ಲಾರಿ ಚಾಲಕನಿಗೆ ಚಚ್ಚಿದ ತಹಸೀಲ್ದಾರ್‌

Kannadaprabha News   | Asianet News
Published : Sep 07, 2020, 07:42 AM ISTUpdated : Sep 07, 2020, 08:31 AM IST
ಲಾರಿ ಚಾಲಕನಿಗೆ ಚಚ್ಚಿದ ತಹಸೀಲ್ದಾರ್‌

ಸಾರಾಂಶ

ತಮ್ಮ ಕಾರಿಗೆ ಲಾರಿ ತಾಗಿಸಿದ್ದಕ್ಕೆ ಲಾರಿ ಚಾಲಕನಿಗೆ ತಹಸಿಲ್ದಾರ್ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ನಡೆದಿದೆ. 

ಚಿತ್ರದುರ್ಗ (ಸೆ.07): ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಹಸೀಲ್ದಾರ್‌ ಮಲ್ಲಿಕಾರ್ಜುನ್‌ ಅವರು ಲಾರಿ ಚಾಲಕನಿಗೆ ಹಿಗ್ಗಮುಗ್ಗಾ ಚಚ್ಚಿದ ಘಟನೆ ಶನಿವಾರ ರಾತ್ರಿ ಚಿತ್ರದುರ್ಗದಲ್ಲಿ ನಡೆದಿದ್ದು, ಈ ವಿಡಿಯೋ ವೈರಲ್‌ ಆಗಿದೆ. 

ತಹಸೀಲ್ದಾರ್‌ ಹೊಡೆದ ಪರಿಗೆ ಲಾರಿ ಚಾಲಕ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ. ನಾಗರಿಕರು ಆತನ ಸ್ಥಿತಿ ಕಂಡು ಮರುಗುತ್ತಿದ್ದರು. ತಹಸೀಲ್ದಾರ್‌ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾರೆ. ಅವರು ಕುಡಿದ ಬಗ್ಗೆ ವೈದ್ಯರಿಂದ ತಪಾಸಣೆ ಮಾಡಬೇಕು. ತಹಸೀಲ್ದಾರ್‌ ಎಂಬ ಮಾತ್ರಕ್ಕೆ ಸಿಕ್ಕಾಪಟ್ಟೆಹೊಡೆಯಬೇಕೆಂದೇನಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ಡ್ರಗ್ಸ್ ಮಾಫಿಯಾ: ಒಂದೊಂದೇ ಬಯಲಾಗ್ತಿದೆ ಮಾದಕ ಜಾಲದ ಸೀಕ್ರೆಟ್ .

ಲಾರಿ ಚಾಲಕ ಶ್ರೀಕಾಂತ್‌ ಮಾತನಾಡಿ, ತಹಸೀಲ್ದಾರ್‌ ಅವರು ರಾಂಗ್‌ ಸೈಡ್‌ನಲ್ಲಿ ಬಂದು ನನ್ನ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅವರನ್ನು ಪ್ರಶ್ನಿಸಲು ಹೋದಾಗ ಸಿಕ್ಕಾಪಟ್ಟೆಹೊಡೆದರು. ಕಲ್ಲಿನಿಂದ ಜಜ್ಜಿದ್ದಾರೆ. ಪೊಲೀಸ್‌ ಠಾಣೆಗೆ ಕರೆದರೂ ಬರುತ್ತಿಲ್ಲ. ಅವರು ಕುಡಿದಿದ್ದರು ಎಂದು ಆರೋಪಿಸಿದ್ದಾರೆ.

PREV
click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
ನನಗೆ ಎಚ್ಚರಿಕೆ ಕೊಡೋ ಮುನ್ನ ಹುಷಾರ್, ಕಾಮನ್‌ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ, ಪತ್ರ ಬರೆದವನಿಗೆ ಡಿಕೆಶಿ ವಾರ್ನಿಂಗ್!