Chikkamagaluru: ಸಾವಿನಲ್ಲೂ ಸಾರ್ಥಕತೆ ಮೆರೆದ 14 ವರ್ಷದ ಬಾಲಕಿ

By Suvarna News  |  First Published Oct 30, 2022, 7:19 PM IST

14 ವರ್ಷದ ಬಾಲಕಿಯೊಬ್ಬಳು ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ  ನಡೆದಿದೆ. ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. 


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು (ಅ.30): 14 ವರ್ಷದ ಬಾಲಕಿಯೊಬ್ಬಳು ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ  ಶನಿವಾರ ನಡೆದಿದೆ. ಮೂಡಿಗೆರೆ ಪಟ್ಟಣದ ವೈಷ್ಣವಿ (14) ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಮೃತ ಬಾಲಕಿ ವೈಷ್ಣವಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮೃತಪಟ್ಟ ತಕ್ಷಣ ಕಣ್ಣು ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಮೃತ ಬಾಲಕಿ ಕಣ್ಣು ದಾನ ಮಾಡಲು ಪೋಷಕರು ಮುಂದಾದ್ರೂ ಕೂಡ ಪಡೆಯಲು ಆಸ್ಪತ್ರೆಯವರು ಹಿಂದೇಟು ಹಾಕಿದ್ರು. ತಡರಾತ್ರಿಯಾದ್ರೂ ಕಣ್ಣು ದಾನ ಪಡೆಯಲು ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಂಸ್ಥೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳಿಯರ ಆಕ್ರೋಶದ ನಂತರ ಆಸ್ಪತ್ರೆಯ ತಂಡ ಆಗಮಿಸಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿರುವ ಬೆಥನಿ ಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ವೈಷ್ಣವಿ ನಿನ್ನೆ ರಾತ್ರಿ 7.30 ರ ವೇಳೆಗೆ  ಹೃದಯಾಘಾತಕ್ಕೆ  ಒಳಗಾಗಿ ಮೃತಪಟ್ಟಿದ್ದಾಳೆ. ಅತೀ ಚಿಕ್ಕವಯಸ್ಸಿನಲ್ಲಿ ಬಾಲಕಿಯು ಬಾರದ ಲೋಕಕ್ಕೆ ತೆರಳಿರುವುದು ಪೋಷಕರು ದುಃಖದಲ್ಲಿ ಮಡುಗಟ್ಟುವಂತೆ ಮಾಡಿದೆ.

Tap to resize

Latest Videos

ಪೋಷಕರಿಂದ ನೇತ್ರದಾನದ ಧೃಢ ನಿರ್ಧಾರ:
ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಪೋಷಕರು, ಈ ನೋವಿನ ನಡುವೆಯೂ ಮಗಳಿಂದ ಬೇರೊಬ್ಬರ ಬಾಳು ಬೆಳಕಾಗಿರಲಿ ಎಂಬ ಸಂಕಲ್ಪ ಕೈಗೊಂಡು ಮರಣದ ನಂತರ ಬೇರೊಬ್ಬರ ಉಪಯೋಗಕ್ಕೆ ಬರುವ ಆಕೆಯ ಎರಡು ಕಣ್ಣುಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಇಂದು ಹಾಸನದ ಮೆಡಿಕಲ್ ಕಾಲೇಜಿನ (eye ) ಬ್ಯಾಂಕ್ ವೈದ್ಯರ ತಂಡವು ಮೂಡಿಗೆರೆಗೆ ಭೇಟಿ ನೀಡಿ ಆಕೆಯ ಕಣ್ಣುಗಳನ್ನು ತೆಗೆದು ಬೇರೊಬ್ಬರಿಗೆ ಉಪಯುಕ್ತವಾಗುವ ರೀತಿಯಲ್ಲಿ ಬಳಸಲಿದ್ದಾರೆ. ಬಾಲಕಿಯ ನೆತ್ರದಾನವು ಅವಳ ಮರಣದ ನಂತರವೂ ಆಕೆಯನ್ನು ಜೀವಂತವಾಗಿಡಲಿದೆ. ಮೃತಳ ಪೋಷಕರು ಮಹಾರಾಷ್ಟ್ರ ಮೂಲದವರಾಗಿದ್ದು ಬಾಲಕಿಯ ಅಂತ್ಯಕ್ರಿಯೆ ಮಹಾರಾಷ್ಟ್ರದಲ್ಲಿ ನಡೆಯಲಿದೆ ಎಂಬುದಾಗಿ ಪೋಷಕರು ತಿಳಿಸಿದ್ದಾರೆ.

ಚಿತ್ರದುರ್ಗದಲ್ಲೊಂದು ಹೃದಯ ವಿದ್ರಾವಕ ಘಟನೆ, ಭಗತ್ ಸಿಂಗ್ ಪಾತ್ರದ ಪ್ರಾಕ್ಟೀಸ್ ವೇಳೆ ಬಾಲಕ ಸಾವು

ಕಂಬನಿ ಮಿಡಿದ ಸಾರ್ವಜನಿಕರು:
ಪುಟ್ಟ ಬಾಲಕಿಯು ಬಾರದ ಲೋಕಕ್ಕೆ ತೆರಳಿರುವುದು ಪೋಷಕರೊಂದಿಗೆ ವೈಷ್ಣವಿಯ ಸ್ನೇಹಿತರಿಗೆ, ಶಾಲಾ ಶಿಕ್ಷಕರಿಗೆ ಅತೀವ ದುಃಖವನ್ನುಂಟು ಮಾಡಿದೆ. ಸಾರ್ವಜನಿಕರೂ ಕೂಡ ಸಾವಿನ ಕುರಿತು ಸಂತಾಪ ಸೂಚಿಸಿದ್ದಾರೆ.ಈ ಹಿಂದೆ ಚಿಕ್ಕಮಗಳೂರಿನ ಕಾಲೇಜು ವಿದ್ಯಾರ್ಥಿನಿ ರಕ್ಷಿತಾ ಬಾಯಿ ಎಂಬಾಕೆ ಬಸ್ಸಿನಿಂದ ಕೆಳಗಿಳಿಯುವ ವೇಳೆ ಬಿದ್ದು ಆಕೆಯ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ವೇಳೆಯೂ ಆಕೆಯ ಪೋಷಕರು ಗಟ್ಟಿಯಾದ ಮನಸ್ಸಿನಿಂದ ಅಂಗಾಂಗ ದಾನ ಮಾಡುವ ಧೃಢ ನಿರ್ಧಾರ ಕೈಗೊಂಡಿದ್ದರು. ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಆಕೆಯ ಅಂಗಾಂಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು ಬೇರೆಡೆಗೆ ರವಾನೆ ಮಾಡಲಾಗಿತ್ತು.

click me!