ರಾಯ​ಚೂ​ರಿಗೆ ಏಮ್ಸ್‌ಗಾಗಿ ಕೇಂದ್ರಕ್ಕೆ ಸಿಎಂ ಸಿದ್ದ​ರಾ​ಮ​ಯ್ಯ ಪತ್ರ

By Kannadaprabha News  |  First Published Jun 18, 2023, 8:28 AM IST

ಏಮ್ಸ್‌ ಮಂಜೂ​ರಿ​ಗಾ​ಗಿ ಒತ್ತಾ​ಯಿಸಿ ಕಳೆದ 401 ದಿನ​ಗ​ಳಿಂದ ರಾಯಚೂರು ನಗ​ರ​ದಲ್ಲಿ ಅನಿ​ರ್ದಿ​ಷ್ಟಾ​ವಧಿ ಧರಣಿ ಸತ್ಯಾಗ್ರಹ​ ನಡೆ​ಸ​ಲಾ​ಗು​ತ್ತಿದೆ. ಇದರ ಜೊತೆ​ಗೆ ಚುನಾ​ವಣೆ ಪೂರ್ವ​ದಲ್ಲಿ ಕಾಂಗ್ರೆಸ್‌ ತಮ್ಮ ಪ್ರಣಾ​ಳಿ​ಕೆ​ಯಲ್ಲಿ ನೀಡಿದ ಭರ​ವ​ಸೆ​ಯಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಮನ್‌​ಸುಖ್‌ ಮಾಂಡ​ವೀಯ ಅವ​ರಿಗೆ ಪತ್ರ ಬರೆ​ದು ರಾಯ​ಚೂರು ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡ​ಬೇಕು ಎಂದು ಕೋರಿ​ದ ಸಿಎಂ ಸಿದ್ದ​ರಾ​ಮಯ್ಯ


ರಾಯಚೂರು(ಜೂ.18): ಅಖಿಲ ಭಾರತ ವೈದ್ಯ​ಕೀಯ ವಿಜ್ಞಾ​ನ​ಗಳ ಸಂಸ್ಥೆ (ಏ​ಮ್ಸ್‌​)​ಯನ್ನು ರಾಯ​ಚೂರು ಜಿಲ್ಲೆ​ಗೆ ಮಂಜೂರು ಮಾಡ​ಬೇಕು ಎಂದು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಕೇಂದ್ರಕ್ಕೆ ಶಿಫಾ​ರಸ್ಸು ಪತ್ರ​ವನ್ನು ಶನಿ​ವಾರ ಬರೆ​ದಿ​ದ್ದಾ​ರೆ.

ಏಮ್ಸ್‌ ಮಂಜೂ​ರಿ​ಗಾ​ಗಿ ಒತ್ತಾ​ಯಿಸಿ ಕಳೆದ 401 ದಿನ​ಗ​ಳಿಂದ ನಗ​ರ​ದಲ್ಲಿ ಅನಿ​ರ್ದಿ​ಷ್ಟಾ​ವಧಿ ಧರಣಿ ಸತ್ಯಾಗ್ರಹ​ ನಡೆ​ಸ​ಲಾ​ಗು​ತ್ತಿದೆ. ಇದರ ಜೊತೆ​ಗೆ ಚುನಾ​ವಣೆ ಪೂರ್ವ​ದಲ್ಲಿ ಕಾಂಗ್ರೆಸ್‌ ತಮ್ಮ ಪ್ರಣಾ​ಳಿ​ಕೆ​ಯಲ್ಲಿ ನೀಡಿದ ಭರ​ವ​ಸೆ​ಯಂತೆ ಸಿಎಂ ಸಿದ್ದ​ರಾ​ಮಯ್ಯ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಮನ್‌​ಸುಖ್‌ ಮಾಂಡ​ವೀಯ ಅವ​ರಿಗೆ ಪತ್ರ ಬರೆ​ದು ರಾಯ​ಚೂರು ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡ​ಬೇಕು ಎಂದು ಕೋರಿ​ದ್ದಾ​ರೆ.

Tap to resize

Latest Videos

Raichur AIIMS: 400ನೇ ದಿನಕ್ಕೆ ಕಾಲಿಟ್ಟಏಮ್ಸ್‌ ಹೋರಾ​ಟ!

ಕೇಂದ್ರ​ದ ಮಹತ್ವಕಾಂಕ್ಷಿ ಜಿಲ್ಲೆಗಳಲ್ಲೊಂದಾ​ಗಿ​ರು​ವ ರಾಯಚೂರು ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಮಟ್ಟಹಾಗೂ ತಲಾ ಆದಾಯವು ಇತರ ಪ್ರದೇಶಗಳಿಂದ ಕಡಿಮೆ ಪ್ರಮಾಣದಲ್ಲಿದೆ. ವಿಪರೀತ ಹವಾಗುಣದಿಂದಾಗಿ ಭೌಗೋಳಿಕವಾಗಿಯೂ ಪ್ರತಿಕೂಲದ ವಾತಾವರಣ ಹೊಂದಿದೆ. ಇಂತಹ ಜಿಲ್ಲೆಗೆ ಆತ್ಯಾಧುನಿಕ ವೈದ್ಯಕೀಯ ಸಂಸ್ಥೆಯ ಅವಶ್ಯವಿದೆ. ಈ ಹಿನ್ನೆ​ಲೆ​ಯಲ್ಲಿ ಏಮ್ಸ್‌ ಸ್ಥಾಪಿಸಿ ಈ ಭಾಗದಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸೇವೆ ಕಲ್ಪಿಸಿಕೊಡಲು ಅನು​ಕೂ​ಲ​ ಮಾ​ಡಿ​ಕೊ​ಡ​ಬೇಕು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಮ್ಮ ಆದ್ಯತೆಗಳಲ್ಲಿ ಒಂದಾ​ಗಿದೆ. ಇದರ ಜೊತೆಗೆ ರಾಯ​ಚೂ​ರಿ​ಗೆ ಏಮ್ಸ್‌ ಮಂಜೂರು ಮಾಡ​ಬೇಕು ಎನ್ನುವು​ದು ಈ ಪ್ರದೇ​ಶದ ಸಾರ್ವ​ಜ​ನಿ​ಕರು, ಸಂಘ-ಸಂಸ್ಥೆ ಹಾಗೂ ಜನಪ್ರತಿನಿಧಿಗಳ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಏಮ್ಸ್‌ ಸ್ಥಾಪ​ನೆಗೆ ಅಗ​ತ್ಯ​ವಾದ ಕ್ರಮ​ಗ​ಳನ್ನು ಕೈಗೊ​ಳ್ಳಲು ಸಂಬಂಧಿಸಿದವರಿಗೆ ಸೂಚಿಸ​ಬೇಕು ಎಂದು ಪತ್ರ​ದಲ್ಲಿ ಮನವಿ ಮಾಡಿ​ದ್ದಾರೆ.

click me!