2018ರ ಡಿಸೆಂಬರ್‌ನಲ್ಲಿ "ಸುವರ್ಣ ತ್ರಿಭುಜ" ಗೋವಾ ಸಮುದ್ರ ತೀರದಲ್ಲಿ ನಾಪತ್ತೆಯಾಗಿದ್ದ ಮೀನುಗಾರರು ಇನ್ನು ಪತ್ತೆಯಾಗಿಲ್ಲ. ಇದರಿಂದ ಸಂತ್ರಸ್ಥರ ಕುಟುಂಬಕ್ಕೆ ಪರಿಹಾರ ನೀಡಲಾಯ್ತು.
ಬೆಂಗಳೂರು/ಉಡುಪಿ, (ನ.21): ಗೋವಾ ಸಮುದ್ರ ತೀರದಲ್ಲಿ ದುರಂತಕ್ಕೀಡಾದ ಮಲ್ಪೆಯ "ಸುವರ್ಣ ತ್ರಿಭುಜ" ಬೋಟಿನಲ್ಲಿದ್ದ 7 ಜನ ಮೀನುಗಾರರ ಕುಟುಂಬಗಳಿಗೆ ತಲಾ 10 ಲಕ್ಷ ರು.ಗಳ ಪರಿಹಾರದ ಚೆಕ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿತರಿಸಿದರು.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು (ಶನಿವಾರ) ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಹಾರದ ಚೆಕ್ ನೀಡಿದರು.
undefined
ಮಹಾರಾಷ್ಟ್ರ ಕಡಲ ತೀರದಲ್ಲಿ ಮಲ್ಪೆ ಮೀನುಗಾರರ ಬೋಟ್ ಅವಶೇಷ ಪತ್ತೆ
2018ರ ಡಿಸೆಂಬರ್‌ನಲ್ಲಿ "ಸುವರ್ಣ ತ್ರಿಭುಜ" ಗೋವಾ ಸಮುದ್ರ ತೀರದಲ್ಲಿ ಮುಳುಗಿತ್ತು. ಈ ಬೋಟಿನಲ್ಲಿದ್ದ ಉಡುಪಿ ಜಿಲ್ಲೆ 2 ಮತ್ತು ಉತ್ತರ ಕನ್ನಡ ಜಿಲ್ಲೆ 5 ಮೀನುಗಾಗರು ನಾಪತ್ತೆಯಾಗಿದ್ದು, ಅವರನ್ನು ಅವಲಂಭಿಸಿದ್ದ ಅವರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿವೆ.
ಈ ಹಿನ್ನೆಲೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಅವರು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಮಾಡಿದ್ದ ಮನವಿಯಂತೆ ಈ ಪರಿಹಾರ ಬಿಡುಗಡೆಯಾಗಿದೆ.