ಮದ್ಯ ಪ್ರಿಯರೇ ಎಚ್ಚರ: ಎಣ್ಣೆ ಆಸೆ ತೋರಿಸಿ ವಂಚನೆ

Kannadaprabha News   | Asianet News
Published : Apr 12, 2020, 07:13 AM IST
ಮದ್ಯ ಪ್ರಿಯರೇ ಎಚ್ಚರ: ಎಣ್ಣೆ ಆಸೆ ತೋರಿಸಿ ವಂಚನೆ

ಸಾರಾಂಶ

ಮದ್ಯವನ್ನು ಹೋಂ ಡೆಲಿವರಿ ಕೊಡುವುದಾಗಿ ವಂಚನೆ| ಹುಬ್ಬಳ್ಳಿಯಲ್ಲಿ ನಡೆದ ಘಟನೆ| ಫೇಸ್ಬುಕ್‌ ಮೂಲಕ ಪೋಸ್ಟ್‌ ಹಾಕಿ ಮದ್ಯವನ್ನು ಹೋಂ ಡೆಲಿವರಿ ಕೊಡುವುದಾಗಿ ಹೇಳಿ ವಂಚನೆ|ಈ ಕುರಿತು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು|

ಹುಬ್ಬಳ್ಳಿ(ಏ.12): ಲಾಕ್‌ಡೌನ್‌ ಅನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರ ಜಾಲವೊಂದು ಸಾಮಾಜಿಕ ಜಾಲತಾಣ ಫೇಸ್ಬುಕ್‌ ಮೂಲಕ ಪೋಸ್ಟ್‌ ಹಾಕಿ ಮದ್ಯವನ್ನು ಹೋಂ ಡೆಲಿವರಿ ಕೊಡುವುದಾಗಿ ಹೇಳಿ ವಂಚನೆ ನಡೆಸುತ್ತಿರುವ ನಗರದಲ್ಲಿ ನಡೆದಿವೆ. 

ಈ ಸಂಬಂಧ ಬಾರ್‌ ಮಾಲೀಕರು ದೂರು ನೀಡಿದ್ದು, ಸೈಬರ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹುಬ್ಬಳ್ಳಿಯ ತೇಜ ಲಿಕ್ಕರ್‌ ಹೆಸರಿನಲ್ಲಿ ಫೇಸ್ಬುಕ್‌ ಮೂಲಕ ಪೋಸ್ಟ್‌ ಹಾಕಿ ಮೊದಲು ಅರ್ಧ ಹಣವನ್ನು ಆನ್‌ಲೈನ್‌ ಮೂಲಕ ನೀಡಿ ನಿಮ್ಮ ಮನೆಗೆ ಮದ್ಯ ಕಳಿಸುತ್ತೇವೆ ಎಂದು ನಂಬಿಸಿ ದೂರವಾಣಿ ನಂಬರ್‌ ಸಹಿತ ಪೋಸ್ಟ್‌ ಹಾಕಿದ್ದಾರೆ. 

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ನಂತರ ಗ್ರಾಹಕರಿಗೆ ವ್ಯಾಟ್ಸಾಪ್‌ ಮೂಲಕ ಸಂದೇಶ ಕಳಿಸಿದ್ದು ಆನ್‌ಲೈನ್‌ ಪೇಮೆಂಟ್‌ ಮಾಡಿಸಿಕೊಂಡು ವಂಚಿಸಲಾಗುತ್ತಿದೆ. ಈ ಕುರಿತು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 

PREV
click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು