ಚುನಾವಣೆ ಹಿನ್ನೆಲೆ ಸಾರ್ವತ್ರಿಕ ರಜೆ ಘೋಷಣೆ

By Kannadaprabha News  |  First Published Sep 1, 2021, 2:31 PM IST
  • ನಗರಪಾಲಿಕೆಯ 36ನೆ ವಾರ್ಡಿನ ಉಪ ಚುನಾವಣೆಯು ಸೆ.3ರಂದು ನಡೆಯಲಿದೆ
  • ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನಕ್ಕೆ ಸಕಲ ಸಿದ್ಧತೆ
  • ವಾರ್ಡು ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ

ಮೈಸೂರು (ಸೆ.01): ನಗರಪಾಲಿಕೆಯ 36ನೆ ವಾರ್ಡಿನ ಉಪ ಚುನಾವಣೆಯು ಸೆ.3ರಂದು ನಡೆಯಲಿದೆ. ಅಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನಕ್ಕೆ ಸಕಲ ಸಿದ್ಧತೆ  ಮಾಡಲಾಗಿದೆ. 

ವಾರ್ಡು ವ್ಯಾಪ್ತಿಯಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಸೆ.6 ರಂದು ಬೆಳಗ್ಗೆ 8ಕ್ಕೆ ಮಹರಾಜ ಸಂಸ್ಕೃತ ಪಾಠಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ. ಒಟ್ಟು 11 ಮತಗಟ್ಟೆಗಳಿರುತ್ತವೆ.  10,656 ಮಂದಿ ಮತದಾರರಿದ್ದು ಈ ಪೈಕಿ 5628 ಪುರುಷರು, 5385 ಮಹಿಳೆಯರು ಹಾಗೂ 3 ಮಂದಿ ಇತರರು. 

Latest Videos

undefined

ಮೊಟ್ಟ ಮೊದಲ ಬಾರಿಗೆ ಕಮಲಕ್ಕೊಲಿದ ಮೈಸೂರು ಮೇಯರ್ ಪಟ್ಟ : BJP ತಂತ್ರಗಾರಿಕೆಗೆ ಸಕ್ಸಸ್

ಸೆ.1 ರಂದು ಬೆಳಗ್ಗೆ 7ಕ್ಕೆ ಬಹಿರಂಗ  ಪ್ರಚಾರ ಅಂತ್ಯವಾಗಲಿದೆ. ನಂತರ ಪ್ರಚಾರಕ್ಕೆ ಬಂದಿರುವವರು ವಾರ್ಡು ಮತದಾರರು ಫೇಸ್ ಮಾಸ್ಕ್ ಧರಿಸಿರಬೇಕು. ಮತಗಟ್ಟೆಯಲ್ಲಿ ಅಂತರ ಕಾಪಾಡಬೇಕು. ಸೋಂಕಿತರಯ ಸಂಜೆ 5 ರಿಂದ 6ರ ನಡವೆ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ತಿಳಿಸಿದ್ದಾರೆ. 

click me!