ಬೆಂಗಳುರು(ಜೂ 25 ) ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಹೊಸ ಜೀವದ ಆಗಮನವಾಗಿದೆ. ಯಡಿಯೂರಪ್ಪ ಪ್ರೀತಿಯಿಂದ ಸಾಕಿರುವ ಹಸು ಗುರುವಾರ ಕರುವಿಗೆ ಜನ್ಮ ನೀಡಿದೆ.
ತಾಯಿ ಗೋವು ಮತ್ತು ಕರು ಆರೋಗ್ಯದಿಂದಿದ್ದು, ಮನೆಯಲ್ಲಿ ಸಂಭ್ರಮ ಮನೆಮಾಡಿದೆ ಎಂದು ಬಿಎಸ್‌ವೈ ಪುತ್ರ ವಿಜಯೇಂದ್ರ ಸಂತಸ ಹಂಚಿಕೊಂಡಿದ್ದಾರೆ. ವಿಜಯೇಂದ್ರ ವಿಡಿಯೋ ಒಂದನ್ನು ಶೇರ್ ಮಾಡಿದ್ದು ತಾಯಿ ಮುದ್ದಾದ ಕರುವಿನ ಬಾಂಧವ್ಯ ಕಾಣಬಹುದಾಗಿದೆ. ಗೀರ್ ತಳಿಯ ಆಕಳುಗಳನ್ನು ಎಂಎಲ್‌ಎ ವಿಶ್ವನಾಥ್ ಬಿಎಸ್‌ವೈ ಅವರಿಗೆ ನೀಡಿದ್ದರು.
"
ಮುದ್ದಾದ ಕರುವಿನೊಂದಿಗೆ ರಾಜಾಹುಲಿ ಆಟ
ಯಡಿಯೂರಪ್ಪ ಕರುವಿನೊಂದಿಗೆ ಆಡುತ್ತಿರುವ ವಿಡಿಯೋ ಸಹ ವೈರಲ್ ಆಗಿತ್ತು. ದೇಶಿ ತಳಿಯ ಹಸುಗಳನ್ನು ಸಿಎಂ ತಮ್ಮ ಕಾವೇರಿ ನಿವಾಸದಲ್ಲಿ ಸಾಕಿ ಸಲಹುತ್ತಿದ್ದಾರೆ. ದೇಶಿ ತಳಿಯ ಹಸುಗಳನ್ನು ಸಾಕಬೇಕು ಎಂಬ ಕೂಗು ಸಹ ಜೋರಾಗಿಯೇ ಕೇಳಿಬಂದಿತ್ತು. ನಮ್ಮ ದೇಶದ ಮೂಲ ತಳಿಗಳನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.