ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ಬೊಮ್ಮಾಯಿ ಸರ್ಕಾರ..!

By Girish Goudar  |  First Published Jul 28, 2022, 9:43 AM IST

ಚಿತ್ರದುರ್ಗ  ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಭದ್ರೆ ಹರಿಸಲು ಸರ್ಕಾರ ಅಸ್ತು: ಶಾಸಕ ಗೂಳಿಹಟ್ಟಿ ಶೇಖರ್ ಸಂತಸ 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜು.28):  ಭದ್ರಾ ಮೇಲ್ದಂಡೆ ಯೋಜನೆ ಅಂದ್ರೆ ಸಾಕು ಅದು ಮಧ್ಯ ಕರ್ನಾಟಕದ ಜನರು ಬಹು ವರ್ಷಗಳ ಹೋರಾಟದ ಫಲವಾಗಿ ಸಿಕ್ಕಿರೋ ಫಲವಾಗಿದೆ. ಈಗಾಗಲೇ ಚಿತ್ರದುರ್ಗ ಜಿಲ್ಲೆಯ ವಿವಿ ಸಾಗರಕ್ಕೆ ಭದ್ರೆಯಿಂದ ನೀರು ಹರಿಯುತ್ತಲೇ ಬರ್ತಿದೆ. ಆದ್ರೆ ಜಿಲ್ಲೆಯ ಕೆಲ ತಾಲ್ಲೂಕಿನಲ್ಲಿ ಕೆರೆಗಳನ್ನು ಕೈ ಬಿಟ್ಟಿದ್ದ ಸರ್ಕಾರ ಈಗ ಮತ್ತೆ ಸೇರ್ಪಡೆ ಮಾಡುವ ಮೂಲಕ ಎಲ್ಲಾ ರೈತರ ಸಂತಸವನ್ನು ಇನ್ನಷ್ಟು ಹಿಮ್ಮಡಿ ಪಡಿಸಿದೆ. ಭದ್ರಾ ಮೇಲ್ದಂಡೆ ಅಡಿ ಕೈ ಬಿಟ್ಟಿದ್ದ ತಾಲೂಕಿನ 38 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಮತ್ತು ಭದ್ರಾ ನಾಲೆ ಎಡ ಭಾಗದ ಜಮೀನುಗಳಿಗೆ ಹನಿ ನೀರಾವರಿ ಕಲ್ಪಿಸುವ 520 ಕೋಟಿ ರೂ. ಮೊತ್ತದ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಅನುಮೋದನೆ ನೀಡುವ ಮೂಲಕ ಹೊಸದುರ್ಗದ ಜನರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.  

Latest Videos

undefined

ಅವಕೃಪೆಗೆ ಒಳಗಾಗಿದ್ದ ಹೊಸದುರ್ಗದ 38 ಗ್ರಾಮಗಳ ಕೆರೆಗಳಿಗೆ ಹಾಗೂ ಸಾವಿರಾರು ಎಕರೆ ಕೃಷಿ ಭೂಮಿಗೆ ಭದ್ರಾ ನೀರು ಹರಿಸುವ ಯೋಜನೆಗೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಸತತ ಪ್ರಯತ್ನ ನಡೆಸಿ ಮಂಜೂರಾತಿ ಪಡೆದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಜಲ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ 520 ಕೋಟಿ ರೂ. ಮೊತ್ತದ ಯೋಜನೆಗೆ ಅನುಮೋದನೆ ಸಿಕ್ಕಿದೆ. ಈ ಮೂಲಕ ಚಿತ್ರದುರ್ಗದ ಶಾಖಾ ಕಾಲುವೆ ಮೂಲಕ ಹರಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ತಾಲೂಕಿನ ಜನರಿಗೆ ವರದಾನವಾಗಿದೆ.

ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ವಿಳಂಬ; ಕೃಷಿ ಇಲಾಖೆಗೆ ಬೀಗ ಜಡಿದ ರೈತರು

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು, ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ನಾಲೆ ಹಾದು ಹೋಗುವ ಮಾರ್ಗದ ಎಡ ಭಾಗದಲ್ಲಿರುವ 38 ಗ್ರಾಮಗಳು ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದವು. ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದರ ಪರಿಣಾಮ ಇಂದು ಅನುಮೋದನೆ ದೊರೆತಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇನ್ನೂ ಜಮೀನಿಗೆ ನೀರಾವರಿ ಸೌಲಭ್ಯ ಸರ್ಕಾರದ ಈ ಕ್ರಮದಿಂದ ಹೊಸದುರ್ಗ ತಾಲೂಕಿನ ಬುರುಡೇಕಟ್ಟೆ, ಜಮ್ಮಾಪುರ, ಮಲ್ಲಪ್ಪನಹಳ್ಳಿ, ಹೆಬ್ಬಳ್ಳಿ, ಗೌಡಿಹಳ್ಳಿ, ದೇವಿಗೆರೆ, ಮಾವಿನಕಟ್ಟೆ, ಗಾಳಿ ರಂಗಯ್ಯನಹಟ್ಟಿ, ರಂಗಯ್ಯನೂರು, ಗೂಳಿಹಟ್ಟಿ, ಕಡಿವಾಣಕಟ್ಟೆ, ಕೊಂಡಾಪುರ, ಕೃಷ್ಣಾಪುರ, ಜಂತಿಕೊಳಲು, ಹೇರೂರು, ಚಿಕ್ಕಮ್ಮನಹಳ್ಳಿ, ಚಕ್ಕಯಗಟಿ, ಹೊಸಹಳ್ಳಿ, ಕಬ್ಬಳ, ಹೆಬ್ಬಳ್ಳಿ, ಕಲ್ಲಹಳ್ಳಿ, ಗುತ್ತಿಕಟ್ಟೆ, ಕುಂಬಾರಕಟ್ಟೆ, ನಾಗರಕಟ್ಟೆ, ವೀರಾಪುರ, ಹೊಸಹಟ್ಟಿ, ಕರಿಯಪ್ಪನಹಟ್ಟಿ, ಬಾಲೇಹಳ್ಳಿ, ತುಂಬಿನಕೆರೆ, ಬೀಸನಹಳ್ಳಿ, ದಾಸರಹಳ್ಳಿ, ದೊಡ್ಡಘಟ್ಟ, ಮಲ್ಲಾಪುರ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಪಾಪೇನಹಳ್ಳಿ, ದುಗ್ಗಾವರ, ನವಿಲುಕಲ್ಲುಹಟ್ಟಿ ಸೇರಿ 38 ಗ್ರಾಮಗಳ ಕೆರೆಗಳು ಹಾಗೂ ಕೃಷಿ ಜಮೀನುಗಳು ನೀರಾವರಿ ಸೌಲಭ್ಯಕ್ಕೆ ಒಳಪಡಲಿವೆ. 

click me!