ವ್ಯಕ್ತಿ ತೀರಿಕೊಂಡ ಬಳಿಕವೂ ಅಂಗವಿಕಲ ವೇತನ ಪಾವತಿ..!

By Kannadaprabha NewsFirst Published Sep 16, 2020, 1:56 PM IST
Highlights

ವ್ಯಕ್ತಿ ತೀರಿಕೊಂಡ ಬಳಿಕವೂ ಕೂಡ ಬರೋಬ್ಬರು ನಾಲ್ಕು ವರ್ಷಗಳ ಕಾಲ ಅಂಗವಿಕಲರಿಗೆ ನೀಡುವ ಸರ್ಕಾರದ ಪಿಂಚಣಿ ಪಡೆಯಲಾಗಿದೆ. 

ವರದಿ : ಎನ್‌. ನಾಗೇಂದ್ರಸ್ವಾಮಿ 

ಕೊಳ್ಳೇಗಾಲ (ಸೆ.16):  ಇಂಟಾಗ್ರ ಎಂಬ ಖಾಸಗಿ ಕಂಪನಿಯೂ ಸರ್ಕಾರದ ಮಹಾತ್ವಾಕಾಂಕ್ಷೆಯ ಬಡವರಿಗೆ ಅನುಕೂಲ ಕಲ್ಪಿಸುವ ವಿಧವಾ, ಅಂಗವಿಕಲ, ವೃದ್ಧಾಪ್ಯ ವೇತನ ವಿತರಣೆ ಹೊಣೆ ಹೊತ್ತಿದ್ದು, ಕಂಪನಿ ನೌಕರನೊಬ್ಬ ಸತ್ತ ವ್ಯಕ್ತಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಸರ್ಕಾರಕ್ಕೆ ವಂಚಿಸಿ ದಾಖಲೆ ಸಹಿತ ಸಿಕ್ಕಿಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.

ಹಳೆ ಹಂಪಾಪುರದ ಸಿದ್ದರಾಮಪ್ಪ ಎಂಬ ವ್ಯಕ್ತಿಯೊಬ್ಬರು 22-3-2107ರ ಮಾ.22ರಂದು ಅನಾರೋಗ್ಯದಿಂದ ತೀರಿಕೊಳ್ಳುತ್ತಾರೆ. ಆದರೆ 2017ರಿಂದಲೂ ಇವರಿಗೆ (ಮೃತಪಟ್ಟು 42ತಿಂಗಳೇ ಸಂದಿದೆ) 2020ರ ವರೆಗೂ ಅಂಕವಿಕಲ ವೇತನ ದೊರೆತಿದೆ.

2017ರಲ್ಲಿ ಅಸುನೀಗಿದ ಸಿದ್ದರಾಮಪ್ಪ ಅವರ ಹೆಸರಿನಲ್ಲಿ ಕನಿಷ್ಠ 42 ತಿಂಗಳಿನಿಂದ ಒಟ್ಟು ಸುಮಾರು 30,000 ರು. ಗೋಲ್‌ ಮಾಲ್‌ ಮಾಡಿದದ್ದು, ಕಂದಾಯ ಇಲಾಖೆ ಹಾಗೂ ಅಸು ನೀಗಿದ ಕುಟುಂಬದವರನ್ನು ನೌಕರ ಶಂಕರ್‌ ಏಕಕಾಲದಲ್ಲಿ ವಂಚಿಸಿದ್ದಾನೆ.

ಹೀಗಿದೆ ಕಂಪನಿಯ ನೌಕರ ಗೋಲ್‌ ಮಾಲ್‌ ಪರಿ...

ಹಳೆ ಹಂಪಾಪುರದ ಸಿದ್ದರಾಮಪ್ಪ ಎಂಬುವರಿಗೆ 28-10-2008ರಿಂದಲೂ ಪ್ರಾರಂಭದಲ್ಲಿ 400 ರು. ಹಾಗೂ ನಂತರ 750 ರು. ವೇತನ ಬರುತ್ತಿತ್ತು. ಶಂಕರ್‌ ಹಂಪಾಪುರ ಗ್ರಾಮದ ಇಂಟಾಗ್ರ ಕಂಪನಿಯ ವ್ಯವಹಾರ ಪ್ರತಿನಿಧಿ​ಯಾಗಿದ್ದು, ವೇತನ ಬಡವಾಡೆ ಮಾಡುವ ನೌಕರ (ಸಿಎ) ಶಂಕರ್‌ ಕುಂತೂರು, ಹೊಂಡರಬಾಳು, ಹರಳೆ, ಸಿದ್ದಯ್ಯನಪುರ ಸೇರಿದಂತೆ ಹಲವು ಗ್ರಾಪಂಗಳಲ್ಲಿ ವೇತನ ವಿತರಣೆ ಮಾಡುತ್ತಿದ್ದಾನೆ.

ಹಳೆ ಹಂಪಾಪುರದಲ್ಲಿ ಸಿದ್ದರಾಮಪ್ಪ ನಿಧನದ ವಿಚಾರ ತಿಳಿದಿದ್ದರೂ ಅವರ ಹಣ ದುರ್ಬಳಕೆ ಮಾಡಿಕೊಳ್ಳುವ ಮೂಲಕ ನಾನಾ ತಂತ್ರ ಹಣೆದಿದ್ದಾರೆ. ತಮ್ಮ ಸಂಬಂಧಿ​ಯಾದ ಶ್ರೀಧರ್‌ ಎಂಬುವರು ತಮ್ಮ ಬಯೋಮೆಟ್ರಿಕ್‌ ಒತ್ತಿದರೆ ಸತ್ತಿರುವ ಸಿದ್ದರಾಮಪ್ಪ ಅವರ ಹಣ ನೇರವಾಗಿ ಇಂಟಾಗ್ರ ಕಂಪನಿಯ ನೌಕರ ಶಂಕರ್‌ ಖಾತೆಗೆ ಪಾವತಿಯಾಗುವಂತೆ(ಗೋಲ್‌ ಮಾಲ್‌) ತಂತ್ರ ಮಾಡಲಾಗಿದೆ.

'ಕಮಿಷನ್ ಹಣ ಕೊಡು' ಇಂಜಿನಿಯರ್ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕ ಬಂಧನ .

(ನಿಜವಾದ ದಿ. ಸಿದ್ದರಾಮಪ್ಪ ಆದಾರ್‌ ಸಂಖ್ಯೆ 654272470382) ಆದರೆ ಶ್ರೀಧರ್‌ ಆಧಾರ್‌ ಸಂಖ್ಯೆ 479031892066ಗೆ ಲಿಂಕ್‌ ಮಾಡಲಾಗಿದೆ. ಶ್ರೀಧರ್‌ ಬಯೋಮೆಟ್ರಿಕ್‌ಗೆ ಬೆರಳಿಟ್ಟರೆ ಎಲ್ಲ ಹಣವೂ ಶಂಕರ್‌ ಎಂಬಾತನ (64110076467 ಕೊಳ್ಳೇಗಾಲ ಎಡಿಬಿ) ಖಾತೆಗೆ ಸರಾಗವಾಗಿ ಹೋಗುತ್ತಿದೆ.

ಇಲ್ಲಿ ಮತ್ತೊಂದು ವಾಸ್ತವ ಸಂಗತಿ ಎಂದರೆ ಸತ್ತ ಸಿದ್ದರಾಮಪ್ಪನೇ ನಾನು ಎಂಬಂತೆ ಶ್ರೀಧರ್‌ ಎಂಬಾತ ಬೇನಾಮಿ ವ್ಯಕ್ತಿ ಎಂದು ಹೇಳಬಹುದು. ಕಾರಣ ಶ್ರೀಧರ್‌ ಬೆರಳಿಟ್ಟರೆ ಸಿದ್ದರಾಮಪ್ಪಗೆ ಹಣ ಮಂಜೂರಾಗುತ್ತೆ. ಮಂಜೂರಾದ ಹಣ ನೇರವಾಗಿ ಕಂಪನಿ ನೌಕರ ಶಂಕರ ಖಾತೆಗೆ ಹೋಗುತ್ತೆ ಎಂದರೆ ಇದ್ದು ಅಚ್ಚರಿಪಡುವ ಬೆಳವಣಿಗೆಯೇ ಸರಿ.

ಕೋಲಾರ: ಕಾರಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 2.94 ಕೋಟಿ ವಶ .

ಕಂದಾಯ ಇಲಾಖೆ ಇನ್ನಾದರೂ ಬಡವರಿಗೆ ತಲುಪಬೇಕಾದ ಸೌಲಭ್ಯ ದುರ್ಬಳಕೆ ಮಾಡಿಕೊಂಡ ಇಂತಹ ನೌಕರರು ಹಾಗೂ ಕಂಪನಿಯ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು, ಆಮೂಲಕ ಮರಣ ಹೊಂದಿದೆ ಸಿದ್ದರಾಮಪ್ಪ ಕುಟುಂಬಸ್ಥರಿಗೂ ನ್ಯಾಯ ಸಲ್ಲಿಸಬೇಕಿದೆ.

ಇನ್ನು ಹಲವರ ಹೆಸರಲ್ಲೂ ಗೋಲ್‌ ಮಾಲ್‌, ಬಸವಣ್ಣ ದೂರು

 ಇದೇ ರೀತಿಯಲ್ಲಿ ಕಂಪನಿ ನೌಕರ ಶಂಕರ್‌ ನಿಧನರಾಗಿರುವ ಮಹದೇವಮ್ಮ, ಲಿಂಗಯ್ಯ ಸೇರಿದಂತೆ ಹಲವರ ಹೆಸರಿನಲ್ಲೂ ಗೋಲ್‌ ಮಾಲ್‌ ನಡೆಸಿದ್ದಾರೆ ಎಂದು ತಾಪಂ ನ ಮಾಜಿ ಉಪಾಧ್ಯಕ್ಷ ಬಸವಣ್ಣ ದೂರಿದ್ದಾರೆ.

ಈ ಸಂಬಂಧ ಕಳೆದ 3ತಿಂಗಳ ಹಿಂದೆಯೇ ಸತ್ತ ಸಿದ್ದರಾಮಪ್ಪ ಹೆಸರಿನಲ್ಲಿ ನೌಕರ ಶಂಕರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಬಸವಣ್ಣ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ನಿರ್ದೇಶಕರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ
 
ಸತ್ತ ವ್ಯಕ್ತಿ ಹೆಸರಿನಲ್ಲಿ ಇಂಟಾಗ್ರ ಕಂಪನಿಯ ನೌಕರ ಹಣ ಪಡೆದು ತನ್ನ ಖಾತೆಗೆ ಹಾಕಿಸಿಕೊಳ್ಳುತ್ತಿದ್ದರೆ ಇದು ಅಕ್ಷಮ್ಯ. ಈ ಸಂಬಂಧ ಸೂಕ್ತ ದಾಖಲೆ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ಜರುಗದಂತೆ ಕ್ರಮಕೈಗೊಳ್ಳುವೆ.

-ಕುನಾಲ್‌, ತಹಸಿಲ್ದಾರ್‌ ಕೊಳ್ಳೇಗಾಲ.

click me!