ಬೆಳಗಾವಿ: ಬಿಮ್ಸ್ ವಿರುದ್ಧ ಸಚಿವ ಸುಧಾಕರ್‌ಗೆ ದೂರಿನ ಸುರಿಮಳೆ..!

Suvarna News   | Asianet News
Published : Nov 21, 2020, 03:47 PM IST
ಬೆಳಗಾವಿ: ಬಿಮ್ಸ್ ವಿರುದ್ಧ ಸಚಿವ ಸುಧಾಕರ್‌ಗೆ ದೂರಿನ ಸುರಿಮಳೆ..!

ಸಾರಾಂಶ

ಬಿಮ್ಸ್ ನಿರ್ದೇಶಕ, ವೈದ್ಯಕೀಯ ಅಧೀಕ್ಷರಿಗೆ ಸಚಿವ ಡಾ.ಕೆ.ಸುಧಾಕರ್ ತರಾಟೆ| ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಸಚಿವ ಡಾ.ಕೆ.ಸುಧಾಕರ್ ಭೇಟಿ| ಡಾ.ಕೆ.ಸುಧಾಕರ್‌ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ದೂರಿನ ಸುರಿಮಳೆ| 

ಬೆಳಗಾವಿ(ನ.21): ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ರೋಗಿಗಳ ಸಂಬಂಧಿಕರು ದೂರಿನ ಸುರಿಮಳೆಗೈದ ಘಟನೆ ಇಂದು(ಶನಿವಾರ) ನಗರದಲ್ಲಿ ನಡೆದಿದೆ. 

ಹೊಸ ಕಟ್ಟಡದಲ್ಲೇ ಶುಚಿತ್ವ ಇಲ್ಲ, ಸೊಳ್ಳೆಗಳ ಕಾಟವಿದೆ, ಸಕಾಲಕ್ಕೆ ವೈದ್ಯರು ಬರಲ್ಲ ಎಂದು ರೋಗಿಗಳು ಹಾಗೂ ಅವರ ಸಂಬಂಧಿಕರು ಆರೋಪಿಸಿದ್ದಾರೆ.  

'ಬಿ.ಎಲ್. ಸಂತೋಷ್- ರಮೇಶ್ ಜಾರಕಿಹೊಳಿ ಭೇಟಿ ಅಪರಾಧವಲ್ಲ'

ಆಸ್ಪತ್ರೆ ನಿರ್ವಹಣೆಗೆ 36 ಲಕ್ಷ ನೀಡುತ್ತಿದ್ದರೂ‌ ಏಕೆ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ‌ ಎಂದು ಸಚಿವ ಡಾ.ಕೆ.ಸುಧಾಕರ್ ಅವರು ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ, ವೈದ್ಯಕೀಯ ಅಧೀಕ್ಷಕ ಗಿರೀಶ್ ದಂಡಗಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಚೇಂಜ್ ಮಾಡಿಸ್ಲಾ ನಿನ್ನ ಎಂದು ವೈದ್ಯಕೀಯ ಅಧೀಕ್ಷಕರ ವಿರುದ್ಧ ಸಚಿವ ಕೆ.ಸುಧಾಕರ್ ಅವರು ಆಕ್ರೋಶವನ್ನ ಹೊರಹಾಕಿದ್ದಾರೆ.  
 

PREV
click me!

Recommended Stories

4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು