* ಅಂತಾರಾಷ್ಟ್ರೀಯಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬ್ಯಾಡಗಿ ಮೆಣಸಿನಕಾಯಿ
* ಬ್ಯಾಡಗಿ ಮೆಣಸಿನಕಾಯಿ ಪೇಟೆಂಟ್ ಘೋಷಿಸಿದ ಕೇಂದ್ರ ಸರ್ಕಾರ
* ಅಂಚೆ ಇಲಾಖೆಯ ಕ್ರಮ ಸ್ವಾಗತಾರ್ಹ: ವಿರೂಪಾಕ್ಷಪ್ಪ ಬಳ್ಳಾರಿ
ಬ್ಯಾಡಗಿ(ಸೆ.01): ವಿಶ್ವವಿಖ್ಯಾತ ಮೆಣಸಿನಕಾಯಿ ಬೆಳೆಯನ್ನು ಇನ್ನಷ್ಟು ಪ್ರಚಾರಗೊಳಿಸಿ ವಿಶ್ವದ ಇನ್ನಿತರ ರಾಷ್ಟ್ರಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮುಂದಾದ ಮೆಣಸಿನಕಾಯಿ ಭಾವಚಿತ್ರವಿರುವ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ.
ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ದೇಶದಲ್ಲಿಯೇ ದ್ವಿತೀಯ ಸ್ಥಾನ ಪಡೆದಿರುವ ಗೆ ಇನ್ನಷ್ಟು ಪ್ರಚಾರ ದೊರಕಿಸುವ ಮತ್ತು ಗೌರವಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆ ಸಹಕಾರ ನೀಡಿ ಅಂಚೆ ಚೀಟಿ ಬಿಡುಗಡೆಗೊಳಿಸಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಬ್ಯಾಡಗಿ ಮೆಣಸಿನಕಾಯಿ ಪೇಟೆಂಟ್ ಘೋಷಿಸಿದ ಬೆನ್ನಲ್ಲೇ ಅಂಚೆ ಇಲಾಖೆ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ.
ಅಂಚೆ ಲಕೋಟೆ ಮೇಲೆ ರಾರಾಜಿಸಲಿದೆ ಕೊಪ್ಪಳದ ಕಿನ್ನಾಳ ಕಲೆ
ಮೆಣಸಿನಕಾಯಿ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿದ ಅಂಚೆ ಇಲಾಖೆಯ ಕ್ರಮ ಸ್ವಾಗತಾರ್ಹ ಪ್ರಧಾನಿ ನರೇಂದ್ರ ಮೋದಿವರಿಗೆ ಆಭಾರಿಯಾಗಿದ್ದೇವೆ ಎಂದು ಶಾಸಕ ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದ್ದಾರೆ.
ಶತಮಾನದ ಇತಿಹಾಸವಿರುವ ಬ್ಯಾಡಗಿ ಮಾರುಕಟ್ಟೆಇದೀಗ ಮತ್ತಷ್ಟು ಖ್ಯಾತಿಯ ಉತ್ತುಂಗಕ್ಕೇರಿದೆ. ಪ್ರಸಕ್ತ ವರ್ಷ. 2 ಸಾವಿರ ಕೋಟಿ ವಹಿವಾಟು ನಡೆದಿದ್ದು, ದೇಶದಲ್ಲೇ ದ್ವಿತೀಯ ಸ್ಥಾನ ಪಡೆದಿದೆ. ಬ್ಯಾಡಗಿ ಮೆಣಸಿನಕಾಯಿ ಗುರುತಿಸಿ ಕೇಂದ್ರ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿದ್ದು ಹೆಮ್ಮೆಯ ವಿಷಯ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ತಿಳಿಸಿದ್ದಾರೆ.