ಕೊರೋನಾ ಕಾಟ: ರಾಜ್ಯದಲ್ಲಿ ಲಾಕ್ ಡೌನ್ ಸಡಿಲವಾಗುತ್ತಾ?

By Suvarna NewsFirst Published Apr 11, 2020, 10:30 AM IST
Highlights

ಪ್ರಧಾನಿ ನರೇಂದ್ರ ಮೋದಿ ಜೊತೆ ಸಿಎಂ ವಿಡಿಯೋ ಸಂವಾದ| ಮೋದಿ ವಿಡಿಯೋ ಸಂವಾದಕ್ಕೂ ಮುನ್ನ ರಾಜ್ಯ ಸರ್ಕಾರದ ಸಚಿವರ ಜೊತೆ ಸಿಎಂ ಮಹತ್ವದ ಸಭೆ|ಡೇಂಜರ್ ಜೋನ್‌ಗಳಲ್ಲಿ  ಶೇ. 80ರಷ್ಟು ಲಾಕ್ ಡೌನ್ ಮುಂದುವರಿಕೆ|

ಬೆಂಗಳೂರು(ಏ.11): ಕೋವಿಡ್-19 ಕುರಿತಂತೆ ರಾಜ್ಯ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಇಂದು(ಶನಿವಾರ) ಪ್ರಧಾನಿ ನರೇಂದ್ರ ಮೋದಿ ಜೊತೆ ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ವಿಡಿಯೋ ಸಂವಾದದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಸಂವಾದ ನಡೆಸಿ ಮಾಹಿತಿ ಕಲೆ ಹಾಕಲಿದ್ದಾರೆ. ಬಳಿಕ ಲಾಕ್‌ಡೌನ್‌ ಮುಂದುವರೆಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. 

ಲಾಕ್‌ಡೌನ್‌, ಇಂದು ತೀರ್ಮಾನ: ಎಲ್ಲಾ ಸಿಎಂಗಳ ಜತೆ ಮೋದಿ ಸಂವಾದ!

ಪ್ರಧಾನಿ ಮೋದಿ ವಿಡಿಯೋ ಸಂವಾದಕ್ಕೂ ಮುನ್ನ ರಾಜ್ಯ ಸರ್ಕಾರದ ಸಚಿವರ ಜೊತೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಮಹತ್ವದ ಸಭೆ ನಡೆಸಲಿದ್ದಾರೆ. ಕೋವಿಡ್-19 ಕುರಿತಂತೆ ರಾಜ್ಯ ಸರ್ಕಾರದ ಕ್ರಮಗಳ ಬಗ್ಗೆ ಸಚಿವರುಗಳ ಜೊತೆ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಶ್ರೀರಾಮುಲು,  ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್, ಆರೋಗ್ಯ ಹಾಗೂ ಗೃಹ ಇಲಾಖೆಯ ಅಧಿಕಾರಿಗಳು ಕೂಡಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 

ಸಭೆಯ ನಂತರ ಪ್ರಧಾನಿ ಮೋದಿ ಜೊತೆ ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಲಿದ್ದು, ಸೋಂಕು ಹೆಚ್ಚು ಇರುವ ಪ್ರದೇಶಗಳನ್ನು ಐಸ್ಯೂಲೇಟ್ ಮಾಡಲು ಚಿಂತನೆ ಬಗ್ಗೆ ಪ್ರಧಾನಿ ಜೊತೆ ವಿಡಿಯೋ ಸಂವಾದದಲ್ಲಿ ಮಾಹಿತಿ ನೀಡಲಿದ್ದಾರೆ. ಯಾವೆಲ್ಲಾ ಪ್ರದೇಶದಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೋ ಅಂತಹ ಪ್ರದೇಶ ವನ್ನು ಐಸ್ಯೂಲೇಟ್ ಮಾಡುವ ಚಿಂತನೆ ನಡೆದಿದ್ದು, ಆ ಪ್ರದೇಶದ ಜನಸಾಮಾನ್ಯರಿಗೆ ಸರ್ಕಾರದಿಂದಲೇ ಎಲ್ಲಾ ಸೌಲಭ್ಯಗಳನ್ನ ಒದಗಿಸಿ ಜನ ಹೊರ ಬರೆದಂತೆ ವ್ಯವಸ್ಥೆ ಇದಾಗಿದೆ. ಅಲರ್ಟ್ ಪ್ರದೇಶಗಳಲ್ಲಿ ಶೇ. 50ರಷ್ಟು ಲಾಕ್ ಡೌನ್ ಸಡಿಲ ಮಾಡುವ ಸಾದ್ಯತೆಯೂ ಇದೆ ಎನ್ನಲಾಗುತ್ತಿದೆ. 
ಡೇಂಜರ್ ಜೋನ್‌ಗಳಲ್ಲಿ  ಶೇ. 80ರಷ್ಟು ಲಾಕ್ ಡೌನ್ ಮುಂದುವರಿಕೆ ಮಾಡುವುದು, ಎಲ್ಲಾ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದು ಸೇರಿದಂತೆ ಮತ್ತಿತರ ವಿಷಯಗಳನ್ನ ಪ್ರಧಾನಿ ಮೋದಿ  ಜೊತೆ ವಿಡಿಯೋ ಸಂವಾದದಲ್ಲಿ ಚರ್ಚೆ ಮಾಡಲು ಸಿದ್ದತೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

click me!