ಚಳಿ, ಶೀತಗಾಳಿಯಿಂದ ಅನಾರೋಗ್ಯ ಹೆಚ್ಚಳ : ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳ ಸಲಹೆ

Kannadaprabha News   | Kannada Prabha
Published : Nov 30, 2025, 08:25 AM IST
Bengaluru

ಸಾರಾಂಶ

ನಗರದಲ್ಲಿ ಕಳೆದ ಒಂದು ವಾರದಿಂದ ಚಳಿ, ಶೀತಗಾಳಿಯಿಂದಾಗಿ ಮಕ್ಕಳು ಹಾಗೂ ವಯೋವೃದ್ಧರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಳಿ ಏರಿಕೆಯಾಗುವ ಸಾಧ್ಯತೆಯಿರುವುದು ಅನಾರೋಗ್ಯಕ್ಕೆ ಕಾರಣವಾಗಲಿದ್ದು ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು : ನಗರದಲ್ಲಿ ಕಳೆದ ಒಂದು ವಾರದಿಂದ ಚಳಿ, ಶೀತಗಾಳಿಯಿಂದಾಗಿ ಮಕ್ಕಳು ಹಾಗೂ ವಯೋವೃದ್ಧರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಳಿ ಏರಿಕೆಯಾಗುವ ಸಾಧ್ಯತೆಯಿರುವುದು ಅನಾರೋಗ್ಯಕ್ಕೆ ಕಾರಣವಾಗಲಿದ್ದು ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮೋಡ ಕವಿದ ವಾತಾವರಣ, ಚಳಿಯ ವಾತಾವರಣ

ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ, ಚಳಿಯ ವಾತಾವರಣ ಉಂಟಾಗುತ್ತಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಜನತೆ ಸ್ಟೆಟರ್‌, ಮಂಕಿ ಕ್ಯಾಪ್‌, ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ. ವಿಶೇಷವಾಗಿ ನಸುಕಿನ ವೇಳೆ, ಸಂಜೆ ವಾಯುವಿಹಾರಕ್ಕೆ ತೆರಳುವವರು ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ.

ಈ ನಡುವೆ ಆಸ್ಪತ್ರೆಗಳಿಗೆ ನೆಗಡಿ, ತಲೆನೋವು, ಸಣ್ಣಪುಟ್ಟ ಜ್ವರದಿಂದಾಗಿ ತೆರಳುತ್ತಿರುವವ ಸಂಖ್ಯೆ ನಿಧಾನಕ್ಕೆ ಹೆಚ್ಚುತ್ತಿದೆ. ಮಕ್ಕಳು, ವೃದ್ಧರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತಿದೆ. ನಾಲ್ಕು ವರ್ಷದೊಳಗಿನ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿವೆ. ಇದರಿಂದ ಆತಂಕಗೊಂಡಿರುವ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ.

ಈ ಅವಧಿಯಲ್ಲಿ ಜನರು, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ಉಷ್ಣತೆ ಮತ್ತು ಆರೋಗ್ಯದಿಂದಿರಲು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಬೆಚ್ಚಗಿರುವ ಉಡುಪು ಧರಿಸುವುದು, ಬಿಸಿಯಾದ ಆರೋಗ್ಯಕರ ಆಹಾರ, ಪೇಯ ಸೇವಿಸಬೇಕು. ಮತ್ತು ಅಗತ್ಯವಿಲ್ಲದಿದ್ದರೆ ಶೀತದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸುವುದು ಅತ್ಯಗತ್ಯ. ಡಿಸೆಂಬರ್‌, ಜನವರಿಯಲ್ಲಿ ಶೀತಗಾಳಿ ಹೆಚ್ಚುವ ಸಾಧ್ಯತೆಯಿದ್ದು, ಅನಾರೋಗ್ಯ ಉಂಟಾದಲ್ಲಿ ನಿರ್ಲಕ್ಷಿಸದರೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಮಕ್ಕಳಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮು ಲಕ್ಷಣ

ಕೆ.ಸಿ.ಜನರಲ್‌ ಸೇರಿ ಇತರೆ ಆಸ್ಪತ್ರೆಗೆ ಬರುತ್ತಿರುವಂತಹ ಮಕ್ಕಳಲ್ಲಿ ಜ್ವರ, ನೆಗಡಿ ಹಾಗೂ ಕೆಮ್ಮು ಲಕ್ಷಣಗಳಿರುವುದು ಕಂಡುಬರುತ್ತಿದೆ. ಚಳಿ ಹೆಚ್ಚಾಗಿ ಅನಾರೋಗ್ಯ ಪ್ರಮಾಣ ಹೆಚ್ಚಾದಲ್ಲಿ ಸಾಮಾನ್ಯ ಜ್ವರ ಫ್ಲೂ, ಟೈಫಾಯಿಡ್‌, ಹೆಪಟೈಟಿಸ್‌ ಎ, ನ್ಯುಮೋನಿಯಾಗೆ ಪರಿವರ್ತನೆ ಆಗಬಹುದು. ಅಲ್ಲದೆ, ಸೊಳ್ಳೆಯಿಂದ ಹರಡುವಂತಹ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಹೇಳಿದ್ದಾರೆ.

ಚಳಿಯಿಂದಾಗಿ ಸಾಮಾನ್ಯ ಸಣ್ಣಪುಟ್ಟ ಆರೋಗ್ಯ ತೊಂದರೆ ಉಂಟಾದವರು ಮಾತ್ರ ಬರುತ್ತಿದ್ದಾರೆ. ಹೇಳುವಷ್ಟು ಹೆಚ್ಚಿನ ಅನಾರೋಗ್ಯಕ್ಕೆ ತುತ್ತಾದವರು ಬರುತ್ತಿಲ್ಲ.

ಡಾ.ಮೋಹನ್‌ ರಾಜಣ್ಣ

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?