ಬಡವರ ಅಭ್ಯುದಯವಾಗಬೇಕೆಂಬುದು ಸಿಎಂ ಆಶಯ

By Kannadaprabha News  |  First Published Oct 16, 2023, 8:21 AM IST

ಬಡವರ ಅಭ್ಯುದಯ ಆಗಬೇಕೆಂಬುದು ಸಿದ್ದರಾಮಯ್ಯ ಅವರ ಆಶಯ. ಸಿದ್ದರಾಮಯ್ಯರವರ ಅನ್ನಭಾಗ್ಯ ಜನರಿಗೆ ಬದುಕು ನೀಡಿದೆ. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಇಂತವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು


 ತುಮಕೂರು :  ಬಡವರ ಅಭ್ಯುದಯ ಆಗಬೇಕೆಂಬುದು ಸಿದ್ದರಾಮಯ್ಯ ಅವರ ಆಶಯ. ಸಿದ್ದರಾಮಯ್ಯರವರ ಅನ್ನಭಾಗ್ಯ ಜನರಿಗೆ ಬದುಕು ನೀಡಿದೆ. ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಇಂತವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ಮಧುಗಿರಿ ಕುರುಬರ ಸಮುದಾಯ ಭವನದಲ್ಲಿ ಕನಕ ನೌಕರರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಗಳಿಗೆ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

undefined

ಯಾವ ರೂ ಇಂದು ಅನ್ನ ಬೇಡುತ್ತಿಲ್ಲ. ಅದಕ್ಕೆ ಕಾರಣ ಅನ್ನಭಾಗ್ಯ. ಬಡವರ ಕಾರ‍್ಯಕ್ರಮಗಳನ್ನು ತೆಗೆದುಕೊಂಡು ಹೋದರೆ ಸಿದ್ದರಾಮಯ್ಯ ಮೊದಲ ಆದ್ಯತೆ ನೀಡುತ್ತಾರೆ. ಅವರು ಎಂದಿಗೂ ನುಡಿದಂತೆ ನಡೆದವರು. ಅವರು ಸುಳ್ಳು ಹೇಳುವವರಲ್ಲ. ಯಾರ ಬಗ್ಗೆಯೂ ಹೇಳಿಕೆ ಮಾತು ಕೇಳುವವರಲ್ಲ. ಎಲ್ಲರನ್ನೂ ಸಮಾನವಾಗಿ ಕೊಂಡುಯ್ಯುತ್ತಾರೆ. ಆದ್ದರಿಂದ ನಮಗೆಲ್ಲ ಅವರು ಅಚ್ಚುಮೆಚ್ಚು ಎಂದು ಹೇಳಿದರು.

ಗಂಡಿರಲಿ, ಹೆಣ್ಣಿರಲಿ ಇಬ್ಬರಿಗೂ ಸಮಾನವಾದ ಬುದ್ಧಿ ಶಕ್ತಿ ಇರುತ್ತದೆ. ಪರಿಸರ ಮತ್ತು ಸೂಕ್ತ ಅವಕಾಶ ಇದ್ದಾಗ ಸಾಧನೆ ಮಾಡಲು ಸಾಧ್ಯ. ವಿದ್ಯೆಗೆ ಸರ್ವಸ್ವ ಗಳಿಸುವ ಶಕ್ತಿ ಇದೆ. ಯಾವ ಮಕ್ಕಳಲ್ಲೂ ಕೀಳರಿಮೆಯನ್ನು ಬೆಳೆಸಬಾರದು. ಇದರಿಂದ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

1957 ರಲ್ಲಿ ನನ್ನ ಸಹಪಾಠಿಯನ್ನು ಶಾಲೆಯಲ್ಲಿ ಶುಲ್ಕ ಪಾವತಿಸದ ಕಾರಣಕ್ಕೆ ಆಚೆಗೆ ಹಾಕಿದ್ದರು. ಅಂದೇ ತೀರ್ಮಾನ ಮಾಡಿದ್ದೆ ಅಸಹಾಯಕರಿಗೆ ನೆರವಾಗಬೇಕು ಎಂದು, ಇಂದು ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಯಾರೇ ಬಂದರೂ, ಶುಲ್ಕ ಎಷ್ಟೇ ಆಗಿದ್ದರೂ ಮೊದಲು ಅವರಿಗೆ ಸ್ಪಂದಿಸುತ್ತೇನೆ. ಮೂರನೇ ತಲೆಮಾರಿಗೆ ಭೂಮಿ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ವಿದ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಸಹಕಾರ ಸ್ಮರಣೆ ಇರಬೇಕು ಎಂದರು.

ಅಸಹಾಯಕರಿಗೆ ಮತ್ತು ಧ್ವನಿ ಇಲ್ಲದವರ ಪರ ಧ್ವನಿ ಎತ್ತಿದಾಗ ಅದೇ ನಮಗೆ ದೇವರ ಆಶೀರ್ವಾದ ನಮ್ಮ ನಡವಳಿಕೆಗಳು ದುರ್ಬಲವರ್ಗದವರ ಪರವಾಗಿ ಇರಬೇಕು. ಹೆಣ್ಣು ಮಕ್ಕಳಿಗೆ ಅವಕಾಶ ನೀಡಿದಾಗ ಪ್ರತಿಭಾವಂತಿಕೆ ತಿಳಿಯುತ್ತಿದೆ. ವಿದ್ಯೆ ಪಡೆದ ಹೆಣ್ಣು ಮಕ್ಕಳು ಸಮಾಜಕ್ಕೆ ಆಸ್ತಿ ಎಂದರು.

ಸಾಧನೆಗೆ ಬಡತನವಾಗಲಿ, ಹಸಿವಾಗಲಿ ಅಡ್ಡಿ ಬರಲು ಸಾಧ್ಯವಿಲ್ಲ. ಸಾಧನೆ ಮಾಡಿದವರು ಹಸಿದಿದ್ದರು, ಬಡವರ ಮಕ್ಕಳು ಆತ್ಮ ವೀಶ್ವಾಸದಿಂದ ಹೆಜ್ಜೆ ಮುಂದಿಡಬೇಕು. ಗೆಲುವು ಸಿಗುತ್ತದೆ ಎಂದು ಕಾಂಗ್ರೆಸ್ ಮುಖಂಡ ನಿಕೇತರಾಜ್‌ ಮೌರ್ಯ ತಿಳಿಸಿದರು.

ಈ ವೇಳೆ ಕುರುಬ ಸಂಘದ ಮುಖಂಡ ಗೇಟ್ ಶಿವಣ್ಣ, ಸಂಪಾದಕ ಎಸ್.ನಾಗಣ್ಣ, ಕಾಂಗ್ರೆಸ್ ಮುಖಂಡ ತಂಗೋಟಿ ರಾಮಣ್ಣ ಹಾಗೂ ಮತ್ತಿತರರಿದ್ದರು.

ಸಮುದಾಯಗಳ ಋಣ ತೀರಿಸುತ್ತೇನೆ

ದೊಡ್ಡೇರಿ ಹೋಬಳಿಯಲ್ಲೇ ನಾಲ್ಕೂವರೆ ಸಾವಿರ ಹೆಚ್ಚು ಮತ ಬಂದಿದೆ. ಕುಂಚಿಟಿಗ ಸಮುದಾಯದ ವಿದ್ಯಾವಂತರೂ ನನಗೆ ಬೆಂಬಲ ನೀಡಿದರು. 96 ಸಾವಿರ ಮತಗಳು ಮಧುಗಿರಿ ಇತಿಹಾಸದಲ್ಲಿ ಯಾವ ಅಭ್ಯರ್ಥಿಗೂ ಬಿದ್ದಿಲ್ಲ. ಎಲ್ಲಾ ಸಮುದಾಯಗಳ ಋಣ ತೀರಿಸುತ್ತೇನೆ ಎಂದು ತಿಳಿಸಿದರು.

click me!