ತು ಇದಕ್ಕೆ ಸಹಕರಿಸಿದ ನಗರಸಭೆ ಎಂಜಿನೀಯರ್‌ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ