ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಮಾತುಕತೆ ಮಾಡಿದ ಸಿಎಂ ಯಡಿಯೂರಪ್ಪ/ ಮಣಿಪಾಲ್ ಆಸ್ಪತ್ರೆಯಲ್ಲಿರುವ ಉಭಯ ನಾಯಕರ ಮಧ್ಯೆ ಮಾತುಕತೆ/ ಪರಸ್ಪರ ಆರೋಗ್ಯ ವಿಚಾರಣೆ ಮಾಡಿಕೊಂಡ ನಾಯಕರು/ ಭಾನುವಾರ ಸಂಜೆ ದೂರವಾಣಿ ಮೂಲಕ ಸುಮಾರು ಅರ್ಧಗಂಟೆ ಚರ್ಚೆ..
ಬೆಂಗಳೂರು(ಆ.10) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಸಿಎಂ ಯಡಿಯೂರಪ್ಪ ಮಾತಮಾಡಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿರುವ ಉಭಯ ನಾಯಕರು ಪರಸ್ಪರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.
ನಿನ್ನೆ ಸಂಜೆ ದೂರವಾಣಿ ಮೂಲಕ ಸುಮಾರು ಅರ್ಧಗಂಟೆ ಚರ್ಚೆ ನಡೆಸಿದ್ದಾರೆ. ರಾಜಕಾರಣ, ಮಳೆ, ಕೋರೋನಾ ಸೇರಿದಂತೆ ಲೋಕಾಭಿರಾಮ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರ ಆರೋಗ್ಯದ ಬಗ್ಗೆ ವಿಶೇಷ ಕಳಕಳಿ ವ್ಯಕ್ತಪಡಿಸಿದ ಯಡಿಯೂರಪ್ಪ ಶೀಘ್ರ ಗುಣಮುಖರಾಗಲು ಹಾರೈಸಿದರು.
ಸಿಎಂ ಯಡಿಯೂರಪ್ಪಗೆ ನೆಗೆಟಿವ್ ವರದಿ ಬಂತು
ಯಡಿಯೂರಪ್ಪ ಅವರಿಗೆ ಕೊರೋನಾದ ಯಾವ ಲಕ್ಷಣ ಇಲ್ಲ. ಅವರು ಮಂಗಳವಾರ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಕೊರೋನಾ ರಾಜಕಾರಣಿಗಳನ್ನು ಬಿಟ್ಟಿಲ್ಲ.. ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ, ಆರೋಗ್ಯ ಸಚಿವ ಶ್ರೀರಾಮುಲು ಸಹ ಸೋಂಕಿಗೆ ಗುರಿಯಾಗಿ ಚಿಕಿತ್ಸೆ ಪಡೆದುಕೊಳ್ಳುತ್ತ ಇದ್ದಾರೆ.
ಹೃದಯ ಸಂಬಂಧಿ ಚಿಕಿತ್ಸೆಗೆ ಸಿದ್ದರಾಮಯ್ಯ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾಗ ಯಡಿಯೂರಪ್ಪ ಭೇಟಿ ಕೊಟ್ಟು ವಿಚಾರಿಸಿದ್ದರು. ಯಡಿಯೂರಪ್ಪ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಬಿಎಸ್‌ವೈ ಹೋರಾಟದ ಬದುಕನ್ನು ಹಾಡಿ ಹೊಗಳಿದ್ದರು.