ಚಿತ್ರದುರ್ಗ ಜಿಲ್ಲೆಗೆ ಸಿಎಂ ಬಿಎಸ್‌ವೈರಿಂದ ಬಂಪರ್ ದೀಪಾವಳಿ ಕೊಡುಗೆ

By Kannadaprabha News  |  First Published Nov 12, 2020, 1:57 PM IST

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದೀಪಾವಳಿಯ ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಜನರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. 


ಚಿತ್ರದುರ್ಗ (ನ.12):  ಜಿಲ್ಲೆಗೆ ಸರ್ಕಾರ ಬಂಪರ್ ದೀಪಾವಳಿ ಕೊಡುಗೆ ನೀಡಿದೆ.   ಸಿಎಂ ಬಿಎಸ್ ಯಡಿಯೂರಪ್ಪ ಹಿಂದೆ ತಡೆ ಹಿಡಿಯಲಾಗಿದ್ದ ಮೆಡಿಕಲ್ ಕಾಲೇಜು ನೀಡಲು ಸರ್ಕಾರ ಒಪ್ಪಿಗೆ ನೀಡಿದ್ದಾರೆ. 

ಚಿತ್ರದುರ್ಗ ಜಿಲ್ಲೆಗೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹಣ ಬಿಡುಗಡೆಗೆ ನಿರ್ಧಾರ ಮಾಡಿದ್ದು, ಕಾಲೇಜು ನಿರ್ಮಾಣಕ್ಕೂ 60 ಕೋಟಿ ಅನುದಾನ ಬಿಡುಗಡೆಗೆ ಸೂಚನೆ ನೀಡಿದ್ದಾರೆ. 

Tap to resize

Latest Videos

ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲೆಗೆ ಕೊಟ್ಟಿದ್ದ ಮೆಡಿಕಲ್ ಕಾಲೇಜು ಮಂಜೂರಾತಿಗೆ ಇದೀಗ ಮರುಜೀವ ನೀಡಲಾಗಿದೆ. ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಕಾಲೇಜನ್ನು ತಡೆಹಿಡಿದಿತ್ತು. ಇದೀಗ ತಡೆ ಹಿಡಿಯಲಾಗಿದ್ದ ಕಾಲೇಜು ನಿರ್ಮಾಣಕ್ಕೆ ಮರು ಒಪ್ಪಿಗೆ ನೀಡಲಾಗಿದೆ. 

ಮುಖ್ಯಮಂತ್ರಿಗಳೇ, ವಿದ್ಯಾರ್ಥಿಗಳ ನೆರವಿಗೆ ಧಾವಿಸಿ; KPSC ಟೈಂ ಟೇಬಲ್ ಬದಲಿಸಿ .

60 ಕೋಟಿ ಹಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದು, ಇದರ ಜೊತೆಗೆ ತುಂಗಭದ್ರಾ ಹಿನ್ನೀರಿನಿಂದ 900 ಕೋಟಿ ಪ್ರಾಜೆಕ್ಟ್ ಮೂಲಕ ನೀರು ತರಲು ಯೋಜನೆಗೂ ಒಪ್ಪಿಗೆ ನೀಡಿದ್ದಾರೆ.  ಜಿಲ್ಲೆಗೆ ಹಣಕಾಸು ನೆರವು ನೀಡಿದ್ದಕ್ಕೆ ಸಿಎಂಗೆ ಚಿತ್ರದುರ್ಗ ಜಿಲ್ಲೆಯ ಜನಪ್ರತಿನಿಧಿಗಳು ಹರ್ಷಿತರಾಗಿದ್ದಾರೆ.

click me!