ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಸಿಗಲಿದೆ ಚಾಲನೆ, 50,021 ಎಕರೆ ಪ್ರದೇಶಕ್ಕೆ ಹರಿಯಲಿದೆ ನೀರು

By Suvarna News  |  First Published Apr 25, 2022, 10:51 PM IST

* ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಸಿಗಲಿದೆ ಚಾಲನೆ
* ನಾಳೆ(ಏ.26) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಹಸಿರು ನಿಶಾನೆ
* ನೀರಾವರಿ ವಂಚಿತ 50,021 ಎಕರೆ ಪ್ರದೇಶಕ್ಕೆ ಹರಿಯಲಿದೆ ನೀರು


ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಏ.25)
ಜಿಲ್ಲೆಯ ತಾಳಿಕೋಟಿ ತಾಲೂಕು ವ್ಯಾಪ್ತಿಯ 38 ಹಳ್ಳಿಗಳಿಗೆ ನೀರಾವರಿ ಕಲ್ಪಿಸಲು ಉದ್ದೇಶಿಸಿರುವ ಮಹತ್ವದ 
ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ನಾಳೆ(ಏ.26) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಲಿದ್ದಾರೆ. 

ಈ ಯೋಜನೆ ಕಾರ್ಯನುಷ್ಠಾನಗೊಂಡಲ್ಲಿ ಮಸಕನಾಳ, ಭೀಳೆಬಾವಿ, ಮೈಲೇಶ್ವರ, ಬಿ.ಸಾಲವಾಡಗಿ, ಮಟಕದನಹಳ್ಳಿ, ನವದಗಿ, ಬೇಲೂರ, ಗುಂಡಕನಾಳ, ಕೊಡಗಾನೂರ, ಲಕ್ಕುಂಡಿ, ಶೆಳ್ಳಗಿ, ಕಾರಗನೂರ, ಗೊಟಕಂಡಕಿ, ಗಡಿ ಸೋಮನಾಳ, ಬಂಟನೂರ, ಪೀರಾಪುರ, ಹೂವಿನಹಳ್ಳಿ, ಅಸ್ಕಿ, ನೀರಲಗಿ, ಬೇಕಿನಾಳ, ಬನಹಟ್ಟಿ, ಜಲಪುರ, ಬೀಂಜಲಬಾವಿ, ಕಲಕೇರಿ, ಬೂದಿಹಾಳ, ಹಾಳಗುಂಡಕನಾಳ, ರಾಂಪುರ, ತುರುಕನಗೇರಿ, ವನಕ್ಯಾಳ ಸೇರಿ ಒಟ್ಟು 16,476,86 ಹೇಕ್ಟೇರ್ ಕ್ಷೇತ್ರವು ನೀರಾವರಿಗೊಳಪಡಲಿದೆ.

Latest Videos

undefined

ಹನಿ ನೀರಿಗಾಗಿ ದಶಕಗಳ ಹೋರಾಟ, ಕಾಲುವೆ ನಿರ್ಮಾಣವಾಗಿ 30 ವರ್ಷ ಕಳೆದ್ರೂ ಹರಿದಿಲ್ಲ ನೀರು

ಏನಿದು ಯೋಜನೆ..?
 ನಾರಾಯಣ ಜಲಾಶಯದ ಎಡಭಾಗದಲ್ಲಿನ ಹಿನ್ನಿರನ್ನು ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಗ್ರಾಮದ ಹತ್ತಿರ ನೀರನ್ನು ಎತ್ತಿ ಸಿಂಧಗಿ ಹಾಗೂ ಮುದ್ದೇಬಿಹಾಳ ತಾಲೂಕಿನ ಅಂದರೆ ಈಗಿನ ದೇವರ ಹಿಪ್ಪರಗಿ ಮತ್ತು ತಾಳಿಕೋಟಿ ತಾಲೂಕಿನ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 38 ಗ್ರಾಮಗಳ ನೀರಾವರಿ ವಂಚಿತ 20,243 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ. 

ಭಾರತ ಸರ್ಕಾರದಿಂದ ಅನುಮೋದನೆ.! 
ಈ ಯೋಜನೆಯಲ್ಲಿ ನೀರಾವರಿಗೆ ಒಳಪಡುವ ಸಂಪೂರ್ಣ 20,043 ಹೇಕ್ಟೆರ್ ಕ್ಷೇತ್ರವನ್ನು 5 ರಿಂದ 30 ಹೆಕ್ಟೇರ್ ಬ್ಲಾಕಗಳಾಗಿ ವಿಂಗಡಿಸಲಾಗಿದ್ದು, ನೀರನ್ಮು ವಿತರಣಾ ಜಾಲದ ಪೈಪಲೈನ್ ಮೂಲಕ ಸ್ಕಾಡಾ ನಿಯಂತ್ರಣದೊಂದಿಗೆ ಪ್ರತಿ ಬ್ಲಾಕಿಗೆ ಒದಗಿಸಲು ವಿನ್ಯಾಶಿಸಲಾಗಿದೆ. ಈ ಯೋಜನೆಗೆ ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಅವಶ್ಯಕ ಪರಿಸರ ತಿರುವಳಿಗೆ ಅನುಮೋದನೆಯನ್ನು ಪಡೆಯಲಾಗಿದೆ.

ನಕ್ಷೆ ವಿನ್ಯಾಸಗಳಿಗೆ ಅನುಮೋದನೆ.!
ಗುತ್ತಿಗೆದಾರರು ಯೋಜನೆಯ ಸರ್ವೆ ಕಾರ್ಯವನ್ನು ಮುಕ್ತಾಯಗೊಳಿಸಿದ್ದು, ಸಂಪೂರ್ಣ ಯೋಜನೆಯ ವಿನ್ಯಾಸ ಮತ್ತು ನಕ್ಷೆಗಳನ್ನು ತಯಾರಿಸುವ ಕಾರ್ಯ ಪೂರ್ಣಗೊಂಡು  ಈ ನಕ್ಷೆ ಮತ್ತು ವಿನ್ಯಾಸಗಳಿಗೆ ಕೂಡ ಅನುಮೋದನೆ ಪಡೆಯಲಾಗಿದೆ. ಅದರಂತೆ ಸದರಿ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಉದ್ದೇಶಿತ ನೀರಾವರಿ ಕ್ಷೇತ್ರಕ್ಕೆ ನೀರು ಹರಿಸಲು ಯೋಜಿಸಲಾಗಿದೆ. 

ಕಾಮಗಾರಿ ಬಹುತೇಕ ಪೂರ್ಣ.!
ಸದರಿ ಯೋಜನೆಯ ಮೊದಲ ಭಾಗದಲ್ಲಿ 523.03 ಕೋಟಿಗಳಿಗೆ ಜಾಕವೆಲ್, ಪಂಪಹೌಸ್, ರೈಸಿಂಗ್ ಮೇನ್ ಹಾಗೂ ಎರಡು ಸ್ಥಳಗಳಲ್ಲಿ ಡೆಲಿವರಿ ಚೆಂಬರ ನಿರ್ಮಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡು ಚಾಲನೆಗೊಳಿಸಲು ಸಿದ್ಧಗೊಂಡಿದೆ. 

18 ತಿಂಗಳವರೆಗೆ ಕಾಲವಕಾಶ.!
ಸದರಿ ಯೋಜನೆಯ ಎರಡನೇ ಕಾಮಗಾರಿಗೆ ಸಂಬಂಧಿಸಿದಂತೆ ಸ್ವಯಂಚಾಲಿತ ವಾಲ್ವಾ, ಪೈಪಲೈನ್, ಎಲೆಕ್ಟ್ರೋ ಮೆಕ್ಯಾನಿಕಲ್  ಕಾಮಗಾರಿ, ಸ್ಕಾಡಾ ಅಟೋಮೇಶನ್ ಇತ್ಯಾದಿ ಕಾಮಗಾರಿಗೆ 796.11 ಕೋಟಿಗಳಿಗೆ  ಗುತ್ತಿಗೆಯನ್ನು ವಹಿಸಿಕೊಡಲಾಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸಲು 18 ತಿಂಗಳು 2023ರ ಜನವರಿ ಅಂತ್ಯದವರೆಗೆ ಕಾಲವಕಾಶ ನೀಡಲಾಗಿದೆ.

click me!