ಸಿಎಂ ಬಿಎಸ್‌ವೈ ಹುಟ್ಟುಹಬ್ಬ : ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

By Suvarna News  |  First Published Feb 27, 2021, 3:29 PM IST

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 79ನೇ ವಸಂತಕ್ಕೆ ಕಾಲಿಟ್ಟಿದ್ದು ಈ ಸಂದರ್ಭದಲ್ಲಿ ಶಿವಮೊಗ್ಗದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. 


ಶಿವಮೊಗ್ಗ (ಫೆ.27):  ಸಿಎಂ ಬಿಎಸ್ ವೈ 78ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಶಿವಮೊಗ್ಗ ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಜಿಲ್ಲಾ ವಕ್ಫ್ ಬೋರ್ಡ್ ನಿಂದ ಮಹಾವೀರ ಸರ್ಕಲ್ ಹತ್ತಿರ ಹಜರತ್ ಸೈಯದ್ ಶಾಲಿಂ ದಿವಾನ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಿಎಂ ಪುತ್ರ ಸಂಸದ ಬಿ ವೈ ರಾಘವೇಂದ್ರ ಮತ್ತು ಬಿಎಸ್ ವೈ ಅಭಿಮಾನಿಗಳಿಂದ ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Tap to resize

Latest Videos

ನಿಮಗೆ ಗೊತ್ತಿರದ BSY ಖಾಸಗಿ ಬದುಕಿನ ಕುತೂಹಲದ ವಿಚಾರ ..

ಶಿವಮೊಗ್ಗ ಅಲ್ಪಸಂಖ್ಯಾತರ ವತಿಯಿಂದ ಸಿಎಂ ಬಿಎಸ್ ಯಡಿಯೂರಪ್ಪ ನವರಿಗೆ ಹುಟ್ಟಿದ ಹಬ್ಬದ ಶುಭಾಶಯಗಳು ಕೋರಿದ ಕ್ಷಣ ಮಹಾವೀರ ಸರ್ಕಲ್ ಹತ್ತಿರ ಹಜರತ್ ಸೈಯದ್ ಶಾಲಿಂ ದಿವಾನ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಎಸ್ ವೈ ಅಭಿಮಾನಿಗಳ ಸಂಘದ ಎಸ್.ರುದ್ರೇಗೌಡ, ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಡಿ.ಎಸ್.ಅರುಣ್, ಎಸ್.ಎಸ್.ಜ್ಯೋತಿ ಪ್ರಕಾಶ್, ದಿನಕರ್ ಶೆಟ್ಟಿ ಹಾಗೂ ಇತರರು ಉಸ್ಥಿತರಿದ್ದರು.

ಹಜರತ್ ಸೈಯದ್ ಶಾಲಿಂ ದಿವಾನ್ ದರ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾದ ಅಬ್ದುಲ್ ಘನೀ ಅಲ್ಲಾಬಕಾಶ್ ಜಮೀಲ್ ಸಾಬ್ ಶಬೀರ್ ಮನ್ಸೂರ್ ಡಿ ಭಾಷಾ ಸಾಬ್ ರಿಜ್ವನ್ ಬರ್ಕತ್ ಉಮರ್ ಸಾಬ್ ಸಿದೀಕಿ ಉಪಸ್ಥಿರಿದ್ದರು.

click me!