ಕೊಲ್ಲೂರು ಮೂಕಾಂಬಿಕೆಗೆ 1.6 ಕೆ.ಜಿ ಬೆಳ್ಳಿ ಖಡ್ಗ ಅರ್ಪಿಸಿದ ಸಿಎಂ ವಿಜಯ್, ಸುದೀರ್ಘ ಆಳ್ವಿಕೆ ಸೂಚನೆ?

Published : Jun 12, 2026, 04:34 PM IST
CM Vijay

ಸಾರಾಂಶ

ತಮಿಳುನಾಡು ಸಿಎಂ ವಿಜಯ್ ಜೊಸೆಫ್ ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ್ದಾರೆ. ವಿಶೇಷ ಅಂದರೆ ಈ ಸಂಪ್ರದಾಯ ಮೂಲಕ ವಿಜಯ್ ತಮಿಳುನಾಡಿನಲ್ಲಿ ಸುದೀರ್ಘ ಆಳ್ವಿಕೆಯ ಸೂಚೆ ನೀಡಿದ್ದಾರೆ.

ಉಡುಪಿ (ಜೂ.12) ತಮಿಳುನಾಡು ಮುಖ್ಯಮಂತ್ರಿ ಜೊಸೆಫ್ ವಿಜಯ್ ಇಂದು ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ವಿಜಯ್ ಬಳಿಕ ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ್ದಾರೆ. ಈ ಹಿಂದಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿಆರ್ ಚಿನ್ನದ ಖಡ್ಗದ ಕಾಣಿಕೆಯಾಗಿ ನೀಡಿದ್ದರು. ಇದೀಗ ಮುಖ್ಯಮಂತ್ರಿ ವಿಜಯ್ ಬೆಳ್ಳಿ ಖಡ್ಗ ನೀಡುವ ಮೂಲಕ ತಮಿಳುನಾಡು ರಾಜಕೀಯದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸುವ ಸೂಚನೆ ನೀಡಿದ್ದಾರ.

ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ ಜೊಸೆಫ್ ವಿಜಯ್ 30 ನಿಮಿಷಗಳ ಕಾಲ ದೇಗುಲದಲ್ಲಿ ಕಳೆದಿದ್ದಾರೆ. ದೇವಿ ದರ್ಶನ ಪಡೆದು ವಿಶೇ್ಷ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಯಾವುದೇ ವಿಶೇಷ ಸಂಕಲ್ಪ ಮಾಡಿಲ್ಲ. ದೇವಿಗೆ ಕೈಮುಗಿದು ತೆರಳಿದ್ದಾರೆ. ದೇವಿ ದರ್ಶನ ಬಳಿಕ ಬೆಳ್ಳಿ ಖಡ್ಗ ಉಡುಗೊರೆಯಾಗಿ ನೀಡಿದ್ದಾರೆ. ದೇಗುಲ ಭೇಟಿ ವೇಳೆ ಎಂಜಿಆರ್ ನೀಡಿದ್ದ ಚಿನ್ನದ ಖಡ್ಗವನ್ನು ವಿಜಯ್ ವೀಕ್ಷಿಸಿದ್ದಾರೆ.

1.6 ಕೆ.ಜಿ ತೂಕದ ಬೆಳ್ಳಿ ಖಡ್ಗ

ಮುಖ್ಯಮಂತ್ರಿ ಜೊಸೆಫ್ ವಿಜಯ್ 1.6 ಕೆ.ಜಿ ತೂಕದ ಬೆಳ್ಳಿ ಖಡ್ಗವನ್ನು ಮೂಕಾಂಬಿಕಾ ದೇವಿಗೆ ಕಾಣಿಕೆಯಾಗಿ ಅರ್ಪಿಸಿದ್ದಾರೆ. ಭಕ್ತಿಯಿಂದ ವಿಜಯ್ ಕಾಣಿಕೆಯಾಗಿ ನೀಡಿದ ಬೆಳ್ಳಿ ಖಡ್ಗವನ್ನು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಆಡಳಿತ ಮಂಡಳಿ ಸ್ವೀಕರಿಸಿ ರಶೀದಿ ನೀಡಿದ್ದಾರೆ. ತಮಿಳುನಾಡು ಜನಪ್ರಿಯ ಮುಖ್ಯಮಂತ್ರಿಗಳು ಕೊಲ್ಲೂರಿಗೆ ಭೇಟಿ ನೀಡಿ ಭಕ್ತಿ ಕಾಣಿಕೆ ಅರ್ಪಿಸುವ ಸಂಪ್ರದಾಯವನ್ನು ವಿಜಯ್ ಜೊಸೆಫ್ ಮುಂದುವರಿಸಿದ್ದಾರೆ.

ದೇವಿ ದರ್ಶನ ಬಳಿಕ ದೇಗುಲದಿಂದ ಹೊರಬಂದ ವಿಜಯ್ ಜೊಸೆಫ್ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ದೇಗುಲದಿಂದ ಸುಮಾರು 10 ಮೀಟರ್ ದೂರ ನಡೆದು ಅಭಿಮಾನಿಗಳತ್ತ ಕೈಬೀಸಿದ್ದಾರೆ.

ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರಿಂದ ಸಂಕಲ್ಪ ಮಾಡಲಾಗಿದೆ. ದೇವಲದ ಮುಂಭಾಗದಲ್ಲಿರುವ ಧ್ವಜಕ್ಕೆ ನಮಿಸಿ ದೇಗುಲ ಎಂಟ್ರಿಕೊಟ್ಟಿದ್ದಾರೆ. ಅರ್ಚಕರ ಸಮ್ಮುಖದಲ್ಲಿ ಸಂಕಲ್ಪ ಮಾಡಿದ ಸಿಎಂ ವಿಜಯ್ ಕೈಮುಗಿದು ಹೊರಬಂದಿದ್ದಾರೆ. ಇದೇ ವೇಳೆ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಹೆಗ್ಡೆ ಉಪಸ್ಥಿತರಿದ್ದರು.

 

PREV
Read more Articles on
click me!

Recommended Stories

ಗಮನದಲ್ಲಿರಲಿ: ಯಶವಂತಪುರದಿಂದ ಹೊರಡುವ 2 ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿಸ್ತರಣೆ, ಇಲ್ಲಿದೆ ಸಂಪೂರ್ಣ ಮಾಹಿತಿ
ಕೊಂಕಣ ರೈಲ್ವೆ ಅಭಿವೃದ್ಧಿಗೆ ಕೇಂದ್ರದಿಂದ 7000ಕೋಟಿ ಅನುದಾನಕ್ಕೆ ಯತ್ನ, ಕಾರವಾರ-ಮಡಗಾಂವ್ ರೈಲು ವೇಳಾಪಟ್ಟಿ ಪರಿಷ್ಕರಣೆ