ಬೆಳ್ಳಿ ಗದೆ ಹಿಡಿದ ಸಿದ್ದರಾಮಯ್ಯ ಅವರು ತಲೆ ಮೇಲೆ ಬೆಳ್ಳಿ ಕಿರೀಟ ಇಡಲು ಬಂದ ವೇಳೆ ಸುತಾರಾಂ ನಿರಾಕರಿಸಿದರು. ಇದಕ್ಕೂ ಮೊದಲು ಸಂಘಟಕರು ವೇದಿಕೆ ಮೇಲಿದ್ದ ಗಣ್ಯರಿಗೆ ಹಳದಿ ಪೇಟಾ ತೊಡಿಸುತ್ತಿದ್ದರು. ಈ ವೇಳೆ ಕೂಡ ಸಿದ್ದರಾಮಯ್ಯ ಪೇಟಾ ಧರಿಸಲು ನಿರಾಕರಿಸಿದರು. ಅಲ್ಲದೇ, ಕುರಿ ಕಾಯಲು ಬಳಸುವ ಕೋಲು ತಂದ ವೇಳೆಯೂ ಅದನ್ನು ಕೂಡ ಸ್ವೀಕರಿಸಲಿಲ್ಲ.
ಬೆಳಗಾವಿ(ಅ.04): ಬೆಳಗಾವಿಯಲ್ಲಿ ಮಂಗಳವಾರ ನಡೆದ ಶೆಫರ್ಡ್ಸ ಇಂಡಿಯನ್ ನ್ಯಾಷನಲ್‌ನ ನೇ ರಾಷ್ಟ್ರೀಯ ಮಹಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಆದರೆ, ಈ ವೇಳೆ ಸಿದ್ದರಾಮಯ್ಯ ಪೇಟಾ, ಬೆಳ್ಳಿ ಕಿರೀಟ ಹಾಗೂ ಕೋಲು ಸ್ವೀಕರಿಸಲು ನಿರಾಕರಿಸಿದ ಪ್ರಸಂಗ ನಡೆಯಿತು
ಬೆಳ್ಳಿ ಗದೆ ಹಿಡಿದ ಸಿದ್ದರಾಮಯ್ಯ ಅವರು ತಲೆ ಮೇಲೆ ಬೆಳ್ಳಿ ಕಿರೀಟ ಇಡಲು ಬಂದ ವೇಳೆ ಸುತಾರಾಂ ನಿರಾಕರಿಸಿದರು. ಇದಕ್ಕೂ ಮೊದಲು ಸಂಘಟಕರು ವೇದಿಕೆ ಮೇಲಿದ್ದ ಗಣ್ಯರಿಗೆ ಹಳದಿ ಪೇಟಾ ತೊಡಿಸುತ್ತಿದ್ದರು. ಈ ವೇಳೆ ಕೂಡ ಸಿದ್ದರಾಮಯ್ಯ ಪೇಟಾ ಧರಿಸಲು ನಿರಾಕರಿಸಿದರು. ಅಲ್ಲದೇ, ಕುರಿ ಕಾಯಲು ಬಳಸುವ ಕೋಲು ತಂದ ವೇಳೆಯೂ ಅದನ್ನು ಕೂಡ ಸ್ವೀಕರಿಸಲಿಲ್ಲ.
ಕೋಮುಗಲಭೆ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ: ಸಿಎಂ ಸಿದ್ದರಾಮಯ್ಯ
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಹಿಡಿದು ಪ್ರದರ್ಶಿಸಿ, ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿದರು.