ಜಿಟಿ ಜಿಟಿ ಮಳೆಗೆ ಕಂಗಾಲಾದ ಮೆಕ್ಕೆಜೋಳ ಬೆಳೆದ ಕ್ಯಾಸಾಪುರ ಗ್ರಾಮದ ರೈತ

By Ravi JanekalFirst Published Jul 27, 2023, 2:45 PM IST
Highlights

ಈ ಜಿಲ್ಲೆಯಲ್ಲಿ ಇದುವರೆಗೂ ಶೇ. 30% ಕೂಡ ಬಿತ್ತನೆ ಆಗಿಲ್ಲ. ಆದ್ರೆ ಬಿತ್ತನೆ ಮಾಡಿರೋ ಬೆಳೆಗಳಿಗೂ ಜಡಿ ಮಳೆ ಕಾಟ ಕೊಡ್ತಿದೆ. ವರುಣ ದೇವನನ್ನೇ ನಂಬಿ ಮೆಕ್ಕೆ ಜೋಳ ಬಿತ್ತನೆ ಮಾಡಿದ್ದ ರೈತನಿಗೆ ಸತತ ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಜಿಟಿ ಜಿಟಿ ಮಳೆರಾಯ ರೈತನ ಬದುಕನ್ನು ಬೀದಿಗೆ ತಂದಿದ್ದಾನೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜು.27) :  ಈ ಜಿಲ್ಲೆಯಲ್ಲಿ ಇದುವರೆಗೂ ಶೇ. 30% ಕೂಡ ಬಿತ್ತನೆ ಆಗಿಲ್ಲ. ಆದ್ರೆ ಬಿತ್ತನೆ ಮಾಡಿರೋ ಬೆಳೆಗಳಿಗೂ ಜಡಿ ಮಳೆ ಕಾಟ ಕೊಡ್ತಿದೆ. ವರುಣ ದೇವನನ್ನೇ ನಂಬಿ ಮೆಕ್ಕೆ ಜೋಳ ಬಿತ್ತನೆ ಮಾಡಿದ್ದ ರೈತನಿಗೆ ಸತತ ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಜಿಟಿ ಜಿಟಿ ಮಳೆರಾಯ ರೈತನ ಬದುಕನ್ನು ಬೀದಿಗೆ ತಂದಿದ್ದಾನೆ.

 ಹೊಲದಲ್ಲಿ ನಿಂತಿರೊ ಮಳೆ ನೀರು. ಶೀತ ಹೆಚ್ಚಾಗಿ ಕೊಳೆಯುತ್ತಿರುವ ಜೋಳದ ಪೈರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಕ್ಯಾಸಾಪುರ ಗ್ರಾಮದಲ್ಲಿ. ಚಿತ್ರದುರ್ಗ, ಹೊಳಲ್ಕೆರೆ ಹಾಗು ಹೊಸದುರ್ಗ ತಾಲ್ಲೂಕುಗಳ ಬಹುತೇಕ ರೈತರು ಪ್ರತಿವರ್ಷ ಬಿಳಿ ಜೋಳ ಹಾಗೂ ಮೆಕ್ಕೆಜೋಳವನ್ನು  ಹೆರಳವಾಗಿ ಬೆಳೆಯುತ್ತಾರೆ. ಬಿತ್ತನೆ ವೇಳೆ ಭೂಮಿ ತಂಪಾಗಿದ್ರೆ ಸಾಕು, ಕಡಿಮೆ ಖರ್ಚಿನಲ್ಲಿ ಅಪಾರ‌ ಲಾಭ ಕೊಡುವ  ಆಹಾರ ಬೆಳೆಯಾದ ಜೋಳವನ್ನೇ ಬೆಳೆದು ಇಲ್ಲಿನ ರೈತರು ತಮ್ಮ ದೈನಂದಿನ ಬದುಕು ಕಟ್ಟಿ ಕೊಂಡಿದ್ದಾರೆ. ಆದ್ರೆ ಕಳೆದ ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ವರುಣ ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾನೆ. 

 

Wildlife: ಭಾಗವತಿ ಬಳಿ ಒಂಟಿ ಸಲಗದ ಕಾಟ, ಕಬ್ಬು, ಬತ್ತದ ಬೆಳೆ ನಾಶ

ತಂಪಾದ ವಾತಾವರಣದಿಂದಾಗಿ ಜೋಳದ ಪೈರಿಗೆ ಕೀಟಭಾದೆ ಹೆಚ್ಚಾಗಿದೆ. ಪೈರು ಕೊಳೆತು ನಾಶವಾಗ್ತಿದೆ. ಹೀಗಾಗಿ ಸಾಲ ಮಾಡಿ‌ ಜೋಳ‌ ಬೆಳೆಯಲು ಮುಂದಾಗಿದ್ದ ರೈತರು   ಕಂಗಾಲಾಗಿದ್ದಾರೆ. ಅಲ್ಲದೇ ಫಸಲ್ ಭಿಮಾ ಯೋಜನೆಯಡಿ ಬೆಳೆವಿಮೆ  ಕಟ್ಟಿದ್ರೂ ಸಹ ನಯಾಪೈಸೆ ಪರಿಹಾರ ಸಿಗದೇ ರೈತರಿಗೆ ದಿಕ್ಕು ತೋಚದಂತಾಗಿದೆ. ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಎಲ್ಲೆಡೆ  ಮಳೆರಾಯನ ಆರ್ಭಟ ಜೋರಾಗಿದೆ.‌ ಹೀಗಾಗಿ ಕೆರೆ ಕುಂಟೆಗಳು ಭರ್ತಿಯಾಗಿವೆ.‌‌ ಆದರೆ‌ ಕೋಟೆನಾಡಲ್ಲಿ ಮಾತ್ರ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಯಾವುದೇ ಲಾಭವಾಗ್ತಿಲ್ಲ. ಬದಲಾಗಿ ಸಮಸ್ಯೆ ತಲೆದೂರಿದೆ, ಕೃಷಿ ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ತಂಪು ಹೆಚ್ಚಾಗಿ ಬೆಳೆಹಾನಿ‌ ತೀವ್ರವಾಗಿದೆ. ಹೀಗಾಗಿ ಬಿತ್ತನೆಗೆ ಮಾಡಿದ ಸಾಲ ತೀರಿಸಲಾಗದೇ ಕಂಗಾಲಾಗಿರೊ ರೈತರು, ಪ್ರಕೃತಿ ವಿಕೋಪ ದಿಂದಾಗಿರುವ ನಷ್ಟಕ್ಕೆ ಸರ್ಕಾರದಿಂದ  ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.

 

ಮಳೆ ಅಬ್ಬರ ಅವಘಡಗಳ ಸರಣಿ, ಮುಳ್ಳಯ್ಯನಗಿರಿಯಲ್ಲಿ ಭೂ ಕುಸಿತ , ಪ್ರವಾಸಿಗರಿಗೆ ನಿರ್ಬಂಧ

ಒಟ್ಟಾರೆ ಬರದನಾಡಲ್ಲೂ ನಿರಂತರ‌ ಮಳೆಯಿಂದಾಗಿ ರೈತರ ಬೆಳೆ ಹಾನಿಗೊಳಗಾಗಿವೆ.‌ ಹೀಗಾಗಿ ರೈತರು ಸಂಕಷ್ಟಕ್ಕೆ‌ ಸಿಲುಕಿದ್ದಾರೆ. ಆದ್ದರಿಂದ ರೈತರಿಗೆ ಸೂಕ್ತ ಪರಿಹಾರ‌ ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

click me!