ಇಂದು, ನಾಳೆ ಸಚಿವರೊಂದಿಗೆ ಸಿಎಂ ಸಭೆ, ಮುಂದಿನ 6 ತಿಂಗಳು ವೈದ್ಯರ ವೇತನ ಹೆಚ್ಚಳ

By Kannadaprabha NewsFirst Published Jul 21, 2020, 8:03 AM IST
Highlights

ಬೆಂಗಳೂರಿನಲ್ಲಿ ಕೋವಿಡ್‌-19 ಪರಿಸ್ಥಿತಿ ಕುರಿತು ಯಡಿಯೂರಪ್ಪ ಅವರು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ಬುಧವಾರ ಹಾಗೂ ಗುರುವಾರವೂ ನಡೆಸಲಿದ್ದಾರೆ. ಮುಂದಿನ 6 ತಿಂಗಳ ಕಾಲ ವೈದ್ಯರ ವೇತನ ರಾಜ್ಯ ಸರ್ಕಾರ ಹೆಚ್ಚಳ ಮಾಡಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರು(ಜು.21): ಬೆಂಗಳೂರಿನಲ್ಲಿ ಕೋವಿಡ್‌-19 ಪರಿಸ್ಥಿತಿ ಕುರಿತು ಯಡಿಯೂರಪ್ಪ ಅವರು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆಯನ್ನು ಬುಧವಾರ ಹಾಗೂ ಗುರುವಾರವೂ ನಡೆಸಲಿದ್ದಾರೆ. ಈ ವೇಳೆ ಆಯಾ ಭಾಗದ ಶಾಸಕರನ್ನು ಆಹ್ವಾನಿಸುವ ಸಾಧ್ಯತೆ ಇದೆ. ಎಂಟು ವಲಯದ ಪ್ರತ್ಯೇಕ ಸಭೆ ನಡೆಸಿ ಪರಿಸ್ಥಿತಿ ಕುರಿತು ಅವಲೋಕನ ನಡೆಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ.

ಕೊರೋನಾ ನಿಯಂತ್ರಣ ಸಂಬಂಧ ಬೂತ್‌ ಮಟ್ಟದ ತಂಡ ರಚನೆ ಮಾಡಲಾಗಿದ್ದು, ಅದು ಎಷ್ಟುಸಫಲವಾಗಿದೆ ಮತ್ತು ಯಾವ ರೀತಿಯಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂಬ ಕುರಿತು ಮುಖ್ಯಮಂತ್ರಿಯವರು ಸೋಮವಾರ ಮಾಹಿತಿ ಪಡೆದುಕೊಂಡರು. ಪ್ರತಿ ಬೂತ್‌ನಲ್ಲಿ 300-400 ಮನೆಗಳು ಬರಲಿದ್ದು, ಸಮೀಕ್ಷೆ ಕೆಲಸ ಯಾವ ರೀತಿ ಮಾಡಲಾಗಿದೆ ಹಾಗೂ ಬಾಕಿ ಇರುವ ಕಡೆಯಲ್ಲಿ ಆದಷ್ಟುಶೀಘ್ರವಾಗಿ ಮಾಡುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದರು.

ಎನ್‌ಎಚ್‌ಎಂ ವೈದ್ಯರ ವೇತನ ಹೆಚ್ಚಳ

ಕೋವಿಡ್‌ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಸಕಲ ಸವಲತ್ತು ನೀಡುವ ಕುರಿತು ಚರ್ಚೆ ನಡೆಸಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನಲ್ಲಿ (ಎನ್‌ಎಚ್‌ಎಂ) ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ವೇತನ ಹೆಚ್ಚಳ ಮಾಡಲಾಗಿದೆ.

ಆಸ್ಪತ್ರೆಗಳ ಅಮಾನವೀಯತೆಗೆ ಮಗು ಬಲಿ! ಪ್ರಪಂಚ ನೋಡುವ ಮುನ್ನ ಕಣ್ಮುಚ್ಚಿತು ಪುಟ್ಟ ಹಸುಗೂಸು

25 ಸಾವಿರದಿಂದ 45 ಸಾವಿರಕ್ಕೆ ಹೆಚ್ಚಳ ಮಾಡಲಾಗಿದ್ದು, ಮುಂದಿನ 6 ತಿಂಗಳ ಕಾಲ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡಲಾಗುವುದು. ಎನ್‌ಎಚ್‌ಎಂ ಅಡಿ ಕೆಲಸ ಮಾಡುವ ವೈದ್ಯರಿಗೆ ಶೇ.60ರಷ್ಟುಕೇಂದ್ರ ಮತ್ತು ಶೇ.40ರಷ್ಟುವೇತನವು ರಾಜ್ಯ ಸರ್ಕಾರ ಪಾಲಾಗಿರುತ್ತದೆ. ಆರು ತಿಂಗಳ ನಂತರ ಹೊಸ ಒಡಂಬಡಿಕೆ ಮಾಡಿಕೊಂಡು ವೈದ್ಯರಿಗೆ ಹೆಚ್ಚಳ ವೇತನವನ್ನು ಮುಂದುವರಿಸಲಾಗುವುದು ಎಂದು ಸಚಿವರು ಹೇಳಿದರು.

click me!