ಮಂಗಳೂರಿನಲ್ಲಿ ನಡೆದ ಹಿಂದೂ ಯುವ ಮುಖಂಡನ ಹತ್ಯೆ ವಿಚಾರ ರಾಜ್ಯದೆಲ್ಲೆಡೆ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಅಲ್ಲಲ್ಲಿ ಹಿಂದೂ ಹಿಂದೂ ಮುಖಂಡರು, ಬಿಜೆಪಿ ಕಾರ್ಯಕರ್ತರು ಪ್ರವೀಣ ಹತ್ಯೆಗೆ ಆಕ್ರೋಶ ಹೊರಹಾಕ್ತಿದ್ದಾರೆ.
ವಿಜಯಪುರ (ಜು.27): ಮಂಗಳೂರಿನಲ್ಲಿ ನಡೆದ ಹಿಂದೂ ಯುವ ಮುಖಂಡನ ಹತ್ಯೆ ವಿಚಾರ ರಾಜ್ಯದೆಲ್ಲೆಡೆ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಅಲ್ಲಲ್ಲಿ ಹಿಂದೂ ಹಿಂದೂ ಮುಖಂಡರು, ಬಿಜೆಪಿ ಕಾರ್ಯಕರ್ತರು ಪ್ರವೀಣ ಹತ್ಯೆಗೆ ಆಕ್ರೋಶ ಹೊರಹಾಕ್ತಿದ್ದಾರೆ. ಈ ನಡುವೆ ಗುಮ್ಮಟನಗರಿ ವಿಜಯಪುರದ ಬಿಜೆಪಿ ಮಾಜಿ ಸಚಿವ ತಮ್ಮ ಬರ್ಥಡೇ ಕಾರ್ಯಕ್ರಮ ರದ್ದು ಮಾಡಿ ಅದೇ ಜಾಗದಲ್ಲಿ ಹತ್ಯೆಯಾದ ಪ್ರವೀಣ್ ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬರ್ಥಡೇ ರದ್ದು ಮಾಡಿದ ಬಿಜೆಪಿ ಮಾಜಿ ಸಚಿವ: ಇಂದು ವಿಜಯಪುರದ ಬಿಜೆಪಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹುಟ್ಟುಹಬ್ಬ. ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಲು ಕಾರ್ಯಕರ್ತರು ಅಭಿಮಾನಿಗಳು ವ್ಯವಸ್ಥೆ ಮಾಡಿಕೊಂಡಿದ್ದರು. ಮನೆಗಳಿಗೆ ಆಗಮಿಸಿ ವಿಶ್ ಮಾಡ್ತಿದ್ದರು. ಆದ್ರೆ ಮಂಗಳೂರಿನಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಬರ್ಥಡೇ ಆಚರಣೆಯನ್ನ ರದ್ದು ಪಡೆಸಿಕೊಂಡಿದ್ದಾರೆ. ಕಾರ್ಯಕರ್ತರಿಗೆ ತಮ್ಮ ಬರ್ಥಡೇಯನ್ನ ಆಚರಿಸದಂತೆ ಸೂಚನೆ ನೀಡಿದ್ದಾರೆ.
ಸಕ್ರಿಯ ರಾಜಕಾರಣದಿಂದ ಬಿಎಸ್‌ವೈ ದೂರವಾಗಿಲ್ಲ; ಚಲುವಾದಿ ನಾರಾಯಣಸ್ವಾಮಿ
ಬರ್ಥಡೇ ನಡೆಯಬೇಕಿದ್ದ ಸ್ಥಳದಲ್ಲೆ ಶ್ರದ್ಧಾಂಜಲಿ: ಅಪ್ಪು ಪಟ್ಟಣಶೆಟ್ಟಿ ಹುಟ್ಟುಹಬ್ಬ ಆಚರಿಸೋದಕ್ಕೆ ನಗರದ ಶಿವಾಜಿ ವೃತ್ತದಲ್ಲಿ ಬೃಹತ್ ಪ್ರಮಾಣದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಬರ್ಥಡೇ ಆಚರಣೆಗೆಂದೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರು. ಆದ್ರೆ ಪ್ರವೀಣ ಸಾವಿನಿಂದಾಗಿ ಅಪ್ಪು ಪಟ್ಟಣಶೆಟ್ಟಿ ತಮ್ಮ ಹುಟ್ಟು ಹಬ್ಬದ ಆಚರಣೆಯನ್ನ ರದ್ದು ಪಡೆಸಿದ್ದಾರೆ. ಅಲ್ಲದೆ ಯಾವ ಜಾಗದಲ್ಲಿ ತಮ್ಮ ಬರ್ಥಡೇ ನಡೆಯಬೇಕಿತ್ತೊ ಅದೇ ಜಾಗದಲ್ಲಿ ಪ್ರವೀಣ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಎಲೆಕ್ಷನ್‌ವರೆಗೂ ನಾ ಸಿಎಂ, ನೀ ಸಿಎಂ ಎಂಬ ಹೇಳಿಕೆಗಳು ಸಾಮಾನ್ಯ: ಜಾರಕಿಹೊಳಿ
ಶ್ರದ್ಧಾಂಜಲಿ ಸಭೆಯಲ್ಲಿ ನೂರಾರು AP ಅಭಿಮಾನಿಗಳು: ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹುಟ್ಟು ಹಬ್ಬ ನಡೆಯಬೇಕಿದ್ದ ಸ್ಥಳದಲ್ಲಿ ಅವರ ನೂರಾರು ಅಭಿಮಾನಿಗಳು ಸೇರಿದ್ದರು. ಅದೇ ಸ್ಥಳದಲ್ಲಿ ಪ್ರವೀಣ ಪೋಟೊ ಇಟ್ಟು ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ವೇಳೆ ನೂರಾರು ಅಪ್ಪು ಪಟ್ಟಣಶೆಟ್ಟಿ ಅಭಿಮಾನಿಗಳು ಕ್ಯಾಂಡಲ್ ಸಮೇತ ಶ್ರದ್ಧಾಂಜಲಿಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಮೂಲಕ ಹುಟ್ಟುಹಬ್ಬದ ಕಾರ್ಯಕ್ರಮ ಒಂದು ಶೃದ್ಧಾಂಜಲಿ ಸಭೆಯಾಗಿ ಮಾರ್ಪಟ್ಟಿತ್ತು.