ಕಾರ್ಕಳ (ಆ.06): ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿ ದಕ್ಷಿಣ ಕನ್ನಡದ ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗಿದ್ದಾರೆ. ಮಂತ್ರಿಯಾದ ಬೆನ್ನಲ್ಲೇ ಅವರ ಪೋಸ್ಟ್ ಒಂದು ವೈರಲ್ ಆಗಿದೆ.
ಮಂತ್ರದಂಡ ಅಲ್ಲ ಮಾನದಂಡ! ಬೊಮ್ಮಾಯಿ ಮಂತ್ರಿಮಂಡಲ ಆಯ್ಕೆಯ ರಹಸ್ಯ
ಸದ್ಯ ಶಾಸಕ ವಿ. ಸುನಿಲ್ ಕುಮಾರ್ ಇದರ ಬೆನ್ನಲ್ಲೇ ತಮ್ಮ ಅಭಿಮಾನಿಗಳಲ್ಲೊಂದು ಮನವಿ ಮಾಡಿದ್ದಾರೆ. ತಮ್ಮನ್ನು ಅಭಿನಂದಿಸಲು ಬರುವವರು ಯಾರೂ ಹಾರ ತುರಾಯಿಗಳನ್ನು ತರಬೇಡಿ ಎಂದು ಹೇಳಿದ್ದಾರೆ.
ಇಂದು ನೂತನ ಸಚಿವರಿಗೆ ಖಾತೆ ಹಂಚಿಕೆ?
"ಅಭಿನಂದಿಸಲು ಹಾರ ತುರಾಯಿ ತರಬೇಡಿ.. ಕೊಡಲೇಬೇಕು ಅಂದಿದ್ದರೆ ಒಂದು ಕನ್ನಡ ಪುಸ್ತಕ ಕೊಂಡು ತನ್ನಿ. ಅದನ್ನು ಕಾರ್ಕಳ ಗ್ರಂಥಾಲಯಕ್ಕೆ ಕೊಡುತ್ತೇನೆ"
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ತಮ್ಮನ್ನು ನೋಡಲು ಬರುವವರು ಹಾರ ತುರಾಯಿ ತರಬಾರದೆಂದು ಜನರಲ್ಲಿ ಮನವಿ ಮಾಡಿದ್ದರು. ಇದೀಗ ಬಿಜೆಪಿ ಶಾಸಕ ಸುನಿಲ್ ಕುಮಾರ್ ಈ ನಡೆಯು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಕನ್ನಡಾಭಿಮಾನವೂ ಇಲ್ಲಿ ಕಾಣುತ್ತಿವೆ.