Tumakuru : ಸಿಸಿ ಟಿವಿಗೆ ಸಗಣಿ ಮೆತ್ತಿ ಕೊಬ್ಬರಿ ಕಳ್ಳತನ

Published : Oct 14, 2022, 04:39 AM IST
Tumakuru :  ಸಿಸಿ ಟಿವಿಗೆ ಸಗಣಿ ಮೆತ್ತಿ ಕೊಬ್ಬರಿ ಕಳ್ಳತನ

ಸಾರಾಂಶ

ಸಿಸಿ ಟಿವಿಗೆ ಸಗಣಿ ಮೆತ್ತಿ ಮನೆಯ ಮುಂಭಾಗ ಇರಿಸಲಾಗಿದ್ದ ಕೊಬ್ಬರಿ ಚೀಲವನ್ನು ಕಳ್ಳತನ ಮಾಡಿರುವ ಸಂಗತಿ ತಾಲೂಕಿನ ಗೋಣಿತುಮಕೂರು ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

 ತುರುವೇಕೆರೆ(ಅ.14): ಸಿಸಿ ಟಿವಿಗೆ ಸಗಣಿ ಮೆತ್ತಿ ಮನೆಯ ಮುಂಭಾಗ ಇರಿಸಲಾಗಿದ್ದ ಕೊಬ್ಬರಿ ಚೀಲವನ್ನು ಕಳ್ಳತನ ಮಾಡಿರುವ ಸಂಗತಿ ತಾಲೂಕಿನ ಗೋಣಿತುಮಕೂರು ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ತಾಲೂಕಿನ ಗೋಣಿ ತುಮಕೂರಿನ (Tumakur)  ರೈತ ರವೀಂದ್ರ ಕುಮಾರ್‌ ಮನೆಯಲ್ಲಿ ಬುಧವಾರ ರಾತ್ರಿ ಸುಮಾರು 48 ಕೊಬ್ಬರಿ ಚೀಲಗಳನ್ನು ಕಳ್ಳತನ ಮಾಡಲಾಗಿದೆ. ಬುಧವಾರ ರಾತ್ರಿ ಸುಮಾರು 12 ಗಂಟೆವರೆಗೂ ಕೂಲಿ ಕಾರ್ಮಿಕರು ಕೊಬ್ಬರಿ (Coconut) ಚೀಲಗಳನ್ನು ಸಿದ್ಧ ಮಾಡಿದ್ದಾರೆ. ಸಿದ್ದ ಮಾಡಿಟ್ಟಿದ್ದ ಚೀಲವನ್ನು ಮನೆಯ ಮುಂದೆ ಜೋಡಿಸಿಟ್ಟಿದ್ದಾರೆ. ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಮನೆಯ ಮುಂದೆ ಶಬ್ದವಾಗಿದೆ. ಮನೆಯ ಮಾಲೀಕ ರವೀಂದ್ರ ಕುಮಾರ್‌ ನಿದ್ದೆಯಿಂದ ಎದ್ದು ಕೂಗುತ್ತಾ ಮನೆಯಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಆದರೆ ಕಳ್ಳರು ಮನೆಯವರು ಆಚೆ ಬರದಂತೆ ಹೊರಗಿನಿಂದ ಬಾಗಿಲಿಗೆ ಚಿಲಕ ಹಾಕಿದ್ದರು.

ರವೀಂದ್ರರವರ ಕೂಗಾಟ ಕೇಳಿ ಮನೆಯವರೆಲ್ಲಾ ಎದ್ದು ಹೊರಗೆ ಬರುವ ವೇಳೆಗೆ ವಾಹನದ ಸಮೇತ ಕಳ್ಳರು ಪರಾರಿಯಾಗಿದ್ದಾರೆ. ತದ ನಂತರ ಹೊರಬಂದು ನೋಡಲಾಗಿ ತಮ್ಮ ಮನೆಯಲ್ಲಿ ಅಳವಡಿಸಲಾಗಿದ್ದ ಎರಡು ಸಿಸಿಟಿವಿಗೆ ಸಗಣಿ ಮೆತ್ತಿರುವುದು ಕಂಡು ಬಂದಿದೆ. ಅಲ್ಲದೇ ಸಿಸಿ ಟಿವಿಯ ವೈರ್‌ಗಳನ್ನೂ ಸಹ ತುಂಡರಿಸಲಾಗಿದೆ. ಪ್ರತಿ ಚೀಲದಲ್ಲಿ ತಲಾ 25 ಕೆಜಿಯಂತೆ ಕೊಬ್ಬರಿಯನ್ನು ತುಂಬಿಡಲಾಗಿತ್ತು. ಒಟ್ಟು ಸುಮಾರು 1200 ಕೆಜಿ ಕೊಬರಿಯನ್ನು ಕದ್ದೊಯ್ಯಲಾಗಿದೆ. ಸುಮಾರು 1.50 ಲಕ್ಷ ರು.ಗಳಷ್ಟುನಷ್ಠ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗ್ರಾಂ.ಪಂ ಅಧ್ಯಕ್ಷನ ಕಿಡ್ನಾಪ್

ನೀವು ರೆಸಾರ್ಟ್ ರಾಜಕೀಯವನ್ನ ನೋಡಿರ್ತೀರಿ. ಆಪರೇಷನ್ ಕಮಲ, ಆಪರೇಷನ್ ಹಸ್ತದ ಬಗ್ಗೆ ಕೂಡ ಕೇಳಿರ್ತೀರಿ. ಇದೆಲ್ಲಾ ಡೆಲ್ಲಿ ರಾಜಕೀಯ.. ಆದ್ರೆ ಇಲ್ಲೊಂದು ಹಳ್ಳಿಯಲ್ಲಿ ಇವೆಲ್ಲವನ್ನ ಮೀರಿಸುವಂತಹ ರಾಜಕೀಯವೊಂದು ನಡೆದಿದೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಅಧಿಕಾರದ ಗದ್ದುಗೆ ಏರಲು ಏನೇನು ಕಸರತ್ತು ನಡೆಸುತ್ತಾರೆ ಅನ್ನೋದನ್ನ ನೀವೆಲ್ಲರೂ ನೋಡಿರ್ತೀರ. ಸಂಖ್ಯಾಬಲ ಹೆಚ್ಚಿಸಲು ಕೆಲವರನ್ನ ಹಣ ಬಲದಿಂದ ಕೊಂಡುಕೊಂಡ್ರೆ, ಇನ್ನೂ ಕೆಲವರನ್ನ ರೆಸಾರ್ಟ್ ನಲ್ಲಿ ಇಟ್ಟು ರಾಜಾತಿಥ್ಯ ನೀಡೋದನ್ನ ಕೂಡ ನೀವು ಟಿವಿಗಳಲ್ಲಿ ನೋಡಿರ್ತೀರಿ. ಆದ್ರೆ ಇಲ್ಲೊಂದು ಗ್ರಾ.ಪಂ ಚುನಾವಣೆ ಡೆಲ್ಲಿ ರಾಜಕೀಯವನ್ನ ಕೂಡ ಮೀರಿಸಿಬಿಟ್ಟಿದೆ. ಇಂಥದೊಂದು ಹೈ ವೋಲ್ಟೇಜ್ ಚುನಾವಣೆ ನಡೆದಿರೋದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ನಿಡಸಾಲೆ ಗ್ರಾ.ಪಂಯಲ್ಲಿ. ಇವತ್ತು ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ನಿರ್ಧರಿಸಲಾಗಿತ್ತು. ಅವಿಶ್ವಾಸ ಗೊತ್ತುವಳಿ ಬಳಿಕ ಗ್ರಾ.ಪಂ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು. ಆದ್ರೆ ಈ ಚುನಾವಣೆಗೆ ಒಂದು ದಿನ ಮುನ್ನವೇ ಜೆಡಿಎಸ್ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿ ಮಂಜುನಾಥ್ ಎಂಬುವವರನ್ನ ಸೀನಿಮಿಯ ರೀತಿಯಲ್ಲಿ ಕಿಡ್ನಾಪ್ ಮಾಡಲಾಗಿದೆ. ಗ್ರಾ.ಪಂ ಸದಸ್ಯನನ್ನ ಕಿಡ್ನಾಪ್ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗ್ರಾ.ಪಂ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ 
ಕಳೆದ ಮೂರು ದಿನಗಳ ಹಿಂದೆ ಕೆಲ ಗ್ರಾ.ಪಂ ಸದಸ್ಯರ ಜೊತೆ ಮಂಜುನಾಥ್ ಪ್ರವಾಸಕ್ಕೆ ಹೋಗಿದ್ರು. ನಿನ್ನೆ ರಾತ್ರಿ ಪ್ರವಾಸ ಮುಗಿಸಿ ಬರುವಾಗ ಎಡೆಯೂರಿನ ಧಾರ್ಣಿಕ ಹೋಟೆಲ್ ಗೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ಹೊರಗೆ ಬಂದ ಮಂಜುನಾಥ್ ಉಳಿದವರಿಗಾಗಿ ಕಾಯುತ್ತಾ ನಿಂತಿದ್ರು. ಈ ವೇಳೆ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಮಂಜುನಾಥ್ ಅವರನ್ನ ಅಪಹರಿಸಿ ಕೊಡೊಯ್ದಿದ್ದಾರೆ. 

ಇನ್ನು ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಂಜುನಾಥ್ ಅವರನ್ನ ಕಾಂಗ್ರೆಸ್ ನವರೇ ಅಪಹರಿಸಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ. ಈ ಬಗ್ಗೆ ಅಮೃತ್ತೂರು ಪೊಲೀಸ್ ಠಾಣೆಯಲಿ ದೂರು ಕೂಡ ದಾಖಲಾಗಿದ್ದು, ಶೀಘ್ರವೇ ಕಿಡ್ನಾಪ್ ಆಗಿರುವ ಮಂಜುನಾಥ್ ಅವರನ್ನ ಹುಡುಕಿಕೊಡುವಂತೆ ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ಕೂಡ ನಡೆಸಿದ್ದಾರೆ. 

ಒಟ್ಟಿನಲ್ಲಿ ನಿಡಸಾಲೆ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿದ್ದ ಚುನಾವಣೆ ವೇಳೆ ಭಾರೀ ಹೈಡ್ರಾಮಾವೇ ನಡೆದುಹೋಗಿದ್ದು, ಸದ್ಯ ಪೊಲೀಸರು ಕಿಡ್ನಾಪ್ ಆಗಿರುವ ಮಂಜುನಾಥ್ ಅವರ ಹುಡುಕಾಟದಲ್ಲಿದ್ದಾರೆ.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ