ಚರ್ಚ್‌ಗೆ ಹೋಗುತ್ತಿದ್ದ ಮಗಳನ್ನು ಮದುವೆಯಾಗೋದಾಗಿ ನಂಬಿಸಿ ವಂಚಿಸಿದ್ದಾರೆಂದು ಮಹಿಳೆಯೊಬ್ಬರು ಚರ್ಚ್ ಫಾದರ್ ವಿರುದ್ಧ ಆರೋಪಿಸಿದ್ದಾರೆ. ಯುವತಿ ಸಮಸ್ಯೆ ಕುರಿತ ವಿಶೇಷ ಆಸಕ್ತಿ ತೋರುತ್ತಿದ್ದ ಇವರು ಬಳಿಕ ಈಕೆಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದರು. ತಾನು ಪ್ರೀತಿಸುತ್ತಿದ್ದು, ಇಟಲಿಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿದ್ದರು.
ಶಿವಮೊಗ್ಗ(ಆ.31): ಚರ್ಚ್ ಫಾದರ್ ಓರ್ವರು ತಮ್ಮ ಪುತ್ರಿಯನ್ನು ಮದುವೆಯಾಗುವುದಾಗಿ ನಂಬಿಸಿ ಬಳಿಕ ವಂಚಿಸಿದ್ದಾರೆ ಎಂದು ಆರೋಪಿಸಿ ಯುವತಿಯ ತಾಯಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಘಟನೆ ನಡೆದಿದ್ದು ಚರ್ಚ್ ಫಾದರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಗಿ ಗುಡ್ಡದಲ್ಲಿರುವ ಸಂತ ಆಂತೋಣಿಯವರ ಚರ್ಚ್ ಫಾದರ್ ಆಲ್ವಿನ್ ವಿರುದ್ಧ ದೂರು ದಾಖಲಾಗಿದೆ. ಈ ಚರ್ಚ್‌ಗೆ ಬರುತ್ತಿದ್ದ ಯುವತಿಯೊಬ್ಬರ ಸಮಸ್ಯೆ ಕುರಿತ ವಿಶೇಷ ಆಸಕ್ತಿ ತೋರುತ್ತಿದ್ದ ಇವರು ಬಳಿಕ ಈಕೆಯೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದರು. ತಾನು ಪ್ರೀತಿಸುತ್ತಿದ್ದು, ಇಟಲಿಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿದ್ದರು.
ಜಿಮ್‌ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ: ಕ್ಯಾಮೆರಾ ಅಳವಡಿಸಲು ಆಗ್ರಹ
ಆದರೆ ಫಾದರ್ ಅವರು ಇತ್ತೀಚೆಗೆ ಒಬ್ಬರೇ ಇಟಲಿಗೆ ತೆರಳಿದ್ದು, ತನ್ನ ಮಗಳನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂದು ಭಾವಿಸಿದ ಯುವತಿಯ ತಾಯಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಆಕೆ ಚೇತರಿಸಿಕೊಂಡಿದ್ದು, ಬಳಿಕ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದಾರೆ. ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸು ದಾಖಲಾಗಿದೆ.
ಶಿವಮೊಗ್ಗ: ಹಬ್ಬ ಆಚರಣೆಯಲ್ಲಿ ಡಿಜೆ, ಬೈಕ್ ರ‍್ಯಾಲಿಗಿಲ್ಲ ಅವಕಾಶ