ಬೇಸಿಗೆಯಲ್ಲಿ ಮನೆ ಹೊರಗೆ ಮಲಗಿದ್ದವನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಕಿರಾತಕರು

By Sathish Kumar KH  |  First Published Jun 5, 2024, 7:51 PM IST

ಬೇಸಿಗೆಯ ಸೆಕೆ ತಾಳಲಾರದೇ ಮನೆ ಹೊರಗೆ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ಚಿತ್ರದುರ್ಗದ ಗ್ರಾಮೀಣ ಭಾಗದಲ್ಲಿ ನಡೆದಿದೆ. 


ವರದಿ- ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.05):
ಬೇಸಿಗೆ ಕಾಲದದಲ್ಲಿ ಮನೆಯಲ್ಲಿ ಮಲಗಿದರೆ ಸೆಕೆ ಆಗುತ್ತದೆಂದು ಗ್ರಾಮೀಣ ಭಾಗದಲ್ಲಿ ಜನರು ಮನೆಯ ಮುಂಭಾಗದಲ್ಲಿ ರಾತ್ರಿ ಮಲಗೋದು ಸಹಜ. ಆದ್ರೆ ತನ್ನ ಪಾಡಿಗೆ ತಾನು ಎಂದಿನಂತೆ ಮನೆಯ ಮನೆಯ ಮುಂಭಾಗ ಮಲಗಿದ್ದ ವ್ಯಕ್ತಿಯೋರ್ವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಕೊಲೆಗೈದಿರೋ ಭೀಕರ ಘಟನೆ ಕೋಟೆನಾಡಿನಲ್ಲಿ ನಡೆದಿದೆ.

ಮನೆಯ ಒಳಗಡೆ ಸೆಕೆ ತಾಳಲಾರದೆ ಆರಾಮವಾಗಿ ನೈಸರ್ಗಿಕ ಗಾಳಿ ಬರುತ್ತದೆಂದು ಮನೆಯ ಹೊರಗೆ ಮಲಗಿದ್ದ ವ್ಯಕ್ತಿಯ ಮೇಲೆ ದೊಡ್ಡ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ. ಇತ್ತ ತನ್ನ ಮಗನ ಸಾವು ಕಣ್ಮುಂದೆಯೇ ಆಯ್ತಲ್ಲ ಎಂದು ತಾಯಿ ಗೋಳಡುತ್ತಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಕಂಬದದೇವರಹಟ್ಟಿ ಗ್ರಾಮದಲ್ಲಿ. ಗ್ರಾಮೀಣ ಭಾಗದಲ್ಲಿ ಜನರು ಮನೆಯ ಹೊರಾಂಗಣದಲ್ಲಿ ರಾತ್ರಿ ಊಟ ಆದ್ಮೇಲೆ ಮಲಗೋದು ಸಹಜ. ಅದೇ ರೀತಿಯೇ ಮೃತ ವ್ಯಕ್ತಿ ರಂಗಪ್ಪ (48) ಕೂಡ ರಾತ್ರಿ ಎಂದಿನಂತೆ ತಮ್ಮ ಮನೆಯ ಮುಂಭಾಗದಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದಾನೆ. ಆದ್ರೆ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಯಾರೋ ಇಬ್ಬರು ದುಷ್ಕರ್ಮಿಗಳು ಏಕಾಏಕಿ ತಲೆ ಮೇಲೆ ದೊಡ್ಡ ಪ್ರಮಾಣದ ಸೈಜು ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.

Tap to resize

Latest Videos

undefined

ಕೊಟ್ಟ ಮಾತಿನಂತೆ ಶಾಸಕ ಸ್ಥಾನಕ್ಕೆ ಪ್ರದೀಶ್ ಈಶ್ವರ್ ರಾಜೀನಾಮೆ; ವೈರಲ್ ಪತ್ರದ ಅಸಲಿಯತ್ತೇನು?

ಕೂಡಲೇ, ಆತನ ನರಳಾಟ ಕಂಡ ತಾಯಿ ದಿಢೀರನೇ ಹೊರ ಬಂದು ನೋಡುವಷ್ಟರಲ್ಲಿ ಇಬ್ಬರು ಕಿರಾತಕರು ಓಡಿ ಹೋಗಿದ್ದನ್ನು ನೋಡಿದ್ದಾರೆ. ಜೋರು ಧ್ವನಿಯಲ್ಲಿ ಅಳುತ್ತಲೇ ನೆರೆಹೊರೆಯವರನ್ನು ಸಹಾಯಕ್ಕೆ ಕರೆದಿದ್ದಾಳೆ. ಅಕ್ಕ ಪಕ್ಕದ ಮನೆಯವರು ಬರುವಷ್ಟಎಲ್ಲಿ ತನ್ನ ಮಗ ರಂಗಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ನಿಮ್ಮ ಮಗನ ಕೊಲೆಗೆ ನಿಖರ ಕಾರಣವೇನು ಎಂದು ಮೃತ ರಂಗಪ್ಪನ ತಾಯಿಗೆ ಕೇಳಿದರೆ, ನಾವು ಮೊದಲಿನಿಂದಲೂ ಯಾರ ತಂಟೆಗೂ ಹೋದವರಲ್ಲ. ಈ ಕೊಲೆಯನ್ನು ಯಾರು ಯಾವ ಲಾಭಕ್ಕಾಗಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಆರೋಪಿಗಳನ್ನು ಬಂಧಿಸಿ ನನ್ನ ಮಗನ ಸಾವಿಗೆ ನ್ಯಾಯ ಒದಗಿಸಿ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಹಳ್ಳಿಯಲ್ಲಿ ಕೊಲೆ ಪ್ರಕರಣ ಕಿವಿಗೆ ಬಿದ್ದು ಕೂಡಲೇ ಹೊಳಲ್ಕೆರೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಕುಟುಂಬಸ್ಥರು ಕೊಲೆ ಮಾಡಿದ ಬಗ್ಗೆ ಯಾರ ಮೇಲೆಯೂ ಅನುಮಾನ ಇಲ್ಲವೆಂದು ಹೇಳಿದ್ದರಿಂದ ತನಿಖೆಯ ಆಯಾಮವನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಆದರೆ, ಗ್ರಾಮದಲ್ಲಿ ಈ ರೀತಿಯ ಭೀಕರ ಕೊಲೆ ನಡೆದಿರೋದು ಜನತೆಯನ್ನು ಬೆಚ್ಚಿ ಬೀಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿನಿತ್ಯ ಮನೆಗಳ ಹೊರ ಭಾಗದಲ್ಲಿಯೇ ಮಲಗುತ್ತಾರೆ. ಆದ್ರೆ, ಈ ದಿನ ನಮ್ಮ ಗ್ರಾಮದಲ್ಲಿ ನಡೆದಿರುವ ಘಟನೆ ನಿಜಕ್ಕೂ ಮೈ ನಡುಗಿಸಿದೆ. 

ಉಡುಪಿಯಲ್ಲಿ ಶುರುವಾಯ್ತು 'ಗೋ ಬ್ಯಾಕ್ ಲಕ್ಷ್ಮಿ ಹೆಬ್ಬಾಳ್ಕರ್' ಅಭಿಯಾನ

ಒಟ್ಟಾರೆಯಾಗಿ ರಂಗಪ್ಪನನ್ನು ಇಷ್ಟೊಂದು ಭೀಕರವಾಗಿ ಹತ್ಯೆಗೈಯ್ಯಲು ಕಾರಣವಾದ್ರು ಏನಿರಬಹುದು ಎಂದು ಇಡೀ ಗ್ರಾಮಸ್ಥರಲ್ಲಿ ಗುಸು ಗುಸು ಶುರುವಾಗಿದೆ. ಆದ್ದರಿಂದ ಖಾಕಿ ಪಡೆ ಕೊಲೆಗೆ ನಿಖರ ಕಾರಣ ಕಂಡು ಹಿಡಿದು ರಂಗಪ್ಪ ಸಾವಿಗೆ ನ್ಯಾಯ ಕೊಡಿಸಲಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

click me!